Published on: June 14, 2024

ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ

ಭಾರಲೋಹ ಬೇರ್ಪಡಿಸಿ ಶುದ್ಧ ನೀರು ಕೊಡುವ ಸಾಧನ

ಸುದ್ದಿಯಲ್ಲಿ ಏಕಿದೆ? ಅಂತರ್ಜಲದಲ್ಲಿ ಮಿಳಿತವಾಗಿರುವ ಮತ್ತು ಮಾನವ ದೇಹಕ್ಕೆ ಅತ್ಯಂತ ಅಪಾಯಕಾರಿ ಎನಿಸಿರುವ ಭಾರಲೋಹದ ಅಂಶ (ಆರ್ಸೆನಿಕ್) ಬೇರ್ಪಡಿಸುವ ಹೊಸ ಪರಿಹಾರ ವಿಧಾನವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮುಖ್ಯಾಂಶಗಳು

  • ಜೈವಿಕ ನಿರ್ಜಲೀಕರಣ ವಿಧಾನಕ್ಕೆ ಹಸುವಿನ ಸಗಣಿಯಲ್ಲಿ ಸಿಗುವ ಒಂದು ಬಗೆಯ ಬ್ಯಾಕ್ಟೀರಿಯಾ ಬಳಸಲಾಗುತ್ತದೆ.
  • ದೇಶದ 21 ರಾಜ್ಯಗಳ 133 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 0.01 ಮಿಲಿಗ್ರಾಮ್ನಷ್ಟು ಆರ್ಸೆನಿಕ್ ಇದೆ.
  • 23 ರಾಜ್ಯಗಳ 223 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1.5 ಮಿಲಿಗ್ರಾಮ್ನಷ್ಟು ಫ್ಲೋರೈಡ್ ಅಂಶ ಇದೆ. ಇದು ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್‌ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಪ್ರಮಾಣಕ್ಕಿಂತಲೂ ಅಧಿಕವಾಗಿದೆ

ಉದ್ದೇಶ

ನೀರಿನಿಂದ ಬೇರ್ಪಡಿಸಿದ ಭಾರಲೋಹವನ್ನು ಪರಿಸರಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲು ಸಾಧ್ಯವಿರುವುದು ಇದರ ವಿಶೇಷ. ವಿಷಕಾರಿ ಭಾರಲೋಹದಿಂದ ಕೂಡಿದ ಕೆಸರನ್ನು ಎಲ್ಲೆಂದರಲ್ಲಿ ಹರಿಸುವುದು, ಗುಂಡಿಗಳಲ್ಲಿ ತುಂಬಿ ಮತ್ತೆ ಭೂಮಿಯೊಳಗೆ ಹೋಗುವುದನ್ನೂ ಈ ಸಾಧನದಿಂದ ತಪ್ಪಿಸಬಹುದಾಗಿದೆ.