Published on: December 13, 2021

ಲಿಯೋನಾರ್ಡ್ ಧೂಮಕೇತು

ಲಿಯೋನಾರ್ಡ್ ಧೂಮಕೇತು

ಸುದ್ಧಿಯಲ್ಲಿ ಏಕಿದೆ? ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಸಾಗುವ ಲಿಯೋನಾರ್ಡ್‌ ಎಂಬ ಧೂಮಕೇತು, ಸರಿ ಸುಮಾರು 523 ಶತಕೋಟಿ ಕಿ. ಮೀ. ದೂರದಿಂದ ಭೂಮಿಯ ಬಳಿಗೆ ಬಂದು, ಇದೀಗ ದೂರ ಸರಿಯುತ್ತಿದೆ.

ಮುಖ್ಯಾಂಶಗಳು

  • 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭೂಮಿಗೆ ಇಷ್ಟು ಸಮೀಪ ಬಂದಿದ್ದ ಲಿಯೋನಾರ್ಡ್‌ ಧೂಮಕೇತು, ಭೂಮಿಯಿಂದ 35 ದಶಲಕ್ಷ ಕಿ. ಮೀ. ದೂರದಲ್ಲಿ ಹಾದು ಹೋಗಿದೆ.
  • ಈವರೆಗೆ ನಮ್ಮ ಸೌರಮಂಡಲವೊಂದರಲ್ಲೇ 3,700 ಧೂಮಕೇತುಗಳನ್ನು ಗುರ್ತಿಸಲಾಗಿದೆ. ಇದೀಗ ಭೂಮಿಯ ಬಳಿ ಬಂದಿದ್ದ ಲಿಯನಾರ್ಡೋ ಧೂಮಕೇತು ಕೂಡಾ ಸೂರ್ಯನನ್ನು ಸುತ್ತುತ್ತದೆ.
  • ಇದು ಸಾಕಷ್ಟು ವರ್ಷಗಳಿಂದ ಭೂಮಿಯ ಮೇಲಿಂದ ಯಾರೊಬ್ಬರಿಗೂ ಕಾಣಿಸದೇ ಸಂಚರಿಸಿದೆ. ಇದರ ಒಡಲಲ್ಲಿ ಘನೀಕೃತ ಕಾರ್ಬನ್-ಡೈ-ಆಕ್ಸೈಡ್, ಸಾರಜನಕ ಮತ್ತು ಕಾರ್ಬನ್ ಮಾನಾಕ್ಸೈಡ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಭೂಮಿಯ ವಾತಾವರಣವನ್ನು ಬಿಟ್ಟು ಸೂರ್ಯನ ಹತ್ತಿರ ಹೋದಂತೆಲ್ಲಾ ಅದರಲ್ಲಿನ ವಸ್ತುಗಳೆಲ್ಲಾ ಕರಗಿ ಆವಿಯಾಗಿ ಧೂಮಕೇತು ಬಾಲ ತುಂಬಾ ಉದ್ದವಾಗುತ್ತದೆ.
  • ಸಾಮಾನ್ಯವಾಗಿ ಧೂಮಕೇತುಗಳು ಉದ್ದವಾದ ಬಾಲವನ್ನು ಹೊಂದಿರುತ್ತವೆ. ಧೂಮಕೇತುವಿನ ಮೂತಿ ಗಟ್ಟಿಯಾಗಿರುತ್ತದೆ. ಇದು ಬಿಳಿ ಬಣ್ಣದಲ್ಲಿದ್ದ ಹೊಳೆಯುತ್ತಿರುತ್ತದೆ. ಘನ ವಸ್ತುವಿನ ರೀತಿ ಕಾಣುವ ಧೂಮಕೇತುವಿನ ಮೂತಿಯ ಹಿಂದೆ ಕಿ. ಮೀ. ಗಟ್ಟಲೆ ಉದ್ದದ ಬಾಲ ಇರುತ್ತದೆ. ಈ ಬಾಲವು ಧೂಳಿನ ಕಣಗಳು ಹಾಗೂ ಕೆಲವೊಮ್ಮೆ ಹಿಮ ಹೊಂದಿರುತ್ತವೆ ಎಂದೂ ಅಂದಾಜಿಸಲಾಗಿದೆ.