Published on: July 13, 2024

ವಿಝಿಂಜಂ ಅಂತಾರಾಷ್ಟ್ರೀಯ ಬಂದರು

ವಿಝಿಂಜಂ ಅಂತಾರಾಷ್ಟ್ರೀಯ ಬಂದರು

ಸುದ್ದಿಯಲ್ಲಿ ಏಕಿದೆ? ಕೇರಳದ ವಿಝಿಂಜಂನಲ್ಲಿ ನೆಲೆಗೊಂಡಿರುವ ಭಾರತದ ಮೊದಲ ಆಳ ಸಮುದ್ರದ ಮೆಗಾ ಟ್ರಾನ್ಸ್‌ಶಿಪ್‌ಮೆಂಟ್‌ ಬಂದರು ಮೊದಲ ಸರಕು ಸಾಗಣೆ ಹಡಗು ವಿಝಿಂಜಂಗೆ ಬರುವುದರೊಂದಿಗೆ ಬಂದರು ಕಾರ್ಯಾರಂಭಗೊಂಡಿದೆ.

ಮುಖ್ಯಾಂಶಗಳು

  • ಇಲ್ಲಿಗೆ ಬಂದ ಮೊದಲ ಸರಕು ಸಾಗಣೆ ಹಡಗು ಎರಡು ಸಾವಿರ ಕಂಟೈನರ್‌ಗಳಿರುವ ಬೃಹತ್‌ ಹಡಗು, ವಿಶ್ವದ ಎರಡನೇ ಅತಿ ದೊಡ್ಡ ಹಡಗು ಕಂಪನಿಯಾದ ಮೆಸ್ಕಿನ್‌ನ ಚಾರ್ಟರ್ಡ್‌ ಮದರ್‌ಶಿಪ್‌ಗೆ ಸೇರಿದೆ. ಹಡಗು ಚೀನಾದ ಕ್ಸಿಯಾಮೆನ್‌ ಬಂದರಿನಿಂದ ಹೊರಟು ಕೊಲಂಬೊ ಮೂಲಕ ವಿಝಿಂಜಂಗೆ ಬಂದಿದೆ.
  • ಈ ಬಂದರು ದಕ್ಷಿಣ ಭಾರತದ ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯ ನೆಯ್ಯಾಟ್ಟಿಂಗರ ತಾಲೂಕಿನಲ್ಲಿದೆ.
  • 2015ರ ಡಿಸೆಂಬರ್‌ 5ರಂದು ನೂತನ ಬಂದರಿನ ಕಾಮಗಾರಿ ಆರಂಭಗೊಂಡಿತ್ತು.
  • ಮದ್ರಾಸ್‌ ಐಐಟಿಯ ಸಾಫ್ಟ್‌ವೇರ್‌: ಈ ನೂತನ ಬಂದರಿನಲ್ಲಿ ಐಐಟಿ ಮದ್ರಾಸ್‌ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಪೋರ್ಟ್‌ ನ್ಯಾವಿಗೇಷನ್‌ ಸೆಂಟರ್‌ನಿಂದ ನಿಯಂತ್ರಿಸಲಾಗುತ್ತದೆ.
  • 40 ವರ್ಷಗಳ ಒಪ್ಪಂದ: ಬಂದರು ಸಂಪೂರ್ಣ ಕೇರಳ ಸರಕಾರದ ಒಡೆತನದಲ್ಲಿದೆ. ಇದರ ಅಭಿವೃದ್ಧಿ ಮತ್ತು ಅನುಷ್ಠಾನ ಕಂಪನಿಯಾಗಿ ಅದಾನಿ ವಿಝಿಂಜಂ ಪ್ರೈವೇಟ್‌ ಲಿಮಿಟೆಡ್‌ ಬಂದರನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಕೇರಳ ಸರಕಾರದೊಂದಿಗೆ 40 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಿ ಭಾರತದ ಮಹತ್ವ

  • ಟ್ರಾನ್ಸ್‌ಶಿಪ್‌ಮೆಂಟ್ ನಿರ್ವಹಣೆಯಲ್ಲಿ ಪ್ರಮುಖ ಪೋರ್ಟ್‌ಗಳಿಗೆ ($200-220 ಮಿಲಿಯನ್) ಸಂಭವನೀಯ ಆದಾಯ ನಷ್ಟವನ್ನು ಪರಿಹರಿಸಿ ಮತ್ತು ಪೋರ್ಟ್ ಚಟುವಟಿಕೆಯನ್ನು ಹೆಚ್ಚಿಸುವುದ್ .
  • ವಿದೇಶಿ ವಿನಿಮಯ ಮೀಸಲು ಉಳಿತಾಯ ಮತ್ತು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವುದು.
  • ಅಭಿವೃದ್ಧಿ ಸಂಬಂಧಿತ ಸರಕು ಸಗಾನೆ ಮೂಲಸೌಕರ್ಯ  ಮತ್ತು ಉದ್ಯೋಗ ಸೃಷ್ಟಿ.

ಭಾರತದಲ್ಲಿ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ತೆಗೆದುಕೊಳ್ಳಲಾದ ಇತರ ಉಪಕ್ರಮಗಳು

  • ಕೊಚ್ಚಿನ್ ಬಂದರು ಪ್ರಾಧಿಕಾರ (COPA) ಕೊಚ್ಚಿನ್‌ನಲ್ಲಿ ಅಂತರರಾಷ್ಟ್ರೀಯ ಕಂಟೈನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗ್ರೇಟ್ ನಿಕೋಬಾರ್ ದ್ವೀಪದಲ್ಲಿರುವ ಗಲಾಥಿಯಾ ಕೊಲ್ಲಿಯನ್ನು ಅಂತರರಾಷ್ಟ್ರೀಯ ಕಂಟೈನರ್ ಟ್ರಾನ್ಸ್‌ಶಿಪ್‌ಮೆಂಟ್ ಪೋರ್ಟ್ ಅಭಿವೃದ್ಧಿಗಾಗಿ ಗುರುತಿಸಲಾಗಿದೆ.