Published on: July 3, 2024
ಬೆರಿಲ್ ಹರಿಕೇನ್
ಬೆರಿಲ್ ಹರಿಕೇನ್
ಸುದ್ದಿಯಲ್ಲಿ ಏಕಿದೆ? ಐಸಿಸಿ ವಿಶ್ವ ಟಿ20 ಕಪ್‌ನಲ್ಲಿ ಜಯಗಳಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡವು ಬೆರಿಲ್ ಹರಿಕೇನ್ (ಚಂಡಮಾರುತ)ದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದೆ.
ಮುಖ್ಯಾಂಶಗಳು
- ಇದು 4 ಮತ್ತು 5 ನೇ ವರ್ಗ(ಜಮೈಕಾ ಕಡೆಗೆ ತಿರುಗಿ ಗರಿಷ್ಠ ವೇಗದಲ್ಲಿ ಬೀಸುತ್ತಿದೆ)ಕ್ಕೆ ಸೇರಿದ ಚಂಡಮಾರುತವಾಗಿದೆ
- 2024ರ ಅಟ್ಲಾಂಟಿಕ್ ಋತುವಿನ ಮೊದಲ ಚಂಡಮಾರುತವಾಗಿದೆ
- ಗಂಟೆಗೆ 130 ಮೈಲುಗಳಷ್ಟು (ಗಂಟೆಗೆ 209 ಕಿಲೋಮೀಟರ್) ಬೀಸುತ್ತಿದೆ
- ಇದು ಪ್ರಸ್ತುತ ವೆಸ್ಟ್ ಇಂಡೀಸ್‌ನ ಭಾಗವಾಗಿರುವ ಮತ್ತು ಬಾರ್ಬಡೋಸ್, ಗ್ರೆನಡಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊವನ್ನು ಒಳಗೊಂಡಿರುವ ಲೆಸ್ಸರ್ ಆಂಟಿಲೀಸ್‌ನ ದಕ್ಷಿಣ ಭಾಗವಾದ ದ್ವೀಪಗಳ ಮೂಲಕ ಬೀಸುತ್ತಿದೆ
- ಸಫಿರ್-ಸಿಂಪ್ಸನ್ ಹರಿಕೇನ್ ವಿಂಡ್ ಸ್ಕೇಲ್ (SSHWS) ಚಂಡಮಾರುತಗಳನ್ನು , ಸರಾಸರಿ ಒಂದು ನಿಮಿಷದ ಮಧ್ಯಂತರದಲ್ಲಿ 10 ಮೀಟರ್ ನೆಲದಿಂದ ಮೇಲೆ ಬೀಸುವ ಅವುಗಳ ನಿರಂತರ ಗಾಳಿಯ ವೇಗದ ಆಧಾರದ ಮೇಲೆ ಐದು ವರ್ಗಗಳಾಗಿ ವರ್ಗೀಕರಿಸುತ್ತದೆ
ವರ್ಗ 1: 74-95 mph
ವರ್ಗ 2: 96–110 mph
ವರ್ಗ 3: 111–129 mph
ವರ್ಗ 4: 130–156 mph
ವರ್ಗ 5: 157 mph ಗಿಂತ ಹೆಚ್ಚು
ಹರಿಕೇನ್ ಮತ್ತು ಉಷ್ಣವಲಯದ ಚಂಡಮಾರುತದ ನಡುವಿನ ವ್ಯತ್ಯಾಸವೇನು?
- ಯಾವುದೇ ವ್ಯತ್ಯಾಸವಿಲ್ಲ. ಅವು ಸಂಭವಿಸುವ ಸ್ಥಳವನ್ನು ಅವಲಂಬಿಸಿ, ಚಂಡಮಾರುತಗಳನ್ನು ಟೈಫೂನ್ ಅಥವಾ ಸೈಕ್ಲೋನ್ ಎಂದು ಕರೆಯಬಹುದು.
- NASA ಪ್ರಕಾರ, ಈ ಎಲ್ಲಾ ರೀತಿಯ ಚಂಡಮಾರುತಗಳ ವೈಜ್ಞಾನಿಕ ಹೆಸರು ಉಷ್ಣವಲಯದ ಚಂಡಮಾರುತಗಳು.
- ಅಟ್ಲಾಂಟಿಕ್ ಮಹಾಸಾಗರ ಅಥವಾ ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲೆ ಉಂಟಾಗುವ ಉಷ್ಣವಲಯದ ಚಂಡಮಾರುತಗಳನ್ನು ಹರಿಕೇನ್ ಗಳು ಎಂದು ಕರೆಯಲಾಗುತ್ತದೆ ಮತ್ತು ವಾಯುವ್ಯ ಪೆಸಿಫಿಕ್ನಲ್ಲಿ(ಪಶ್ಚಿಮ ಉತ್ತರ ಪೆಸಿಫಿಕ್, ಜಪಾನ್, ಚೀನಾ ಮತ್ತು ಫಿಲಿಪೈನ್ಸ್ ಸುತ್ತಲೂ) ರೂಪುಗೊಂಡವುಗಳನ್ನು ಟೈಫೂನ್ಗಳು ಎಂದು ಕರೆಯಲಾಗುತ್ತದೆ.
- ಬಂಗಾಳಕೊಲ್ಲಿ ಅಥವಾ ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಉಷ್ಣವಲಯದ ಚಂಡಮಾರುತಗಳನ್ನು ಸೈಕ್ಲೋನ್ ಗಳು ಎಂದು ಕರೆಯಲಾಗುತ್ತದೆ.