Published on: November 27, 2021

ಓಮಿಕ್ರಾನ್

ಓಮಿಕ್ರಾನ್

ಸುದ್ಧಿಯಲ್ಲಿ ಏಕಿದೆ ? ದಕ್ಷಿಣ ಆಫ್ರಿಕಾದಲ್ಲಿ ಕಾಣಿಸೊಂಡಿರುವ ಹೊಸ ರೂಪಾಂತರ ವಿಶ್ವಕ್ಕೆ ಮತ್ತೊಮ್ಮೆ ಬೆದರಿಕೆವೊಡ್ಡುತ್ತಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದ್ದು, ಕಳೆದ ಒಂದು ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇಕಡ 200 ರಷ್ಟು ಹೆಚ್ಚಾಗಿದೆ.

  • ದಕ್ಷಿಣ ಆಫ್ರಿಕಾದಿಂದ ಹುಟ್ಟಿಕೊಂಡ ಈ ರೂಪಾಂತರವು ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೋಟ್ಸ್ವಾನಾ ದೇಶಗಳಿಗೆ ವ್ಯಾಪಿಸಿದೆ. ವಿಜ್ಞಾನಿಗಳು ಇದನ್ನು ಭಯಾನಕ ಮತ್ತು ಅತ್ಯಂತ ಕೆಟ್ಟ ರೂಪಾಂತರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸ ರೂಪಾಂತರಿ ಹೆಸರೇನು?

  • ಈ ಹೊಸ ರೂಪಾಂತರವನ್ನು ಓಮಿಕ್ರಾನ್ (B.1.1.529) ಎಂದು ಹೆಸರಿಸಲಾಗಿದೆ. ರೂಪಾಂತರವು ಒಟ್ಟು 50 ರೂಪಾಂತರಗಳನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಹೊಸ ರೂಪಾಂತರಿ 30 ಸ್ಪೈಕ್ ಪ್ರೋಟೀನ್‌ ಹೊಂದಿದ್ದು, ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ.

ಈ ಓಮಿಕ್ರಾನ್ ಎಷ್ಟು ಅಪಾಯಕಾರಿ?

  • ಆತಂಕಕಾರಿ ಸಂಗತಿಯೆಂದರೆ, ರೂಪಾಂತರದ 50 ರೂಪಾಂತರಗಳಿವೆ. ಈ ರೂಪಾಂತರವು ಕ್ಲಸ್ಟರ್‌ನಂತಿದ್ದು, ಮತ್ತು ಹಿಂದೆ ಹರಡುವ ರೂಪಾಂತರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಸ್ಪೈಕ್ ಪ್ರೋಟೀನ್ ಲಸಿಕೆ ಕೆಲಸ ಮಾಡುವ ದೇಹದ ಭಾಗವಾಗಿದ್ದು, ಈ ರೂಪಾಂತರದ ಮೇಲೆ ಲಸಿಕೆ ಪರಿಣಾಮಕಾರಿಯಾಗದಿರುವ ಸಾಧ್ಯತೆಯೂ ಹೆಚ್ಚಿದೆ.

ಲಸಿಕೆ ಅದರ ಮೇಲೆ ಪರಿಣಾಮ ಬೀರುವುದಿಲ್ಲವೇ?

  • ಈಗ ಸದ್ಯ ಲಭ್ಯವಿರುವ ಲಸಿಕೆಗಳು ಚೀನಾ ವೈರಸ್ ಗೆ ಅನುಗುಣವಾಗಿವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್ ಭಿನ್ನವಾಗಿರುವುದರಿಂದ ಈ ರೂಪಾಂತರದ ವಿರುದ್ಧ ಈಗಿನ ಲಸಿಕೆ ಪರಿಣಾಮಕಾರಿಯಾಗಿದ್ದರೂ ಅದರ ದಕ್ಷತೆಯನ್ನು ಈ ವೈರಸ್ ಕಡಿಮ ಮಾಡಬಹುದು.

ಈ ಹೊಸ ತಳಿ ಎಲ್ಲಿಂದ ಬಂತು?

  • ರೂಪಾಂತರದ ಮೂಲವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇದು HIV/AIDS ಸೋಂಕಿಗೆ ಒಳಗಾದವರಿಂದ ಹರಡಿದೆ ಎಂದು ನಂಬಲಾಗಿದೆ. ಮೇ 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಬೀಟಾ ರೂಪಾಂತರವು ಏಡ್ಸ್ ಸೋಂಕಿತ ವ್ಯಕ್ತಿಯಿಂದ ಹರಡಿತು.

ಭಾರತ ಸರ್ಕಾರದ ತಕ್ಷಣ ಕ್ರಮ:

  • ರೂಪಾಂತರದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಭಾರತದ ಕೇಂದ್ರ ಆರೋಗ್ಯ ಸಚಿವಾಲಯವು ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸ್ವಾನಾದಿಂದ ಆಗಮಿಸುವ ಅಥವಾ ಹೊರಡುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ.