Published on: November 18, 2021
ಸುದ್ಧಿ ಸಮಾಚಾರ 18 ನವೆಂಬರ್ 2021
ಸುದ್ಧಿ ಸಮಾಚಾರ 18 ನವೆಂಬರ್ 2021
- ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿದೆ. ಬಿಟ್ಕಾಯಿನ್ ಎಂಬುದು ವರ್ಚ್ಯುವಲ್ ಸ್ವರೂಪದ, ಅಂದರೆ ಡಿಜಿಟಲ್ ರೂಪದಲ್ಲಿರುವ ನಗದು. ಇದು ವಿಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಯಾವುದೇ ಮಧ್ಯವರ್ತಿ ಬ್ಯಾಂಕ್ನ ನೆರವಿಲ್ಲದೇ ಬಿಟ್ಕಾಯಿನ್ಗಳ ಖರೀದಿ, ಮಾರಾಟ ಅಥವಾ ವಿನಿಮಯ ಮಾಡಿಕೊಳ್ಳಬಹುದು. ಇದು ಕ್ರಿಪ್ಟೋಗ್ರಫಿ ಎಂಬ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುವ ಸುರಕ್ಷಿತ ವ್ಯವಸ್ಥೆ ಎಂದು ಹೇಳಲಾಗುತ್ತಿದೆ.
- ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನದ ಶತಮಾನೋತ್ಸವದ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಬಿರ್ಲಾ, ಶಾಸಕಾಂಗ ಸಂಸ್ಥೆಗಳಲ್ಲಿ ಸಭೆಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಮತ್ತು ಕಾನೂನು ರಚನೆಯ ಬಗ್ಗೆ ಚರ್ಚೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
- ಪೋಷಣ್ ಟ್ರ್ಯಾಕರ್ ಎಂಬುದು ಮೊಬೈಲ್ ಆ್ಯಪ್ ಆಧಾರಿತ ತಂತ್ರಜ್ಞಾನ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಆ್ಯಪ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದೆ. ಮಕ್ಕಳಲ್ಲಿನ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ ಮಾತ್ರವಲ್ಲದೆ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಸಮಸ್ಯೆಯಿದ್ದರೆ ಅದರ ಬಗೆಗೂ ಈ ಆ್ಯಪ್ ನಲ್ಲಿ ನಮೂದಿಸಬಹುದು.
- ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಸೌರಭ್ ಕೃಪಾಲ್ ದೇಶದ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲ ಸಲಿಂಗಿಯಾಗುವ ಸಾಧ್ಯತೆ ಇದೆ.
- ಉತ್ತರ ವಲಯದಲ್ಲಿ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಜಂಟಿ ಸಮರಾಭ್ಯಾಸ ನಡೆಸಿದವು. ಈ ಕಾರ್ಯಾಚರಣೆಗೆ ‘ಆಪರೇಷನ್ ಹರ್ಕ್ಯುಲಸ್’ ಎಂದು ಹೆಸರಿಸಡಲಾಗಿತ್ತು.
- ನವೆಂಬರ್ 19 ರಂದು ಚಂದ್ರಗ್ರಹಣವಿದ್ದು ಈ ಚಂದ್ರಗ್ರಹಣ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗಿ ಚಂದ್ರನ ಮೇಲ್ಮೈಯಲ್ಲಿ ನೆರಳು ರೂಪಿತವಾಗುತ್ತದೆ. ಆಗ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ. ಇದು ಮೊದಲ ಬಾರಿಗೆ ಸಂಭವಿಸಲಿದೆ.