Published on: September 15, 2021
ಸುದ್ಧಿ ಸಮಾಚಾರ 15 ಸೆಪ್ಟೆಂಬರ್ 2021
ಸುದ್ಧಿ ಸಮಾಚಾರ 15 ಸೆಪ್ಟೆಂಬರ್ 2021
- ದೇಶದಲ್ಲಿನ ವಿವಿಧ ರಾಜ್ಯಗಳ ಗುಪ್ತಚರ ಇಲಾಖೆಗಳನ್ನು ಒಂದೇ ರಾಷ್ಟ್ರೀಯ ಜಾಲದ ಅಡಿಯಲ್ಲಿ ತಂದು, ಆಧುನಿಕ ತಂತ್ರಜ್ಞಾನ ಆಧರಿಸಿ ಕ್ಷಣ ಮಾತ್ರದಲ್ಲಿ ದಾಳಿ, ಉಗ್ರರ ಚಟುವಟಿಕೆಗಳ ಮಾಹಿತಿ ರವಾನಿಸಲು ಅನುಕೂಲವಾಗುವಂತಹ ‘ನ್ಯಾಟ್ ಗ್ರಿಡ್’ (ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್) ಶೀಘ್ರದಲ್ಲಿಯೇ ದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ.
- ಧ್ವನಿ ಆಧಾರಿತ ಹಣಕಾಸು ವಹಿವಾಟು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಧ್ವನಿ ಆಧಾರಿತ ಪಾವತಿಗಳನ್ನು ನಡೆಸಲು ಬೆಂಗಳೂರು ಮೂಲದ ಟೋನ್ಟ್ಯಾಗ್ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಒಪ್ಪಿಗೆ ನೀಡಿದೆ.
- ಅಮೆರಿಕ ಮತ್ತು ಭಾರತ ನಡುವೆ ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ದಿಗೊಳಿಸುವ ‘ಅಮೆರಿಕ–ಭಾರತ ಹವಾಮಾನ ಮತ್ತು ಶುದ್ಧ ಇಂಧನ ಪಾಲುದಾರಿಕೆ(ಸಿಸಿಇಪಿ)’ ಮಸೂದೆಯೊಂದನ್ನು ಅಮೆರಿಕ ಸಂಸದ ರಾಬರ್ಟ್ ಮೆಂಡೇಜ್ ಅವರು ಸೆನೆಟ್ನಲ್ಲಿ ಮಂಡಿಸಿದ್ದಾರೆ.
- ಅಮೆರಿಕದ ಗ್ರೀನ್ ಪೀಸ್ ಸ್ವಯಂ ಸೇವಾ ಸಂಸ್ಥೆ ಸಿದ್ಧಪಡಿಸಿರುವ ‘ದಿ ಕ್ಲೈಮೇಟ್ ಎಮರ್ಜೆನ್ಸಿ ಅನ್ಪ್ಯಾಕ್ಡ್: ಹೌ ಕನ್ಸ್ಯೂಮರ್ ಗೂಡ್ಸ್ ಕಂಪನೀಸ್ ಆರ್ ಫ್ಯೂಯೆಲಿಂಗ್ ಬಿಗ್ ಆಯಿಲ್ಸ್ ಪ್ಲಾಸ್ಟಿಕ್ ಎಕ್ಸ್ಪ್ಯಾನ್ಷನ್‘ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.
- ಭಾರತದಲ್ಲಿ ಸೆಪ್ಟೆಂಬರ್ 15 ರಂದು ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಇಂಜಿನಿಯರ್ಗಳ ದಿನವನ್ನು ಆಚರಿಸಲಾಗುತ್ತದೆ. ಕರುನಾಡಿನ ಹೆಮ್ಮೆಯ ಪುತ್ರ, ಭಾರತ ರತ್ನ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಇಂಜಿನಿಯರ್ಗಳ ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.