Published on: October 16, 2021
7 ಹೊಸ ರಕ್ಷಣಾ ಕಂಪನಿಗಳು
7 ಹೊಸ ರಕ್ಷಣಾ ಕಂಪನಿಗಳು
ಸುದ್ಧಿಯಲ್ಲಿ ಏಕಿದೆ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ 7 ರಕ್ಷಣಾ ಸಂಸ್ಥೆಗಳನ್ನ ದೇಶಕ್ಕೆ ಅರ್ಪಿಸಿದ್ದಾರೆ.
ಹೊಸ 7 ಕಂಪನಿಗಳು
- ಮುನಿಷನ್ ಇಂಡಿಯಾ ಲಿಮಿಟೆಡ್, ಅರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ ವೆಪನ್ಸ್ ಅಂಡ್ ಇಷ್ಮೆಂಟ್ ಇಂಡಿಯಾ ಲಿಮಿಟೆಡ್, ಗ್ರೂಪ್ ಕಂಫರ್ಟ್ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಫೈಲ್ ಲಿಮಿಟೆಡ್, ಗೈಡರ್ ಇಂಡಿಯಾ ಲಿಮಿಟೆಡ್ ಎಂಬ 7 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
ವ್ಯಾಪಾರ ಕಾರ್ಯಾಚರಣೆಗಳು
- ಈ ಎಲ್ಲಾ ಕಂಪನಿಗಳು ಅಕ್ಟೋಬರ್ 1, 2021 ರಿಂದ ವ್ಯಾಪಾರ ಕಾರ್ಯಾಚರಣೆಗಳನ್ನು ಆರಂಭಿಸಿದವು. ದಕ್ಷತೆ, ಕ್ರಿಯಾತ್ಮಕ ಸ್ವಾಯತ್ತತೆ ಮತ್ತು ಹೊಸ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ 200 ವರ್ಷಗಳಷ್ಟು ಹಳೆಯದಾದ OFB ಸರ್ಕಾರಿ ಇಲಾಖೆಯನ್ನು ಏಳು ಶೇಕಡ 100 ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿತು .
ಗುರಿ
ಈ ಕ್ರಮವು ರಕ್ಷಣಾ ಸಿದ್ಧತೆಯಲ್ಲಿ ಭಾರತದ ಸ್ವಾವಲಂಬನೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಉದ್ದೇಶಿತ ಉದ್ದೇಶಗಳೊಂದಿಗೆ ಸರ್ಕಾರವು ಈ ಪುನರ್ರಚನೆಯನ್ನು ಮಾಡಿದೆ:
- ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಉತ್ಪಾದಕ ಮತ್ತು ಲಾಭದಾಯಕ ಸ್ವತ್ತುಗಳಾಗಿ ಪರಿವರ್ತಿಸಲು
- ಉತ್ಪನ್ನ ಶ್ರೇಣಿಯಲ್ಲಿ ಪರಿಣತಿಯನ್ನು ಸುಧಾರಿಸಲು
- ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು
- ಗುಣಮಟ್ಟವನ್ನು ಸುಧಾರಿಸಲು
- ವೆಚ್ಚ-ದಕ್ಷತೆಯನ್ನು ಹೆಚ್ಚಿಸಲು ಮತ್ತು
- ರಕ್ಷಣಾ ಸನ್ನದ್ಧತೆಯಲ್ಲಿ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು.
OFB ಉದ್ಯೋಗಿಗಳ ಸ್ಥಿತಿ ಏನು?
- ಉತ್ಪಾದನಾ ಘಟಕಗಳಿಗೆ ಸೇರಿದ ಗುಂಪು A, B ಮತ್ತು C ಯ OFB ಉದ್ಯೋಗಿಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಅವರನ್ನು ಎರಡು ವರ್ಷಗಳವರೆಗೆ ಡೀಮ್ಡ್ ಡೆಪ್ಯುಟೇಶನ್ ಮೇಲೆ ವರ್ಗಾಯಿಸಲಾಗುತ್ತದೆ. ಸರ್ಕಾರಿ ನೌಕರರಾಗಿ ಅವರ ಸೇವಾ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (OFB)
- OFB ಎನ್ನುವುದು ರಕ್ಷಣಾ ಸಚಿವಾಲಯದ (MoD) ರಕ್ಷಣಾ ಉತ್ಪಾದನಾ ಇಲಾಖೆಯ (DDP) ಅಡಿಯಲ್ಲಿ ಕೆಲಸ ಮಾಡುವ ಒಂದು ಸಂಸ್ಥೆಯಾಗಿದೆ. 41 ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆಗಳು ಇದ್ದವು, ಇವುಗಳನ್ನು ಈಗ 7 ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಾಗಿ (ಡಿಪಿಎಸ್ಯು) ಪರಿವರ್ತಿಸಲಾಗಿದೆ.