Published on: October 1, 2021

ಸುದ್ಧಿ ಸಮಾಚಾರ 01 ಅಕ್ಟೋಬರ್ 2021

ಸುದ್ಧಿ ಸಮಾಚಾರ 01 ಅಕ್ಟೋಬರ್ 2021

  • ‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ಮುಂದಾಗಿದ್ದು, ಪಟ್ಟಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿವೆ
  • 2021-22ನೇ ಸಾಲಿನ ಅಯವ್ಯಯ ಘೋಷಣೆಯನ್ವಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ನಗರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
  • ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಪ್ರಧಾನಿ ಅವರು ಚಾಲನೆ ನೀಡಿದರು .ದೇಶದಲ್ಲಿ ಪ್ರತಿದಿನ 1 ಲಕ್ಷ ಟನ್ ಕಸ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿರುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ಮತ್ತು ಸುರಕ್ಷತಾ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕೊಳಚೆ ನೀರು ನದಿಗೆ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು
  • ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ‘ದೇಶಭಕ್ತಿ ಧ್ಯಾನ್’ ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ.
  • ಚೀನಾದೊಂದಿಗೆ ಲಡಾಕ್ ಗಡಿ ಸಂಘರ್ಷದ ಪ್ರಮುಖ ಘಟ್ಟದ ಸಮಯದಲ್ಲಿ ಲಡಾಕ್ ವಲಯದಲ್ಲಿ ವಾಯುಪಡೆ ಉಸ್ತುವಾರಿ ವಹಿಸಿಕೊಂಡಿದ್ದ ಯುದ್ಧ ವಿಮಾನ ಪೈಲಟ್ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
  • ಮೈ ಲೈಪ್ ಇನ್ ಫುಲ್; ವರ್ಕ್, ಪ್ಯಾಮಿಲಿ ಅಂಡ್ ಅವರ್ ಪ್ಯುಚರ್ ‘ ಎಂಬುದು ಪೆಪ್ಸಿ ಕೋ ಮಾಜಿ ಅಧ್ಯಕ್ಷೆ ಮತ್ತು ಸಿಇಒ, ಅನಿವಾಸಿ ಭಾರತೀಯ ಇಂದಿರಾ ನೂಯಿ ಅವರ ಪುಸ್ತಕವಾಗಿದೆ