Published on: September 24, 2021
ಸುದ್ಧಿ ಸಮಾಚಾರ 24 ಸೆಪ್ಟೆಂಬರ್ 2021
ಸುದ್ಧಿ ಸಮಾಚಾರ 24 ಸೆಪ್ಟೆಂಬರ್ 2021
- ಕ್ಯೂಎಸ್ ಪದವೀಧರರ ಉದ್ಯೋಗಶೀಲತೆ ಶ್ರೇಣಿ 2022’ ಪಟ್ಟಿಯ ಉನ್ನತ 500 ಸಂಸ್ಥೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಆರು ಐಐಟಿಗಳು ಒಳಗೊಂಡು ದೇಶದ 12 ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತದ ಸಂಸ್ಥೆಗಳ ಪೈಕಿ ಐಐಟಿ (ಬಾಂಬೆ) ಮೊದಲ ಸ್ಥಾನದಲ್ಲಿದೆ.
- 30 ವರ್ಷಗಳ ಹಿಂದೆ ಇರಾಕಿನ ವಸ್ತುಸಂಗ್ರಹಾಲಯದಿಂದ ಕಳ್ಳಸಾಗಣೆಯಾಗಿದ್ದ 3,500 ವರ್ಷಗಳ ಹಳೆಯ ಜೇಡಿಮಣ್ಣಿನ ಟ್ಯಾಬ್ಲೆಟ್ ಅಂತಿಮವಾಗಿ ಇರಾಕ್ಗೆ ಮರಳಿ ಬರುತ್ತಿದೆ. ಅಸ್ಸಿರಿಯಾದ ರಾಜ ಅಸ್ಸೂರ್ ಬಾನಿಪಾಲ್ ಅವರ ಗ್ರಂಥಾಲಯದ ಅವಶೇಷಗಳಲ್ಲಿ 12-ಟ್ಯಾಬ್ಲೆಟ್ ಸಂಗ್ರಹದ ಭಾಗವಾಗಿ ಮಣ್ಣಿನ ಟ್ಯಾಬ್ಲೆಟ್ 1853ರಲ್ಲಿ ಪತ್ತೆಯಾಗಿತ್ತು. ಇದನ್ನು ಗಿಲ್ಗಮೇಶ್ ಡ್ರೀಮ್ ಟ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ.
- ವಿಶ್ವಸಂಸ್ಥೆ ಪ್ರಧಾನ ಸಭೆಯ ಜತೆಗೇ ಸೆಪ್ಟೆಂಬರ್ 25ರಂದು ನಡೆಯಬೇಕಿದ್ದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗ ಸಭೆಯಲ್ಲಿ ತಾಲಿಬಾನ್ ಸರಕಾರಕ್ಕೂ ಭಾಗಿಯಾಗಲು ಅವಕಾಶ ನೀಡಬೇಕು ಎಂಬ ಪಾಕಿಸ್ತಾನದ ಒತ್ತಾಯಕ್ಕೆ ಭಾರತ ಸೇರಿ ಸಾರ್ಕ್ನ ಏಳು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಕಾರಣ ಸಭೆಯೇ ರದ್ದಾಗಿದೆ.
- ‘ಕ್ವಾಡ್ ಶೃಂಗ’ದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಕ್ವಾಡ್ ಎಂದರೆ ‘ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡಯಲಾಗ್’ ಅಥವಾ ‘ಚತುಷ್ಕೊನ ಭದ್ರತಾ ಕೂಟ’. ಭಾರತ, ಆಸ್ಪ್ರೇಲಿಯ, ಜಪಾನ್ ಹಾಗೂ ಅಮೆರಿಕ ರಾಷ್ಟ್ರಗಳು ಈ ಕೂಟದಲ್ಲಿವೆ. ರಷ್ಯಾ ಹಾಗೂ ದಕ್ಷಿಣ ಕೊರಿಯಾಗಳು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿವೆ.
- 2050ರ ವೇಳೆಗೆ ಭಾರತದ ಬಹುಪಾಲು ಜನರು ನಗರವಾಸಿಗಳಾಗಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. 2011ರ ಜನಸಂಖ್ಯೆಯ ಪ್ರಕಾರ ದೇಶದ ಶೇ 31ರಷ್ಟು ಜನರು ನಗರ ಪ್ರದೇಶಗಳಲ್ಲಿ ಇದ್ದರು. ಈಗ ಈ ಪ್ರಮಾಣವು ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. 2036ರ ವೇಳೆಗೆ ಈ ಪ್ರಮಾಣವು ಶೇ 73ಕ್ಕೆ ಏರಿಕೆಯಾಗಲಿದೆ