Published on: October 23, 2021
‘ಮಸ್ಕಿಟೋ ಫಿಶ್’
‘ಮಸ್ಕಿಟೋ ಫಿಶ್’
ಸುದ್ಧಿಯಲ್ಲಿ ಏಕಿದೆ? ಕೋವಿಡ್ ಸಾಂಕ್ರಾಮಿಕ ನಿಯಂತ್ರಣದಲ್ಲಿರುವ ಹೊತ್ತಿನಲ್ಲೇ ದಕ್ಷಿಣ ಭಾರತದಲ್ಲಿ ಸದ್ದಿಲ್ಲದೇ ಆರ್ಭಟ ನಡೆಸುತ್ತಿರುವ ಡೆಂಗ್ಯೂ ಮಹಾಮಾರಿ ನಿಯಂತ್ರಣಕ್ಕೆ ಪುದುಚೇರಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಡೆಂಗ್ಯೂ ಸೋಂಕು ಹರಡುವಲ್ಲಿ ಮಹತ್ತರ ಪಾತ್ರವಹಿಸುವ ಸೊಳ್ಳಗಳೆ ನಿಯಂತ್ರಣಕ್ಕೆ ‘ಮಸ್ಕಿಟೋ ಫಿಶ್’ಗಳನ್ನು ಬಿಡಲು ಯೋಜನೆ ರೂಪಿಸಿದೆ.
- ಡೆಂಗ್ಯೂ ಹರಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಆರೋಗ್ಯ ಇಲಾಖೆ
- ಯು ಜಿಲ್ಲೆಯಾದ್ಯಂತ ಜಲಮೂಲಗಳು ಮತ್ತು ಬಾವಿಗಳಿಗೆ ‘ಸೊಳ್ಳೆ ಮೀನು’ ಎಂದು ಜನಪ್ರಿಯವಾಗಿರುವ ಗ್ಯಾಂಬೂಸಿಯಾವನ್ನು ಬಿಡುತ್ತಿದೆ.
ಏನಿದು ಸೊಳ್ಳೆ ಮೀನು ಅಥವಾ ಗ್ಯಾಂಬೂಸಿಯಾ?
- ಗ್ಯಾಂಬೂಸಿಯಾ ಎಂಬುದು ಮೀನು ಜಾತಿಗೆ ಸೇರಿದ್ದಾಗಿದ್ದು, ಇದು ಲಾರ್ವಾದಂತಹ ವಸ್ತುಗಳನ್ನು ತಿಂದು ಜೀವಿಸುತ್ತದೆ. ಇದೇ ಕಾರಣಕ್ಕೆ ಇದೀಗ ಡೆಂಗ್ಯೂ ಪ್ರಸರಣ ಮಾಡುವ ಸೊಳ್ಳೆಗಳ ಲಾರ್ವಾಗಳಿರುವ ಜಲಮೂಲಗಳು, ಬಾವಿಗಳಲ್ಲಿ ಈ ಗ್ಯಾಂಬೂಸಿಯಾಗಳನ್ನು ಬಿಡುವುದರಿಂದ ಇದು ಆ ಸೊಳ್ಳೆಗಳ ಲಾರ್ವಾಗಳನ್ನು ತಿಂದು ಅವುಗಳ ಜನನ ನಿಯಂತ್ರಣ ಮಾಡುತ್ತದೆ
- ಗ್ಯಾಂಬೂಸಿಯಾ ಮೀನಿನ ಉದ್ದ 7 ಸೆಂ.ಮೀ ಮತ್ತು 1 ಸೆಂ.ಮೀ ಅಗಲಕ್ಕಿಂತ ಹೆಚ್ಚಿಲ್ಲ. ಗ್ಯಾಂಬೂಸಿಯಾ ಸಿಹಿನೀರಿನ ಮೀನಾಗಿದೆ. ಇದನ್ನು ಮನುಷ್ಯರು ಹೆಚ್ಚಾಗಿ ಸೇವಿಸುವುದಿಲ್ಲ. ಮೀನುಗಳು ಸರ್ವಭಕ್ಷಕವಾಗಿದೆ. ಅವು ಆಕ್ರಮಣಕಾರಿ ಪ್ರಭೇದಗಳಿಗಿಂತ ಹೆಚ್ಚಿನ ವೇಗದಲ್ಲಿ ಸಂತಾನೋತ್ಪತ್ತಿ ಮಾಡಬಲ್ಲವು. ಅವು ವಿಶೇಷವಾಗಿ ಸೊಳ್ಳೆ ಲಾರ್ವಾಗಳನ್ನು ತಿನ್ನುತ್ತವೆ. ಅವು ಮನುಷ್ಯರಿಗೆ ಹಾನಿಕಾರಕವಲ್ಲ.