Published on: October 23, 2021
ಸುದ್ಧಿ ಸಮಾಚಾರ 23 ಅಕ್ಟೋಬರ್ 2021
ಸುದ್ಧಿ ಸಮಾಚಾರ 23 ಅಕ್ಟೋಬರ್ 2021
- ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸಂಗ್ರಹಿಸಿಟ್ಟು, ದರ ಏರಿಕೆಯಾದಾಗ ಮಾರಲು ಅನುಕೂಲವಾಗುವಂತೆ ರೈತರಿಗೆ ಉಗ್ರಾಣಗಳನ್ನು ರಿಯಾಯಿತಿ ದರದಲ್ಲಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.
- ಕೋವಿಡ್ ಸಾಂಕ್ರಾಮಿಕ ನಿಯಂತ್ರಣದಲ್ಲಿರುವ ಹೊತ್ತಿನಲ್ಲೇ ದಕ್ಷಿಣ ಭಾರತದಲ್ಲಿ ಸದ್ದಿಲ್ಲದೇ ಆರ್ಭಟ ನಡೆಸುತ್ತಿರುವ ಡೆಂಗ್ಯೂ ಮಹಾಮಾರಿ ನಿಯಂತ್ರಣಕ್ಕೆ ಪುದುಚೇರಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಡೆಂಗ್ಯೂ ಸೋಂಕು ಹರಡುವಲ್ಲಿ ಮಹತ್ತರ ಪಾತ್ರವಹಿಸುವ ಸೊಳ್ಳಗಳೆ ನಿಯಂತ್ರಣಕ್ಕೆ ‘ಮಸ್ಕಿಟೋ ಫಿಶ್’ಗಳನ್ನು ಬಿಡಲು ಯೋಜನೆ ರೂಪಿಸಿದೆ.
- ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಲು ಹಣಕಾಸು ಕಾರ್ಯಪಡೆ ನಿರ್ಧರಿಸಿದೆ. ಜತೆಗೆ ಟರ್ಕಿಯನ್ನು ಕೂಡ ಈ ಪಟ್ಟಿಗೆ ಸೇರಿಸಲಾಗಿದೆ.
- ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವೇಗದ ವಾಯು ಗುರಿ ಭೇದಿಸುವ ‘ಅಭ್ಯಾಸ್’ಫ್ಲೈಟ್ ಪರೀಕ್ಷೆಯನ್ನು ಡಿಆರ್ಡಿಒ ಯಶಸ್ವಿಯಾಗಿ ಪೂರೈಸಿದೆ.
- ದಕ್ಷಿಣ ಕೊರಿಯಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಪರೀಕ್ಷಾರ್ಥ ಉಡಾವಣೆ ಮಾಡಿತು.
- ಭಾರತ ಮೂಲದ ಅಮೆರಿಕನ್ ನಿವಾಸಿ, ನೀತಿ ರಚನಾ ತಜ್ಞೆ ನೀರಾ ಟಂಡನ್ ಅವರನ್ನು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿಯಾಗಿ ಅಧ್ಯಕ್ಷ ಜೋ ಬೈಡನ್ ಅವರು ನೇಮಕ ಮಾಡಿದ್ದಾರೆ. ಟಂಡನ್ ಹಿಂದೆ ಹಿಲರಿ ಕ್ಲಿಂಟನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಪ್ರಚಾರ ಕಾರ್ಯದ ನೀತಿ ನಿರ್ದೇಶಕಿಯಾಗಿದ್ದರು. 2008ಕ್ಕೂ ಮುನ್ನ ಕ್ಲಿಂಟನ್ ಅವರ ಕಚೇರಿಯಲ್ಲಿ ಶಾಸನಸಭೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.
- ಹಂಗೇರಿಯಾದ ಚಲನಚಿತ್ರ ನಿರ್ದೇಶಕ ಇಸ್ತಾನ್ ಸಬೂ ಮತ್ತು ಅಮೆರಿಕದ ಚಿತ್ರ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನವೆಂಬರ್ 20ರಿಂದ ಆರಂಭವಾಗುವ ಭಾರತದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ನೀಡಿ ಗೌರವಿಸಲಾಗುತ್ತಿದೆ.