Published on: November 14, 2021
ಅಂತರರಾಷ್ಟ್ರೀಯ ಕಾನೂನು ಆಯೋಗ
ಅಂತರರಾಷ್ಟ್ರೀಯ ಕಾನೂನು ಆಯೋಗ
ಸುದ್ಧಿಯಲ್ಲಿ ಏಕಿದೆ ? ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಪ್ರಾಧ್ಯಾಪಕ ವಿಮಲ್ ಪಟೇಲ್ ಅವರು ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
- ವಿಶ್ವಸಂಸ್ಥೆಯಲ್ಲಿ ನಡೆದ ಕಠಿಣ ಸ್ಪರ್ಧೆಯಲ್ಲಿ ಆಯ್ಕೆ ನಡೆಯಿತು. 8 ಸ್ಥಾನಗಳಿಗೆ ನಡೆದ ಚನಾವಣೆಗೆ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಮೂಹದಿಂದ 11 ಅಭ್ಯರ್ಥಿಗಳು ಕಣದಲ್ಲಿದ್ದರು.
ಇಂಟರ್ನ್ಯಾಷನಲ್ ಲಾ ಕಮಿಷನ್ (ILC) ಬಗ್ಗೆ
- ಅಂತರರಾಷ್ಟ್ರೀಯ ಕಾನೂನಿನ ಪ್ರಚಾರ ಮತ್ತು ಪ್ರಗತಿಶೀಲ ಅಭಿವೃದ್ಧಿ ಮತ್ತು ಅದರ ಕ್ರೋಡೀಕರಣವನ್ನು ಖಚಿತಪಡಿಸಿಕೊಳ್ಳಲು ಯು ಎನ್ ನ ಆದೇಶವನ್ನು ಕೈಗೊಳ್ಳಲು ILC ಅನ್ನು 1947 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸ್ಥಾಪಿಸಿತು. ಇದು ಜಿನೀವಾದಲ್ಲಿರುವ UN ಕಚೇರಿಯಲ್ಲಿ ವಾರ್ಷಿಕ ಅಧಿವೇಶನವನ್ನು ನಡೆಸುತ್ತದೆ.