Published on: September 28, 2021

ಪ್ರಾಣಿ ಮಾದರಿಗಳ ಸಂರಕ್ಷಣೆ: ದತ್ತಾಂಶ, ಮಾಹಿತಿ ವಿನಿಮಯಕ್ಕೆ ಒಡಂಬಡಿಕೆ

ಪ್ರಾಣಿ ಮಾದರಿಗಳ ಸಂರಕ್ಷಣೆ: ದತ್ತಾಂಶ, ಮಾಹಿತಿ ವಿನಿಮಯಕ್ಕೆ ಒಡಂಬಡಿಕೆ

ಸುದ್ಧಿಯಲ್ಲಿ ಏಕಿದೆ?  ಭಾರತೀಯ ಮೃಗಾಲಯ ಸರ್ವೇಕ್ಷಣಾ ಸಂಸ್ಥೆಯು (ಝಡ್‌ಎಸ್‌ಐ) ಲಂಡನ್‌ನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ (ಎನ್‌ಎಚ್ಎಂ) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಯ ಅವಧಿ ಐದು ವರ್ಷಗಳು.

ಒಡಂಬಡಿಕೆಯ ಉದ್ದೇಶ

  • ಪ್ರಾಣಿ ಮಾದರಿಗಳ ಸಂರಕ್ಷಣೆ, ಸಂಗ್ರಹ, ಅಧ್ಯಯನ ಕುರಿತು ಒಟ್ಟಾಗಿ ಕಾರ್ಯನಿರ್ವಹಿಸುವುದು ಹಾಗೂ ದತ್ತಾಂಶ ಮತ್ತು ಪೂರಕ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ.
  • ಪ್ರಾಣಿ ವೈವಿಧ್ಯ ಸಂಶೋಧನೆಗೆ ಸಂಬಂಧಿಸಿ ವೈಜ್ಞಾನಿಕ ಮಾಹಿತಿಗಳ ವಿನಿಮಯ ಆಗುವುದರಿಂದ ಈ ಒಪ್ಪಂದದಿಂದ ಉಭಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

ಝೆಡ್‌ಎಸ್ಐ

  • ಝೆಡ್‌ಎಸ್ಐ ಕೋಲ್ಕತ್ತದಲ್ಲಿ ಮುಖ್ಯ ಕಚೇರಿ ಹೊಂದಿದ್ದು, 16 ಕಡೆ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಸಂಸ್ಥೆಯು 50 ಲಕ್ಷ ಪ್ರಾಣಿ ಮಾದರಿಗಳ ಸಂಗ್ರಹ ಹೊಂದಿದ್ದು, 450 ವಿಜ್ಞಾನಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.