Published on: July 5, 2024
ಜಪಾನ್ ದೇಶದ ಹೊಸ ನೋಟು
ಜಪಾನ್ ದೇಶದ ಹೊಸ ನೋಟು
ಸುದ್ದಿಯಲ್ಲಿ ಏಕಿದೆ? 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಪಾನ್ ಹೊಸ ನೋಟುಗಳನ್ನು ಚಲಾವಣೆಗೆ ಬಿಡುಗಡೆ ಮಾಡಿದೆ. ಹೊಸ ನೋಟುಗಳು 3 – ಡಿ ಹಾಲೊಗ್ರಾಮ್ ತಂತ್ರಜ್ಞಾನವನ್ನು ಹೊಂದಿವೆ. ಜಗತ್ತಿನಲ್ಲೇ ಪೇಪರ್ ಕರೆನ್ಸಿಯಲ್ಲಿ ಈ ತಂತ್ರಜ್ಞಾನವನ್ನು ಜಾರಿಗೆ ತಂದ ಮೊದಲ ದೇಶವಾಗಿದೆ.
ಮುಖ್ಯಾಂಶಗಳು
- ಗ್ರಾಹಕರು ಮತ್ತು ವ್ಯವಹಾರಗಳಿಗೆ ಹೊಸ ವಿನ್ಯಾಸಕ್ಕೆ ಹೊಂದಿಕೆಯಾಗಲು ಅನುವು ಮಾಡಿಕೊಡುವ ದೃಷ್ಟಿಯಿಂದ ಜಪಾನ್ 2019ರಲ್ಲೇ ಈ ನೋಟುಗಳ ವಿನ್ಯಾಸವನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ತಯಾರಿ ನಡೆಸಲು ಐದು ವರ್ಷಗಳ ಸುದೀರ್ಘ ಕಾಲವಕಾಶವನ್ನು ನೀಡಿತ್ತು.
- 10 ಸಾವಿರ ಯೆನ್, 5 ಸಾವಿರ ಯೆನ್ ಹಾಗೂ 1 ಸಾವಿರ ಯೆನ್ ನೋಟುಗಳು ಯಾವುದೇ ಕಾರಣಕ್ಕೂ ನಕಲು ಮಾಡದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
- ಈಗಾಗಲೇ ಬಳಕೆಯಲ್ಲಿರುವ ಕರೆನ್ಸಿ ಕೂಡ ಮಾನ್ಯವಾಗುತ್ತದೆ.
ಉದ್ದೇಶ
ನಕಲಿ ನೋಟುಗಳ ಹಾವಳಿ ತಡೆಯಲು ನೂತನ ನೋಟುಗಳಲ್ಲಿ 3 – ಡಿ ಹಾಲೊಗ್ರಾಮ್ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ. ಇದು ಜಪಾನ್ ಆರ್ಥಿಕತೆಗೆ ಶಕ್ತಿ ತುಂಬಲು ನೆರವು ನೀಡುತ್ತದೆ
ನೋಟು ಮತ್ತು ಅದರ ಮೇಲಿರುವ ವ್ಯಕ್ತಿಯ ಚಿತ್ರ
- 10,000 ಯೆನ್ ನೋಟು: ಸುಮಾರು 62 ಡಾಲರ್ ಮೌಲ್ಯ, ಜಪಾನ್‌ನಲ್ಲಿ ಪ್ರಥಮ ಬ್ಯಾಂಕ್ ಹಾಗೂ ಷೇರು ವಿನಿಯಮ ಕೇಂದ್ರವನ್ನು ಸ್ಥಾಪಿಸಿದ, ಜಪಾನ್‌ನ ಬಂಡವಾಳಶಾಹಿ ಪಿತಾಮಹ ಎಂದೇ ಕರೆಯಲಾಗುವ ಐಚಿ ಶಿಬುಸಾವಾ ಅವರ ಭಾವಚಿತ್ರವನ್ನು ಹೊಂದಿದೆ.
- 5,000 ಯೆನ್ ನೋಟು: 30 ಡಾಲರ್ ಮೌಲ್ಯ, ಸ್ತ್ರೀವಾದಿ ಹಾಗೂ ಜಪಾನ್‌ನಲ್ಲಿ ಪ್ರಥಮ ಮಹಿಳಾ ವಿವಿಯನ್ನು ಸ್ಥಾಪಿಸಿದ ಉಮೆಕೊ ತ್ಸುಡಾ ಅವರ ಚಿತ್ರವನ್ನು ಹೊಂದಿದೆ.
- 1,000 ಯೆನ್ ನೋಟು: ಟೆಟನಸ್‌ಗೆ ಔಷಧ ಕಂಡು ಹಿಡಿದ ಶಿಬಾಸಾಬುರೊ ಕಿಟಾಸಾಟೊ ಭಾವಚಿತ್ರವಿದೆ.