Published on: September 17, 2021
ಟಿಸಿಎಸ್
ಟಿಸಿಎಸ್
ಸುದ್ಧಿಯಲ್ಲಿ ಏಕಿದೆ? ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇದೀಗ 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯದ ಮೈಲುಗಲ್ಲು ದಾಖಲಿಸಿದ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಹೊರಹೊಮ್ಮಿದೆ.
ಏನಿದು 200 ಬಿಲಿಯನ್ ಡಾಲರ್ ಕಂಪನಿ?
- ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್‌ನ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 200 ಶತಕೋಟಿ ಡಾಲರ್ ದಾಟಿದೆ. ಅಂದರೆ ಅಂದಾಜು 14.80 ಲಕ್ಷ ಕೋಟಿ ರೂ.
3.5 ವರ್ಷಗಳಲ್ಲಿ ಸಾಧನೆ:
- ಟಾಟಾ ಸಮೂಹದ ಟಿಸಿಎಸ್ 1968ರಲ್ಲಿ ಸ್ಥಾಪನೆಯಾದ ತಂತ್ರಜ್ಞಾನ ಕಂಪನಿ. 2004ರಲ್ಲಿ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿತ್ತು. 13.5 ವರ್ಷಗಳ ಅವಧಿಯಲ್ಲಿ 100 ಬಿಲಿಯನ್ ಡಾಲರ್ ಕಂಪನಿಯಾಗಿತ್ತು. ಕೇವಲ 3.5 ವರ್ಷಗಳಲ್ಲಿ 200 ಬಿಲಿಯನ್ ಡಾಲರ್ ಮೈಲುಗಲ್ಲನ್ನೂ ಕ್ರಮಿಸಿದೆ. ಹೂಡಿಕೆದಾರರು ಕಂಪನಿಯ ಬೆಳವಣಿಗೆ ಮೇಲೆ ಇಟ್ಟಿರುವ ವಿಶ್ವಾಸವನ್ನು ಇದು ಬಿಂಬಿಸಿದೆ
ಪ್ರತಿಸ್ಪರ್ಧಿ ಕಂಪನಿಗಳ ಮೌಲ್ಯ
- ಟಿಸಿಎಸ್‌ನ ಜಾಗತಿಕ ಮಟ್ಟದ ಪ್ರತಿಸ್ಪರ್ಧಿ ಕಂಪನಿ ಅಕ್ಸೆಂಚರ್ 216 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿದೆ. ಐಬಿಎಂ 122 ಶತಕೋಟಿ ಡಾಲರ್, ಇನ್ಫೋಸಿಸ್ 99 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ.
ಪಾಸ್‌ಪೋರ್ಟ್ ಸೇವೆ:
- ಭಾರತದಲ್ಲಿ ಪಾಸ್‌ಪೋರ್ಟ್ ಸೇವಾ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದ್ದು, ಟಿಸಿಎಸ್ 2008ರಿಂದ ಖಾಸಗಿ ಸಹಭಾಗಿತ್ವವನ್ನು ನಿರ್ವಹಿಸುತ್ತಿದೆ.
ಭಾರತದ ಟಾಪ್ 5 ಐಟಿ ಕಂಪನಿಗಳು
- ಟಾಟಾ ಕನ್ಸಕ್ಟೆನ್ಸಿ ಸರ್ವೀಸ್
- ಇನ್ಫೋಸಿಸ್
- ಎಚ್ಸಿಎಲ್ ಟೆಕ್ನಾಲಜೀಸ್
- ವಿಪ್ರೊ
- ರೆಡಿಂಗ್ಟನ್ ಇಂಡಿಯಾ