Published on: November 22, 2021
ಸುದ್ಧಿ ಸಮಾಚಾರ 22 ನವೆಂಬರ್ 2021
ಸುದ್ಧಿ ಸಮಾಚಾರ 22 ನವೆಂಬರ್ 2021
- ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿಯನ್ನು 22 ನವೆಂಬರ್ ರಂದು ಆಚರಿಸಲು ಸಕಲ ಸಿದ್ಧತೆ ನಡೆದಿದೆ
- ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಮೂಲಕ 2021ನೇ ಸಾಲಿನ ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸತತ ಐದನೇ ವರ್ಷ ಕೂಡ ಮಧ್ಯಪ್ರದೇಶದ ಇಂದೋರ್, ಅತ್ಯಂತ ಸ್ವಚ್ಛ ನಗರ ಎನಿಸಿಕೊಂಡಿದೆ.
- ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ವಿಶಾಖಪಟ್ಟಂ ಅನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
- 2021-25ರ ಅವಧಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತ ಜಯಗಳಿಸಿದೆ.
- ಅತ್ಯಾಚಾರದ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಜಯ ಸಿಕ್ಕಿದೆ. ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ.
- ಮೌಂಟ್ ಅಬುವಿನಲ್ಲಿ ಇರುವ ಪಿಆರ್ಎಲ್ನ 1.2 ಮೀಟರ್ ದೂರದರ್ಶಕದಲ್ಲಿ, ಆಪ್ಟಿಕಲ್ ಫೈಬರ್ಫೆಡ್ ಸ್ಪೆಕ್ಟ್ರೊಗ್ರಾಫ್ (ಪರಸ್) ಅನ್ನು ಬಳಸಿಕೊಂಡು ಈ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿದೆ.