Published on: November 10, 2021
ಸ್ವರ್ಣಜಯಂತಿ ಫೆಲೋಶಿಪ್
ಸ್ವರ್ಣಜಯಂತಿ ಫೆಲೋಶಿಪ್
ಸುದ್ಧಿಯಲ್ಲಿ ಏಕಿದೆ ? ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯಕ್ಕಾಗಿ ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್’ಗಳನ್ನು ನೀಡಲಾಗಿದೆ.
- ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀಧರನ್ ದೇವರಾಜನ್ ಮತ್ತು ಡಾ. ಮಾಯಾಂಕ್ ಶ್ರೀವಾಸ್ತವ ಮತ್ತು ಸುಭ್ರೋ ಭಟ್ಟಾಚಾರ್ಜಿ ಸಹಿತ ದೇಶದಾದ್ಯಂತ ವಿವಿಧ ವಿಜ್ಞಾನ ಸಂಸ್ಥೆಗಳ 17 ವಿಜ್ಞಾನಿಗಳು ಸ್ವರ್ಣಜಯಂತಿ ಫೆಲೋಶಿಪ್ ಗಳನ್ನು ಪಡೆದಿದ್ದಾರೆ.
ಸ್ವರ್ಣಜಯಂತಿ ಫೆಲೋಶಿಪ್
- ಭಾರತದ ಸ್ವಾತಂತ್ರ್ಯದ 50ನೇ ವರ್ಷದ ನೆನಪಿಗಾಗಿ ಸ್ವರ್ಣಜಯಂತಿ ಫೆಲೋಶಿಪ್ ಯೋಜನೆಯನ್ನು ಭಾರತ ಸರ್ಕಾರವು ಸ್ಥಾಪಿಸಿದೆ.
- ಈ ಯೋಜನೆಯಡಿಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ಐದು ವರ್ಷಗಳ ಕಾಲ ಪ್ರತೀ ತಿಂಗಳು 25000 ರೂ.ಗಳ ಫೆಲೋಶಿಪ್ ನೀಡಲಾಗುತ್ತದೆ. ಸಂಶೋಧನೆಯನ್ನು ನಿರ್ವಹಿಸಲು ಎಲ್ಲಾ ಅಗತ್ಯತೆಗಳಿಗೆ ಹೆಚ್ಚುವರಿಯಾಗಿ ಐದು ವರ್ಷಗಳಲ್ಲಿ 5 ಲಕ್ಷ ರೂ. ಸಂಶೋಧನಾ ಅನುದಾನ ನೀಡುವ ಮೂಲಕ ಅವರನ್ನು ಬೆಂಬಲಿಸುತ್ತದೆ. ಅವರು ತಮ್ಮ ಮಾತೃ ಸಂಸ್ಥೆಯಿಂದ ಪಡೆಯುವ ವೇತನದ ಜೊತೆಗೆ ಫೆಲೋಶಿಪ್ ಅನ್ನು ಒದಗಿಸಲಾಗುತ್ತದೆ.
- ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳು ಸಂಶೋಧನಾ ಯೋಜನೆಯಲ್ಲಿ ಅನುಮೋದಿಸಿದಂತೆ ವೆಚ್ಚದ ವಿಷಯದಲ್ಲಿ ಸ್ವತಂತ್ರ ಮತ್ತು ಹೊಂದಾಣಿಕೆಯೊಂದಿಗೆ ಅನಿಯಂತ್ರಿತ ಸಂಶೋಧನೆಯನ್ನು ಮುಂದುವರಿಸಲು ಅನುಮತಿಸಲಾಗುತ್ತದೆ.
- ದೃಢ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮತ್ತು ಕಠಿಣವಾದ ಮೂರು ಹಂತಗಳ ಪರಿಶೀಲನಾ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಚೌಕಟ್ಟಿನಲ್ಲಿ ಮೂಲಭೂತ ಸಂಶೋಧನೆಯನ್ನು ಮುಂದುವರಿಸುತ್ತಾರೆ.