Published on: September 21, 2021
ಸುದ್ಧಿ ಸಮಾಚಾರ 21 ಸೆಪ್ಟೆಂಬರ್ 2021
ಸುದ್ಧಿ ಸಮಾಚಾರ 21 ಸೆಪ್ಟೆಂಬರ್ 2021
- ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸಕಲ್ ಪತ್ತೆಯಾಗಿದೆ.ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸಕಲ್ ವಿನ್ಯಾಸಗೊಂಡಿದೆ. ಕರಾವಳಿಯ ನಿಲ್ಸಕಲ್ಗಳನ್ನು ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ.
- ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ಭಾರತವು ಮುಂದಿನ ತಿಂಗಳು ಹೆಚ್ಚುವರಿ ಕೋವಿಡ್ ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ. ಲಸಿಕೆ ಮೈತ್ರಿ ಅಥವಾ ಇಂಗ್ಲೀಷ್ ಭಾಷಾಂತರದ ಪ್ರಕಾರ ‘ವ್ಯಾಕ್ಸಿನ್ ಫ್ರೆಂಡ್ಶಿಪ್’ ಎಂದು ಕರೆಯಲ್ಪಡುವ ವಿಶ್ವವ್ಯಾಪಿ ರಾಷ್ಟ್ರಗಳಿಗೆ ಕೋವಿಡ್ -19 ಆಂಟಿವೈರಲ್ ಚುಚ್ಚುಮದ್ದನ್ನು ನೀಡಲು ಭಾರತೀಯ ಆಡಳಿತವು ಕೈಗೊಂಡ ಮಾನವೀಯ ಕಾರ್ಯವಾಗಿದೆ.
- ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಲಿರುವ ನಿರ್ಮಾಣ ಹಂತದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿ ಸರಬರಾಜು ಮಾಡಲು ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಟಿಯಾನ್ಜೌ–3 ಹೆಸರಿನ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -7 ವೈ 4 ರಾಕೆಟ್ ಅನ್ನು ಹೈನಾನ್ನ ದಕ್ಷಿಣ ದ್ವೀಪ ಪ್ರಾಂತ್ಯದಲ್ಲಿನ ವೆಂಚಾಂಗ್ ಬಾಹ್ಯಾಕಾಶ ಉಡಾವಣಾ ನೆಲೆಯಿಂದ ಉಡ್ಡಯನ ಮಾಡಲಾಯಿತು.
- ವಿಶ್ವದ ರೋಚಕತೆ ಅರಿಯಲು ಬಾಹ್ಯಾಕಾಶದಲ್ಲೇ ಒಂದು ದೂರದರ್ಶಕ ಯಂತ್ರ ಸ್ಥಾಪಿಸುವ ಉದ್ದೇಶದೊಂದಿಗೆ ನಾಸಾ ಮುಂದಡಿ ಇಟ್ಟಿತ್ತು. ಇದರ ಫಲವಾಗಿ ಏಪ್ರಿಲ್ 24, 1990 ರಂದು ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರವನ್ನು ಭೂಕಕ್ಷೆಗೆ ಸೇರಿಸಾಯಿತು. ಈ ಟೆಲಿಸ್ಕೋಪ್ಗೆ ವಿಶ್ವಕಂಡ ಶ್ರೇಷ್ಠ ಖಗೋಳ ವಿಜ್ಞಾನಿ ಸರ್ ಎಡ್ವಿನ್ ಹಬಲ್ ಅವರ ಹೆಸರನ್ನಿಟ್ಟು ಗೌರವಿಸಲಾಯಿತು.