Published on: November 18, 2021
ಸುದ್ಧಿ ಸಮಾಚಾರ 17 ನವೆಂಬರ್ 2021
ಸುದ್ಧಿ ಸಮಾಚಾರ 17 ನವೆಂಬರ್ 2021
- ಉತ್ತರ ಪ್ರದೇಶದ ವಾರಣಾಸಿಗೆ ರೇಷ್ಮೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ. ಈ ಕುರಿತಾಗಿ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ. ಈ ಸಂಬಂಧ ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ವಾರಣಾಸಿಗೆ ತೆರಳಲಿದೆ.
- ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ
- ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ವರ್ಷದ ಸಮಾವೇಶ ಆರಂಭವಾಗಲಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಚಾಲನೆ ನೀಡಲಿದ್ದಾರೆ. ‘ಡ್ರೈವಿಂಗ್ ದಿ ನೆಕ್ಸ್ಟ್’ ಘೋಷ ವಾಕ್ಯದಡಿ ನಡೆಯಲಿರುವ ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ.
- ಕರ್ತಾರ್ಪುರ ಕಾರಿಡಾರ್ ನ್ನು ಮತ್ತೆ ತೆರೆಯುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಉನ್ನತ ಸಿಖ್ ಸಂಸ್ಥೆ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಸ್ವಾಗತಿಸಿದೆ, ಇದು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಕೊನೆಯ ನಿವಾಸಕ್ಕೆ ಯಾವುದೇ ಅಡೆತಡೆಯಿಲ್ಲದೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಸಹಾಯ ಮಾಡುತ್ತದೆ
- ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ನವೀಕೃತ ಅತ್ಯಾಧುನಿಕ ರಾಣಿ ಕಮಲಾಪತಿ ರೈಲ್ವೇ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
- ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಅಧಿಕವಾಗಿದೆ. ಈ ಹಾದಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಚೀನಾ ಮೊದಲ ಸ್ಥಾನಕ್ಕೇರಿದೆ.