Published on: October 9, 2021
ವಿಶ್ವ ಅಂಚೆ ದಿನಾಚರಣೆ
ವಿಶ್ವ ಅಂಚೆ ದಿನಾಚರಣೆ
ಸುದ್ಧಿಯಲ್ಲಿ ಏಕಿದೆ? ಅ.9ರಂದು ಜಗತ್ತಿನಾದ್ಯಂತ ವಿಶ್ವ ಅಂಚೆ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಪಂಚದ ನಾನಾ ಭಾಗಗಳ ಜನತೆ, ಸಂಸ್ಥೆ, ಸರಕಾರಗಳ ನಡುವಿನ ಸಂಪರ್ಕಕ್ಕೆ ಅತ್ಯಂತ ಹಳೆಯ ಮಾನವ ಸಂವಹನ ಪ್ರಕ್ರಿಯೆಗಳಲ್ಲಿ ಪ್ರಮುಖ ಸಾಧನವಾಗಿ ಅಂಚೆ ಸೇವೆಗಳು ನಡೆದುಬಂದಿವೆ.
- ಜಾಗತಿಕ ಬದಲಾವಣೆ ನಡುವೆ ಜನಸಾಮಾನ್ಯರಿಗೆ ಹತ್ತಿರವಾಗುವ ಹತ್ತು-ಹಲವು ಅಂಚೆ ಸೇವೆಗಳು ಆರಂಭಗೊಂಡಿವೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಮೀರಿಸುವಂತಹ ಬ್ಯಾಂಕಿಂಗ್ ವ್ಯವಸ್ಥೆ ಜನಮೆಚ್ಚುಗೆ ಪಡೆದಿವೆ.
- ಭಾರತದಾದ್ಯಂತ 1.5 ಲಕ್ಷಕ್ಕೂ ಮಿಗಿಲಾದ ಅಂಚೆ ಕಚೇರಿಗಳು, 5 ಲಕ್ಷಕ್ಕೂ ಮಿಗಿಲಾದ ಉದ್ಯೋಗಿಗಳನ್ನು ಹೊಂದಿರುವ ಭಾರತೀಯ ಅಂಚೆ ವಿಶ್ವದಲ್ಲಿಯೇ ಅತೀ ಹೆಚ್ಚು ಸಂಪರ್ಕಜಾಲ ಹೊಂದಿದೆ.
ಸೇವೆಗಳು
- ಜಾಗತಿಕ ಬದಲಾವಣೆ ನಡುವೆ ಜನಸಾಮಾನ್ಯರಿಗೆ ಹತ್ತಿರವಾಗುವ ಹತ್ತು-ಹಲವು ಅಂಚೆ ಸೇವೆಗಳು ಆರಂಭಗೊಂಡಿವೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಮೀರಿಸುವಂತಹ ಬ್ಯಾಂಕಿಂಗ್ ವ್ಯವಸ್ಥೆ ಜನಮೆಚ್ಚುಗೆ ಪಡೆದಿವೆ. ಹಣದ ಭದ್ರತೆಯೊಂದಿಗೆ ಹೂಡಿಕೆಗೆ ಹಲವು ಖಾತ್ರಿ ಯೋಜನೆಗಳಿದ್ದು, 124 ತಿಂಗಳಲ್ಲಿ ನಿಶ್ಚಿತ ಠೇವಣಿಯ ಹಣ ದ್ವಿಗುಣಗೊಳ್ಳುವ ಯೋಜನೆ, ಹಿರಿಯ ನಾಗರಿಕರಿಗೆ 7.4% ಬಡ್ಡಿ ದರ, ಆಕರ್ಷಣೀಯವಾಗಿವೆ. ಉಳಿತಾಯ ಖಾತೆ, ಆರ್‌ಡಿ, ನಿಶ್ಚಿತ ಠೇವಣಿ, ಆವರ್ತಿತ ಠೇವಣಿ, ರಾಷ್ಟ್ರೀಯ ಕಿಸಾನ್ ಪತ್ರ, ಹಿರಿಯ ನಾಗರಿಕ ನಿಶ್ಚಿತ ಠೇವಣಿಗಳು ಒಂದಕ್ಕಿಂತ ಒಂದು ಆಕರ್ಷಕ ಬಡ್ಡಿ ಯೋಜನೆಗಳನ್ನು ಹೊಂದಿವೆ.
- ಇದರೊಂದಿಗೆ ಅಂಚೆ ಸೇವೆ, ಪತ್ರ ವ್ಯವಹಾರ, ಪಾರ್ಸ್‌ಲ್ ಸೇವೆ, ಇ-ಅಂಚೆ, ವಿಶೇಷ ಕೋರಿಯರ್ ಸೇವೆ, ಮನಿ ಆರ್ಡ್‌ರ್, ಹಣ ವರ್ಗಾವಣೆ, ಜತೆಗೆ ಇದೀಗ ಸಾರ್ವಜನಿಕ ವಲಯಕ್ಕೆ ಹತ್ತಿರವಾಗುವಂತೆ ಮನೆ ಬಾಗಿಲಿಗೆ ಹಣ ಸಂದಾಯ ನೀಡುವಲ್ಲಿ ಐಪಿಪಿಬಿ ವ್ಯವಸ್ಥೆ, ಎಇಪಿಎಸ್ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದಲ್ಲಿ ಗ್ರಾಮೀಣರ ಮನೆ ಬಾಗಿಲಲ್ಲೇ ಅಂಚೆಯಣ್ಣ 100ರಿಂದ 10,000 ರೂ.ವರೆಗೆ ಸ್ಥಳದಲ್ಲೇ ನಗದು ನೀಡುವ ಯೋಜನೆಗಳು ಜನಾಕರ್ಷಣೀಯವಾಗಿವೆ. ಕಾಮನ್ ಸರ್ವೀಸ್ ಸೆಂಟರ್ ವಿಭಾಗದಲ್ಲಿ ಮೊಬೈಲ್, ಡಿಟಿಎಸ್, ಫಾಸ್ಟ್‌ಟ್ಯಾಗ್, ರೀಜಾರ್ಚ್ ಸೇವೆಗಳು ಅನನ್ಯವಾಗಿವೆ. ಕಳೆದ 2 ವರ್ಷಗಳಿಂದ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ರ ನಡುವೆಯೂ ಅಂಚೆ ಇಲಾಖೆ ಸೇವೆ, ತ್ಯಾಗವನ್ನು ನಾವು ನೆನೆಯಲೇಬೇಕಿದೆ.