Published on: June 14, 2024

ಸರೋದ್ ವಾದಕ ರಾಜೀವ ತಾರಾನಾಥ್

ಸರೋದ್ ವಾದಕ ರಾಜೀವ ತಾರಾನಾಥ್

ಸುದ್ದಿಯಲ್ಲಿ ಏಕಿದೆ? ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ, ಉಸ್ತಾದ್ ಆಲಿ ಅಕ್ಬರ್ ಖಾನ್ ಅವರ ಶಿಷ್ಯ ಪಂಡಿತ್ ರಾಜೀವ್ ತಾರಾನಾಥ್ ನಿಧನ ಹೊಂದಿದ್ದಾರೆ.

ರಾಜೀವ್ ತಾರಾನಾಥ್

  • ಜನನ: ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅಕ್ಟೋಬರ್ 17
  • ತಂದೆ ತಾಯಿ: ತಾರಾನಾಥ– ಸುಮತಿಬಾಯಿ
  • ಸಿಡ್ನಿಯ ಒಪೇರಾ ಹೌಸ್ನಲ್ಲಿ ಸಂಗೀತ ಕಛೇರಿ ನೀಡಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
  • ಯೆಮನ್ ದೇಶದ ಏಡನ್ ದೂರದರ್ಶನ ಕೇಂದ್ರ ಅವರ ಬಗ್ಗೆ ‘ಫಿನ್ನನ್ ಮಿನ್ ಅಲ್ ಹಿಂದ್’ ಸಾಕ್ಷ್ಯ ಚಿತ್ರ ನಿರ್ಮಿಸಿ ಗೌರವಿಸಿದೆ.
  • ಕರ್ನಾಟಕ ಸರ್ಕಾರವೂ 1983ರಲ್ಲಿ ‘ಸರೋದ್ ಸಾಮ್ರಾಟ ಡಾ.ರಾಜೀವ ತಾರನಾಥ’ ಸಾಕ್ಷ್ಯ ಚಿತ್ರ ತಯಾರಿಸಿದೆ.
  • 1995ರಿಂದ 2005ರವರೆಗೆ ಕ್ಯಾಲಿಫೋರ್ನಿಯಾ ವಿವಿಯ ಕಲಾವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.

ಅವರಿಗೆ ಸಂದ ಪ್ರಶಸ್ತಿಗಳು

1993ರಲ್ಲಿ ಕರ್ನಾಟಕ ಕಲಾಶ್ರೀ, 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಚೌಡಯ್ಯ ಪ್ರಶಸ್ತಿ, 2000ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, 2018ರಲ್ಲಿ ಸಂಗೀತ್ ವಿದ್ವಾನ್, ನಾಡೋಜ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ, 2019ರಲ್ಲಿ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 1975; ‘ಪಲ್ಲವಿ’ ಸಿನಿಮಾಕ್ಕೆ ರಾಷ್ಟ್ರೀಯ ಅತ್ಯುತ್ತಮ ಸಂಗೀತ ನಿರ್ದೇ ಶನ ಪ್ರಶಸ್ತಿ

ತಾರಾನಾಥರ ಕಲಿಕೆ

1938–42: ತಂದೆ ಪಂಡಿತ ತಾರಾನಾಥರಿಂದ ತಬಲಾ ಹಾಗೂ ಆಯುರ್ವೇದ, ಸಾವನೂರು ಕೃಷ್ಣಚಾರ್ಯ ವೆಂಕಟರಾವ್ ರಾಮದುರ್ಗಕರ್, ಪಂಚಾಕ್ಷರಿ ಗವಾಯಿ ಅವರಿಂದ ಹಿಂದೂಸ್ಥಾನಿ ಸಂಗೀತ ಕಲಿಕೆ

1942–48: ಗ್ವಾಲಿಯರ್ ಘರಾನಾದ ಶಂಕರರಾವ್ ದೇವಗಿರಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಲಿಕೆ