Published on: June 8, 2024

ಪ್ಯಾರೆಂಗ್ಯೋಡಾಂಟಿಯಮ್ ಆಲ್ಬಮ್ ಸಮುದ್ರ ಶಿಲೀಂಧ್ರ

ಪ್ಯಾರೆಂಗ್ಯೋಡಾಂಟಿಯಮ್ ಆಲ್ಬಮ್ ಸಮುದ್ರ ಶಿಲೀಂಧ್ರ

ಸುದ್ದಿಯಲ್ಲಿ ಏಕಿದೆ? ಸಾಗರದಲ್ಲಿ ಪ್ಲಾಸ್ಟಿಕ್ ಪಾಲಿಥೀನ್ (PE) ಅನ್ನು ನಾಶಗೊಳಿಸುವ ಪ್ಯಾರೆಂಗ್ಯೋಡಾಂಟಿಯಮ್ (Parengyodontium) ಆಲ್ಬಮ್ ಎಂಬ ಸಮುದ್ರ ಶಿಲೀಂಧ್ರವನ್ನು ಕಂಡುಹಿಡಿಯಲಾಗಿದೆ.

ಶಿಲೀಂಧ್ರದ ಬಗ್ಗೆ:

  • ಇದು ಸಮುದ್ರದ ಶಿಲೀಂಧ್ರವಾಗಿದ್ದು ಅದು ಪ್ಲಾಸ್ಟಿಕ್ ಪಾಲಿಥೀನ್ ಅನ್ನು ನಾಶಪಡಿಸಬಲ್ಲದು, ಇದು ಸಾಗರದಲ್ಲಿನ ಅತ್ಯಂತ ಸಾಮಾನ್ಯವಾದ ಪ್ಲಾಸ್ಟಿಕ್ ಆಗಿದೆ
  • ಇದನ್ನು ರಾಯಲ್ ನೆದರ್ಲ್ಯಾಂಡ್ಸ್ ಇನ್ಸ್ಟಿಟ್ಯೂಟ್ ಫಾರ್ ಸೀ ರಿಸರ್ಚ್ (NIOZ) ನ ಸಾಗರ ಸೂಕ್ಷ್ಮ ಜೀವಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ.
  • ಈ ಜೈವಿಕ ಪರಿಹಾರ(ಬಯೋರೆಮಿಡೀಷನ್)ಪ್ರಕ್ರಿಯೆಯಲ್ಲಿ, PE- ನಲ್ಲಿರುವ ಇಂಗಾಲವನ್ನು ಶಿಲಿಂಧ್ರ ಆಲ್ಬಮನ ದ್ರವ್ಯರಾಶಿಯಾಗಿ ಪರಿವರ್ತಿಸಲಾಗುತ್ತದೆ, ಇದು ಆ ಶಿಲಿಂಧ್ರದ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
  • UV ಸೂರ್ಯನ ಬೆಳಕಿನಿಂದ PE ಯ ಫೋಟೊಡಿಗ್ರೇಡೇಶನ್(ಬೆಳಕಿನಿಂದ ವಸ್ತುಗಳಲ್ಲಾಗುವ ಬದಲಾವಣೆಯಾಗಿದೆ) ಈ ಪ್ರಕ್ರಿಯೆಗೆ ನಿರ್ಣಾಯಕವಾಗಿದೆ.

ನಿಮಗಿದು ತಿಳಿದಿರಲಿ

  • ಮಾನವರು ವಾರ್ಷಿಕವಾಗಿ 400 ಶತಕೋಟಿ ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತಾರೆ, ಅದರಲ್ಲಿ ಹೆಚ್ಚಿನವು ಸಾಗರದಲ್ಲಿ ಕೊನೆಗೊಳ್ಳುತ್ತದೆ.
  • 2024 ರ ಭೂ ದಿನದ ಥೀಮ್ ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’