Published on: November 10, 2021
ಐಎನ್ಎಸ್ ವೇಲಾ
ಐಎನ್ಎಸ್ ವೇಲಾ
ಸುದ್ಧಿಯಲ್ಲಿ ಏಕಿದೆ ? ಮಜಗಾಂವ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ನಿರ್ಮಿತ ‘ಸ್ಕಾರ್ಪಿಯಾನ್’ ಸರಣಿಯ ನಾಲ್ಕನೇ ಜಲಾಂತರ್ಗಾಮಿ ‘ಐಎನ್ಎಸ್ ವೇಲಾ’ವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
- ಪ್ರಾಜೆಕ್ಟ್ ಪಿ–75’ಅಡಿ ನಿರ್ಮಿಸಲಾಗಿರುವ ಈ ಜಲಾಂತರ್ಗಾಮಿ ಕಾರ್ಯಾಚರಣೆಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ
- ಮಹತ್ವಾಕಾಂಕ್ಷೆಯ ‘ಆತ್ಮನಿರ್ಭರ ಭಾರತ’ ಹಾಗೂ ‘ಮೇಕ್ ಇನ್ ಇಂಡಿಯಾ’ ಯೋಜನೆಗಳಡಿ ಈ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ
- ವೇಲಾ’ ಹಸ್ತಾಂತರದ ಮೂಲಕ ನೌಕಾಪಡೆಯ ಅಗತ್ಯಗಳಿಗೆ ತಕ್ಕಂತೆ ಹಡಗುಕಟ್ಟೆಗಳ ನಿರ್ಮಾಣ ಹಾಗೂ ಜಲಾಂತರ್ಗಾಮಿಗಳ ಅಭಿವೃದ್ಧಿಯಲ್ಲಿ ಎಂಡಿಎಲ್ ತನ್ನ ಸಾಮರ್ಥ್ಯ– ವೃತ್ತಿಪರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ
- ಈಗಾಗಲೇ ಐಎನ್ಎಸ್ ಕಲ್ವರಿ, ಐಎನ್ಎಸ್ ಖಂಡೇರಿ ಹಾಗೂ ಐಎನ್ಎಸ್ ಕಾರಂಜ್ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ದೇಶಗಳ ಸಾಲಿಗೆ ಭಾರತವೂ ಸೇರಿದಂತಾಗಿದೆ.