Published on: November 24, 2021
ಸುದ್ಧಿ ಸಮಾಚಾರ 23 ನವೆಂಬರ್ 2021
ಸುದ್ಧಿ ಸಮಾಚಾರ 23 ನವೆಂಬರ್ 2021
- ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ (Anti Venom) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ ಸ್ಥಾಪನೆಗೆ ಮುಂದಾಗಿದೆ.
- ಬೆಂಗಳೂರು ವಿಮಾನ ನಿಲ್ದಾಣ ಮತ್ತೊಂದು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರವಾಗಿದ್ದು, ರೋಸೆನ್ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ ನಿಯೋಜನೆ ಮಾಡುವ ಮೂಲಕ ಈ ವ್ಯವಸ್ಥೆ ಹೊಂದಿದ ದಕ್ಷಿಣ ಏಷ್ಯಾದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಭಾಜನವಾಗಿದೆ.
- ಆಂಪ್ಲಿಟ್ಯೂಡ್ ರಚಿಸಿದಂತಹ ಉತ್ಪನ್ನ ವರದಿ 2021 ರ ಅನ್ವಯ ಏಷ್ಯಾ ಪೆಸಿಫಿಕ್ (APAC) ಪ್ರದೇಶದ ಭವಿಷ್ಯದ ಜನಪ್ರಿಯ 5 ಉತ್ಪನ್ನಗಳಲ್ಲಿ ಬೆಂಗಳೂರು ಮೂಲದ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ವೇದಿಕೆ ಕೂ ಅಪ್ಲಿಕೇಶನ್ ಸ್ಥಾನ ಪಡೆದಿದೆ.
- ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ವಿವಾದಾತ್ಮಕ ನಿರ್ಣಯವನ್ನು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಹಿಂಪಡೆದಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ 3 ರಾಜಧಾನಿ ಮಸೂದೆಯನ್ನು ಆಂಧ್ರ ಅಸೆಂಬ್ಲಿಯಲ್ಲಿ ಹಿಂದಕ್ಕೆ ಪಡೆದಿದೆ.
- ತಿರುಪತಿಯ ರಾಮಚಂದ್ರಾಪುರಂನಲ್ಲಿ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಹಾಗೂ ಅತಿ ಹಳೆಯ ಜಲಾಶಯಗಳಲ್ಲಿ ಒಂದಾದ ರಾಯಲ ಚೆರವು ಸುತ್ತಲಿನ ಏರಿಗಳಲ್ಲಿ ಬಿರುಕು ಉಂಟಾಗಿದೆ.
- ಬಾಲಾಕೋಟ್ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಂತರದ ಘಟನೆಯಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ನ.22 ರಂದು ವೀರ ಚಕ್ರ ಪಶಸ್ತಿ ಪ್ರದಾನ ಮಾಡಲಾಗಿದೆ.
- ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ ದಿನವಾದ ಇಂದು (ನ.23) ದೇಶದ ವಿವಿಧ ರಂಗಗಳ ಗಣ್ಯರು ಅನಂತ ನಮನಗಳನ್ನು ಸಲ್ಲಿಸಿದ್ದಾರೆ. ಸಸ್ಯಸಂಕುಲಕ್ಕೂ ಭಾವನೆಗಳಿವೆ ಎಂಬ ಅವರ ವೈಜ್ಞಾನಿಕ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹಿರಿಮೆ ತಂದುಕೊಟ್ಟಿತ್ತು. ಅವರ ಸಾಧನೆ, ಕೊಡುಗೆಗಳು ಸ್ಮರಣೀಯ