Published on: December 6, 2021
ಸುದ್ಧಿ ಸಮಾಚಾರ 06 ಡಿಸೆಂಬರ್ 2021
ಸುದ್ಧಿ ಸಮಾಚಾರ 06 ಡಿಸೆಂಬರ್ 2021
- ರಾಜ್ಯದ ಆಸ್ತಿ ಮಾಲೀಕರು ತಮ್ಮ ಪ್ರಾಪರ್ಟಿ ದಾಖಲೆಗಳನ್ನು ಸುಲಭವಾಗಿ, ಸುಭದ್ರವಾಗಿ ಸಂಗ್ರಹಿಸಿಡಲು ನೆರವಾಗುವ ಬ್ಲಾಕ್ಚೈನ್ ತಂತ್ರಜ್ಞಾನ ಆಧರಿತ ‘ಸ್ಮಾರ್ಟ್ಕಾರ್ಡ್’ ಮತ್ತು ‘ಕೀ’ ಹೊಂದಿರುವ ವಿಶೇಷ ಡಿಜಿಟಲ್ ವ್ಯಾಲೆಟನ್ನು ರಾಜ್ಯ ಸರಕಾರವು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ.
- ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್ಎಫ್), ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಂತಹ ಆರು ಕ್ಷೇತ್ರಗಳ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ 2021 ಅನ್ನು ನೀಡಿ ಗೌರವಿಸಲಾಯಿತು.
- ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಜನೋಪಯೋಗಿ ‘ಯಶಸ್ವಿನಿ’ ಯೋಜನೆಗೆ ಮರುಜೀವ ನೀಡಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
- ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ.
- ಭಾರತೀಯ ನೌಕಾಪಡೆಯ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
- ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಡಿಸೆಂಬರ್ 5 ರಂದು ವಿಶ್ವ ಮಣ್ಣು ದಿನ ಆಚರಣೆಗೊಳ್ಳುತ್ತದೆ.
- ಡಿಸೆಂಬರ್ 06 ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪುಣ್ಯತಿಥಿ. ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ.