Published on: October 26, 2021

ಇರಾಕ್ನಲ್ಲಿ ಹಳೆಯ ವೈನ್ ಫ್ಯಾಕ್ಟರಿ

ಇರಾಕ್ನಲ್ಲಿ ಹಳೆಯ ವೈನ್ ಫ್ಯಾಕ್ಟರಿ

ಸುದ್ಧಿಯಲ್ಲಿ ಏಕಿದೆ? ಪುರಾತತ್ವಶಾಸ್ತ್ರಜ್ಞರು ಇರಾಕ್‌ನಲ್ಲಿ 2,700 ವರ್ಷಗಳಷ್ಟು ಹಳೆಯ ವೈನ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಇದು ಅಸ್ಸೀರಿಯನ್ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ವೈನ್ ತಯಾರಿಸುವ ಕಾರ್ಖಾನೆ ಎಂದು ಹೇಳಲಾಗಿದೆ.

  • ಅಸ್ಸೀರಿಯನ್ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದಲ್ಲಿ ರಾಜ ಮನೆತನ ಮತ್ತು ಉಚ್ಛ ವರ್ಗದ ಉಪಯೋಗಕ್ಕಾಗಿ ಈ ವೈನ್ ತಯಾರಿಸುವ ಕಾರ್ಖಾನೆಯನ್ನು ನಿರ್ಮಿಸಲಾಗಿತ್ತು ಎಂದು ಪುರಾತತ್ವಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
  • ದೋಹುಕ್‌ನ ಸಮೀಪವಿರುವ ಖಿನಿಸ್‌ನಲ್ಲಿ ಕ್ರಿಪೂ 7ನೇ ಶತಮಾನದ ಆರಂಭದಲ್ಲಿ, ಸೆನ್ನಾಚೆರಿಬ್ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ವೈನ್ ಘಟಕ ಪತ್ತೆಯಾಗಿದೆ. ಬಿಳಿ ಬಣ್ಣದ ಬೃಹತ್ ಬಂಡೆಯನ್ನು ಈ ಘಟಕವನ್ನು ನಿರ್ಮಿಸಲು ಕೆತ್ತಲಾಗಿದೆ
  • ದ್ರಾಕ್ಷಿ ಹಣ್ಣುಗಳಿಂದ ರಸ ಹೊರತಗೆದು ಸಂಗ್ರಹಿಸಿ ನಂತರ ಅದನ್ನು ವೈನ್ ಆಗಿ ಪರಿವರ್ತಿಸುವ ಇಂತಹ ಪುರಾತನ ಘಟಕ ಇರಾಕ್‌ನಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ
  • ಅದೇ ರೀತಿ ಉತ್ತರ ಇರಾಕ್‌ನ ಫೈಡಾದಲ್ಲಿ ಸುಮಾರು ಒಂಬತ್ತು-ಕಿಲೋಮೀಟರ್ ಉದ್ದದ (5.5-ಮೈಲಿ) ನೀರಾವರಿ ಕಾಲುವೆ ದೊರೆತಿದ್ದು, ಇದಕ್ಕೆ ಹೊಂದಿಕೊಂಡಂತೆ ವೈನ್ ತಯಾರಿಸುವ ಘಟಕವನ್ನು ಕೂಡ ಶೋಧಿಸಲಾಗಿದೆ.
  • ಈ ನೀರಾವರಿ ಕಾಲುವೆ ಐದು ಮೀಟರ್ (16 ಅಡಿ) ಅಗಲ ಮತ್ತು ಎರಡು ಮೀಟರ್ ಎತ್ತರದ 12 ಫಲಕಗಳನ್ನು ಹೊಂದಿವೆ. ಇದರಲ್ಲಿ ವಿವಿಧ ದೇವರು, ರಾಜರು ಮತ್ತು ಪವಿತ್ರ ಪ್ರಾಣಿಗಳನ್ನು ಸುಂದರವಾಗಿ ಕೆತ್ತಲಾಗಿದೆ. ಇದು ಸರ್ಗಾನ್ II (ಕ್ರಿ.ಪೂ. 721-705) ಮತ್ತು ಆತನ ಮಗ ಸೆನ್ಚೆರಿಬ್ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದವು
  • ಈ ಗೋಡೆಗಳ ಮೇಲೆ ಪ್ರೀತಿ ಮತ್ತು ಯುದ್ಧದ ದೇವತೆಯಾದ ಇಶ್ತಾರ್ ಸೇರಿದಂತೆ ಏಳು ಪ್ರಮುಖ ದೇವರುಗಳನ್ನು ಸಿಂಹದ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಅಲ್ಲದೇ ಈ ದೇವರುಗಳನ್ನು ಅಸ್ಸೀರಿಯನ್ ರಾಜರು ಪೂಜಿಸುವ ರೀತಿಯಲ್ಲಿ ತೋರಿಸಲಾಗಿದೆ.
  • ಇನ್ನು ಈ ನೀರಾವರಿ ಕಾಲುವೆಯನ್ನು ರೈತರ ಜಮೀನಿಗೆ ನೀರುಣಿಸಲು ನಿರ್ಮಿಸಲಾಗಿದ್ದು, ಈ ಕಾಲುವೆಯ ನಿರ್ಮಾಣಕ್ಕೆ ರಾಜ ಹೊರಡಿಸಿದ ಆದೇಶದ ಪ್ರತಿಯನ್ನೂ ಕೆತ್ತನೆಯಲ್ಲಿ ತೋರಿಸಲಾಗಿದೆ.