Published on: October 20, 2021
ಚೀನಾದ ಕ್ಷಿಪಣಿ ಪರೀಕ್ಷೆ
ಚೀನಾದ ಕ್ಷಿಪಣಿ ಪರೀಕ್ಷೆ
ಸುದ್ಧಿಯಲ್ಲಿ ಏಕಿದೆ? ಲಾಂಗ್ ಮಾರ್ಚ್-2 ಹೆಸರಿನ ಬಾಹ್ಯಾಕಾಶ ರಾಕೆಟ್ ಮೂಲಕ ಹೈಪರ್ಸಾನಿಕ ಗ್ಲೈಡ್ ವೆಹಿಕಲ್(HGV) ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಈ ಕುರಿತು ಫೈನಾನ್ಸಿಶಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಈ ವರದಿ ಜಾಗತಿಕವಾಗಿ ಗಮನ ಸೆಳೆದಿದ್ದು, ಚೀನಾದ ಬಾಹ್ಯಾಕಾಶ ಮತ್ತು ಮಿಲಿಟರಿ ಶಕ್ತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ.
- ಬಾಹ್ಯಾಕಾಶ ರಾಕೆಟ್ ಮೂಲಕ ಪರಮಾಣು ಸಾಧನವನ್ನು ಹೊತ್ತ ಹೈಪರ್ಸಾನಿಕ ಗ್ಲೈಡ್ ವೆಹಿಕಲ್ನ ಪರೀಕ್ಷಾರ್ಥ ಪ್ರಯೋಗವನ್ನು ಚೀನಾ ಯಶಸ್ವಿಯಾಗಿ ಪೂರೈಸಿದೆ. ಈ ಪರಮಾಣು ಸಾಧನ ಇಡೀ ಭೂಮಿಯನ್ನು ಒಂದು ಸುತ್ತು ಸುತ್ತುವ ಕ್ಷಮತೆಯನ್ನು ಹೊಂದಿದ್ದು, ಅಮೆರಿಕ ಸೇರಿದಂತೆ ಚೀನಾ ವಿರೋಧಿ ಒಕ್ಕೂಟವನ್ನು ದಿಗ್ಭ್ರಮೆಗೊಳಿಸಿದೆ.
ಆತಂಕ ಏತಕ್ಕೆ ?
- ಚೀನಾದ ಬಾಹ್ಯಾಕಾಶ ಯೋಜನೆಗಳು ಸಂಪೂರ್ಣವಾಗಿ ಪೀಪಲ್ಸ್ ಲಿಬರೇಷ್ ಆರ್ಮಿ(ಪಿಎಲ್ಎ) ಸುಪರ್ದಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಗಳು ಮಿಲಿಟರಿ ಉದ್ದೇಶವನ್ನೂ ಹೊಂದಿರುವುದು ಆತಂಕಕಾರಿ ವಿಷಯ
- ಚೀನಾ HGV ಸೇರಿದಂತೆ ಇತರ ಪರಮಾಣು ಸಿಡಿತಲೆಗಳನ್ನು ಭೂಮಿಯ ಉತ್ತರ ಧ್ರುವ ಅಥವಾ ದಕ್ಷಿಣ ಧ್ರುವ ಬಳಿಸಿ ಅಮೆರಿಕ ಅಥವಾ ಇನ್ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವ ಶಕ್ತಿ ಪಡೆದುಕೊಂಡಿರುವುದು ಈ ಆತಂಕಕ್ಕೆ ಕಾರಣ.
- ಭಾಗಶಃ ಕಕ್ಷೀಯ ಬಾಂಬ್ ದಾಳಿ ವ್ಯವಸ್ಥೆ(FOBS) ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಚೀನಾ, ಖಂಡಾಂತರ ಪರಮಾಣು ಕ್ಷಿಪಣಿಗಳನ್ನು ಭೂಕಕ್ಷೆಗೆ ಕಳುಹಿಸಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಪಡೆಯುತ್ತಿದೆ.
- ಉತ್ತರ ಕೊರಿಯಾ ಕೂಡ ಇಂತದ್ದೇ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ನಿರತವಾಗಿದ್ದು, ಚೀನಾ ಈ ಯೋಜನೆಗೆ ತಾಂತ್ರಿಕ ನೆರವು ಒದಗಿಸುತ್ತಿದೆ ಎಂಬ ಅನುಮಾನವೂ ಕಾಡತೊಡಗಿದೆ. ಚೀನಾ ಮತ್ತು ಉತ್ತರ ಕೊರಿಯಾದ ಈ ಜಂಟಿ ಪ್ರಯತ್ನಗಳು ಜಾಗತಿಕ ಭ್ರದ್ರತೆಗೆ ಬಹುದೊಡ್ಡ ಅಪಾಯ ತಂದೊಡ್ಡಬಲ್ಲದು
ಹೈಪರ್ಸಾನಿಕ್ ಕ್ಷಿಪಣಿಗಳ ಅಭಿವೃದ್ಧಿ
- ರಷ್ಯಾ, ಚೀನಾ ಮತ್ತು ಯುಎಸ್ ನಂತಹ ರಾಷ್ಟ್ರಗಳು ಹೈಪರ್ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಅವು ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸುತ್ತವೆ. ಆದಾಗ್ಯೂ, ಅವು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ನಿಧಾನವಾಗಿ ಚಲಿಸುತ್ತವೆ. ಈ ಕ್ಷಿಪಣಿಗಳನ್ನು ತಡೆಹಿಡಿಯುವುದು ಕಷ್ಟ ಮತ್ತು ನಿರ್ವಹಿಸಬಹುದಾಗಿದೆ.