Published on: October 6, 2021
ಕಪ್ಪುರಂಧ್ರ
ಕಪ್ಪುರಂಧ್ರ
ಸುದ್ಧಿಯಲ್ಲಿ ಏಕಿದೆ? ಅಮೆರಿಕ, ಇಸ್ರೇಲ್ ಮತ್ತು ನೆದರ್ಲ್ಯಾಂಡ್ ವಿಜ್ಞಾನಿಗಳು, ಕಪ್ಪುರಂಧ್ರವೊಂದು ನಕ್ಷತ್ರವನ್ನು ನುಂಗುವ ವಿದ್ಯಮಾನವನ್ನು ಗುರುತಿಸಿದ್ದಾರೆ.
- ಈ ವಿದ್ಯಮಾನ ಕಪ್ಪುರಂಧ್ರಗಳ ಕುರಿತಾದ ವಿಜ್ಞಾನಿಗಳ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗಿದೆ.
- J2150 ಎಂದು ಹೆಸರಿಸಿರುವ ಈ ಖಗೋಳೀಯ ವಿದ್ಯಮಾನ ಕಪ್ಪುರಂಧ್ರದ ದ್ರವ್ಯರಾಶಿ ಮತ್ತು ಅದರ ಪರಿಭ್ರಮಣೆಯ ಬಗ್ಗೆ ವಿಜ್ಞಾನಿಗಳಿಗೆ ವಿಫುಲ ಮಾಹಿತಿ ಒದಗಿಸಿದೆ. ಕ್ಷ-ಕಿರಣಗಳ ಹೊರಸೂಸುವಿಕೆಯಿಂದಾಗಿ ಈ ಇಡೀ ವಿದ್ಯಮಾನವನ್ನು ಸೆರೆಹಿಡಿಯಲು ಸಾಧ್ಯವಾಗಿದೆ.
- ಮಧ್ಯಂತರ ದ್ರವ್ಯರಾಶಿಯನ್ನು ಹೊಂದಿರುವ ಈ ಕಪ್ಪುರಂಧ್ರ, ನಕ್ಷತ್ರವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದಾಗ ಬಿಡುಗಡೆಯಾದ ಕ್ಷ-ಕಿರಣಗಳು ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸಿದೆ. ಈ ಕಪ್ಪುರಂಧ್ರ ನಮ್ಮ ಸೂರ್ಯನಿಗಿಂತ ಹತ್ತು ಸಾವಿರ ಪಟ್ಟು ಕಡಿಮೆ ದ್ರವ್ಯರಾಶಿಯನ್ನು ಹೊಂದಿದೆ ಎಂಬುದು ವಿಶೇಷ.
- ಕಪ್ಪುರಂಧ್ರಗಳು ನಕ್ಷತ್ರಗಳನ್ನು ನುಂಗುವ ಈ ವಿದ್ಯಮಾನದಿಂದಾಗಿ ಅವುಗಳ ಸ್ವರೂಪ, ಗಾತ್ರ ಹಾಗೂ ಬ್ರಹ್ಮಾಂಡದಲ್ಲಿ ಅವುಗಳ ಅಸ್ತಿತ್ವದ ಕುರಿತು ಹೆಚ್ಚಿನ ಮಾಹಿತಿ ಲಭಿಸುತ್ತದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.
- ಕುತೂಹಲಕಾರಿ ಅಂಶವೆಂದರೆ ಈ ಮಧ್ಯಂತರ ಗಾತ್ರದ ಕಪ್ಪುರಂಧ್ರಗಳು ಅತ್ಯಂತ ವೇಗವಾಗಿ ಪರಿಭ್ರಮಿಸುತ್ತವೆ ಎಂಬುದನ್ನು ಖಗೋಳ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಂಶೋಧನಾ ವಿಜ್ಞಾನಿ ನಿಕೋಲಸ್ ಸ್ಟೋನ್, J2150 ವಿದ್ಯಮಾನದಲ್ಲಿ ಡಾರ್ಕ್ ಮ್ಯಾಟರ್ ಅಸ್ತಿತ್ವದ ಹೊರತಾಗಿಯೂ ಮಧ್ಯಂತರ ದ್ರವ್ಯರಾಶಿಯ ಕಪ್ಪುರರಂಧ್ರಗಳು ವೇಗವಾಗಿ ತಿರುಗುತ್ತವೆ
- ಕಳೆದ ತಿಂಗಳು ‘ದಿ ಆಸ್ಟ್ರೋಫಿಸಿಕಲ್ ಜರ್ನಲ್’ನಲ್ಲಿ ಈ ತಂಡದ ಸಂಶೋಧನಾ ವರದಿ ಪ್ರಕಟಗೊಂಡಿದ್ದು, ಕಪ್ಪುರಂಧ್ರಗಲ ಕುರಿತಾದ ಹೆಚ್ಚಿನ ಅಧ್ಯಯನದ ಮಹತ್ವವನ್ನು ಸಾರಿ ಹೇಳಿದೆ.
ಕಪ್ಪು ಕುಳಿ ಎಂದರೇನು?
- ‘ಕಪ್ಪು ಕುಳಿ’ ಎಂಬ ಪದವನ್ನು 1960 ರ ದಶಕದ ಮಧ್ಯಭಾಗದಲ್ಲಿ ಅಮೇರಿಕನ್ ಭೌತಶಾಸ್ತ್ರಜ್ಞ ಜಾನ್ ಆರ್ಕಿಬಾಲ್ಡ್ ವೀಲರ್ ರಚಿಸಿದರು.
- ಕಪ್ಪು ರಂಧ್ರವು ಬಾಹ್ಯಾಕಾಶದಲ್ಲಿರುವ ಒಂದು ಬಿಂದುವನ್ನು ಸೂಚಿಸುತ್ತದೆ, ಅಲ್ಲಿ ದ್ರವ್ಯವು ಸಂಕುಚಿತಗೊಂಡಿದ್ದು ಗುರುತ್ವ ಕ್ಷೇತ್ರವನ್ನು ಸೃಷ್ಟಿಸುತ್ತದೆ, ಇದರಿಂದ ಬೆಳಕು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
- ಕಪ್ಪು ಕುಳಿಗಳನ್ನು 1915 ರಲ್ಲಿ ಆಲ್ಬರ್ಟ್ ಐನ್ಸ್ಟೈನ್ ಸಿದ್ಧಾಂತ ಮಾಡಿದರು.
- ಇಲ್ಲಿಯವರೆಗೆ ಗಮನಿಸಿದ ಎಲ್ಲಾ ಕಪ್ಪು ಕುಳಿಗಳು ಎರಡು ವರ್ಗಗಳಿಗೆ ಸೇರಿವೆ:
- ಒಂದು ವರ್ಗವು ಕೆಲವು ಸೌರ ದ್ರವ್ಯರಾಶಿಗಳು ಮತ್ತು ಹತ್ತಾರು ಸೌರ ದ್ರವ್ಯರಾಶಿಗಳ ನಡುವೆ ಇರುತ್ತದೆ. ಬೃಹತ್ ನಕ್ಷತ್ರಗಳು ಸತ್ತಾಗ ಇವುಗಳು ರೂಪುಗೊಳ್ಳುತ್ತವೆ ಎಂದು ಭಾವಿಸಲಾಗಿದೆ.
- ಇನ್ನೊಂದು ವರ್ಗವು ಅತಿದೊಡ್ಡ ಕಪ್ಪು ಕುಳಿಗಳು. ಇವುಗಳು ಸೌರಮಂಡಲದಿಂದ ಭೂಮಿಗೆ ಸೇರಿದ ಸೂರ್ಯನಿಂದ ನೂರಾರು ಸಾವಿರದಿಂದ ಶತಕೋಟಿ ಪಟ್ಟು ಹೆಚ್ಚು.