Published on: December 13, 2021
ಬಿ ಸೆನ್(ಎಬಿ)
ಬಿ ಸೆನ್(ಎಬಿ)
ಸುದ್ಧಿಯಲ್ಲಿ ಏಕಿದೆ? ಗ್ರಹಕಾಯಗಳ ಉಗಮ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಖಗೋಳ ವಿಜ್ಞಾನಿಗಳು ಹೊಂದಿರುವ ಕಲ್ಪನೆಗೆ ಸವಾಲೆಸೆಯುವ ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರತಾದ ಗ್ರಹ)ವೊಂದು ಪತ್ತೆಯಾಗಿದೆ.
ಮುಖ್ಯಾಂಶಗಳು
- ಹೊಸದಾಗಿ ಪತ್ತೆಯಾಗಿರುವ ಈ ಗ್ರಹಕ್ಕೆ ಬಿ ಸೆನ್(ಎಬಿ) ಎಂದು ನಾಮಕರಣ ಮಾಡಲಾಗಿದ್ದು, ಇದು ತನ್ನ ಮಾತೃ ನಕ್ಷತ್ರಗಳನ್ನು ನಮ್ಮ ಸೂರ್ಯ ಮತ್ತು ಭೂಮಿಯ ನಡುವಿನ ಅಂತರಕ್ಕಿಂತ 530 ಪಟ್ಟು ಹೆಚ್ಚು ಅಂತರದಲ್ಲಿ ಪರಿಭ್ರಮಿಸುತ್ತಿದೆ
- ಭೂಮಿಯಿಂದ ಸುಮಾರು 325 ಜ್ಯೋತಿರ್ವರ್ಷ ದೂರ ಇರುವ ಬಿ ಸೆಂಟೌರಿ ಹೆಸರಿನ ಎರಡು ನಕ್ಷತ್ರ ವ್ಯವಸ್ಥೆಯಲ್ಲಿ ಈ ವಿಲಕ್ಷಣ ಗ್ರಹ ಪತ್ತೆಯಾಗಿದೆ. ನಮ್ಮ ಗುರು ಗ್ರಹಕ್ಕಿಂತ 11 ಪಟ್ಟು ದೊಡ್ಡದಿರುವ ಈ ಗ್ಯಾಸ್ ಜೈಂಟ್(ಅನಿಲ ದೈತ್ಯ), ಗುರುಗ್ರಹಕ್ಕಿಂತ 100 ಪಟ್ಟು ಅಗಲವಿರುವ ವಿಶಾಲ ಕಕ್ಷೆಯಲ್ಲಿ ಎರಡು ನಕ್ಷತ್ರಗಳನ್ನು ಪರಿಭ್ರಮಿಸುತ್ತಿದೆ.
- ಇದು ಸೂರ್ಯನ ಮೂರು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿರುವ ಎರಡು ಬೃಹತ್ ನಕ್ಷತ್ರಗಳನ್ನು ಸುತ್ತುತ್ತಿದೆ
- ಮಾರ್ಕಸ್ ಜಾನ್ಸನ್ ನೇತೃತ್ವದ ಖಗೋಳ ವಿಜ್ಞಾನಿಗಳ ತಂಡ ಚಿಲಿಯ ಪರಾನಾಲ್‌ನಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ, ವೆರಿ ಲಾರ್ಜ್ ಟೆಲಿಸ್ಕೋಪ್ ಸಹಾಯದಿಂದ ಈ ಗ್ರಹವನ್ನು ಪತ್ತೆ ಮಾಡಿದ್ದಾರೆ. ಬಿ ಸೆಂಟೌರಿ ವ್ಯವಸ್ಥೆಯು ಬಿ ಸೆಂಟೌರಿ ಎ ಮತ್ತು ಬಿ ಸೆಂಟೌರಿ ಬಿ ಹೆಸರಿನ ಎರಡು ನಕ್ಷತ್ರಗಳಿದ್ದು, ಇವೆರೆಡು ಸೇರಿ ಸೂರ್ಯನ ದ್ರವ್ಯರಾಶಿಯ ಸುಮಾರು 6ರಿಂದ 10 ಪಟ್ಟು ತೂಗುತ್ತವೆ. ಈಗ ಪತ್ತೆಯಾಗಿರುವ ಗ್ರಹ ಈ ಎರಡೂ ನಕ್ಷತ್ರಗಳನ್ನು ಪರಿಭ್ರಮಿಸುತ್ತಿದೆ
- ಈ ಬೃಹತ್ ನಕ್ಷತ್ರಗಳು ಹೆಚ್ಚಿನ ಶಕ್ತಿಯ ವಿಕಿರಣವನ್ನು ಹೊರಸೂಸುತ್ತಿದ್ದು, ಅಸ್ತಿತ್ವದಲ್ಲಿರುವ ಈ ಅನಿಲ ದೈತ್ಯದ ರಚನೆಗೆ ಬೆದರಿಕೆಯೊಡ್ಡುತ್ತಿವೆ. ಸಾಮಾನ್ಯವಾಗಿ ಅನಿಲ ದೈತ್ಯ ಗ್ರಹಗಳು ಇಷ್ಟು ಬೃಹತ್ ನಕ್ಷತ್ರಗಳ ಸುತ್ತ ರೂಪುಗೊಳ್ಳುವುದಿಲ್ಲ ಎಂದೇ ಇದುವರೆಗೂ ಖಗೋಳ ವಿಜ್ಞಾನಿಗಳು ನಂಬಿದ್ದರು.