Published on: October 1, 2021
‘ಗ್ರ್ಯಾಂಡ್ ಚಾಲೆಂಜ್’ ಯೋಜನೆ:
‘ಗ್ರ್ಯಾಂಡ್ ಚಾಲೆಂಜ್’ ಯೋಜನೆ:
ಸುದ್ಧಿಯಲ್ಲಿ ಏಕಿದೆ? ‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ಮುಂದಾಗಿದ್ದು, ಪಟ್ಟಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿವೆ
- ಭವಿಷ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲು ಕೇಂದ್ರವು ಉತ್ಸುಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಗ್ರ್ಯಾಂಡ್ ಚಾಲೆಂಜ್ ಎಂಬ ಇ- ಕಲ್ಚರ್ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ.
- ನಗರಕ್ಕೆ ಬಂದಿರುವ ಎಲೆಕ್ಟ್ರಿಕ್ ಬಸ್ ಗಳಿಗೆ ನವೆಂಬರ್ 1ರಂದು ಚಾಲನೆ ನೀಡಲಾಗುತ್ತದೆ. ಮೆಟ್ರೋ ಫೀಡರ್ ಲೈನ್ ಮಾರ್ಗದಲ್ಲಿಯೇ ಟ್ರಯಲ್ ರನ್ ಮಾಡಲಾಗುತ್ತದೆ.
- ಜೆಬಿಎಂ ಆಟೋ ಲಿಮಿಟೆಡ್ ನಿರ್ಮಿಸಿದ ಈ ಎಲೆಕ್ಟ್ರಿಕ್ ಬಸ್ ಗಳು, 33 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ, ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚಾರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಡಿಸೆಂಬರ್ 15 ರೊಳಗೆ ಕಂಪನಿಯು ಇನ್ನೂ 90 ವಾಹನಗಳನ್ನು ಹಸ್ತಾಂತರಿಸಲಿದೆ