Published on: December 13, 2021
ಸುದ್ಧಿ ಸಮಾಚಾರ 13 ಡಿಸೆಂಬರ್ 2021
ಸುದ್ಧಿ ಸಮಾಚಾರ 13 ಡಿಸೆಂಬರ್ 2021
- ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮಿಕ್ಷೆಯಿಂದ ಬಹಿರಂಗವಾಗಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಭವ್ಯವಾದ ಕಾಶಿ ವಿಶ್ವನಾಥ್ ಧಾಮ ಕಾರಿಡಾರ್ ಅನ್ನು ಉದ್ಘಾಟಿಸುತ್ತಿದ್ದಾರೆ. 2019ರ ಮಾರ್ಚ್ 8ರಂದು ಪ್ರಧಾನಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.
- ಭಾರತದ ಮೂರನೇ ಭುವನ ಸುಂದರಿಯಾಗಿ ಪಂಜಾಬ್ ಮೂಲದ ರೂಪದರ್ಶಿ, ನಟಿ ಹರ್ನಾಜ್ ಕೌರ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಪರಗ್ವೆ ಹಾಗೂ ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಧರಿಸಿದ್ದಾರೆ.
- ಆನ್ಲೈನ್ ಪೇಮೆಂಟ್ ತಾಣವಾದ ಪೇಟಿಎಂ.ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ನೀಡಿದೆ.
- ಒಡಿಶಾ ತೀರಭಾಗದ ಚಂದೀಪುರದಲ್ಲಿ ಲಂಬವಾಗಿ ಉಡಾವಣೆಗೊಂಡ ಕಡಿಮೆ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ(VL-SRSAM)ಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಆಂತರಿಕ ಪರೀಕ್ಷಾ ವಲಯ(ಐಟಿಆರ್)ದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ
- ಸೆಕೆಂಡ್ಗೆ 47 ಕಿ. ಮೀ. ವೇಗದಲ್ಲಿ ಸಾಗುವ ಲಿಯೋನಾರ್ಡ್ ಎಂಬ ಧೂಮಕೇತು, ಸರಿ ಸುಮಾರು 523 ಶತಕೋಟಿ ಕಿ. ಮೀ. ದೂರದಿಂದ ಭೂಮಿಯ ಬಳಿಗೆ ಬಂದು, ಇದೀಗ ದೂರ ಸರಿಯುತ್ತಿದೆ.
- ಗ್ರಹಕಾಯಗಳ ಉಗಮ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಖಗೋಳ ವಿಜ್ಞಾನಿಗಳು ಹೊಂದಿರುವ ಕಲ್ಪನೆಗೆ ಸವಾಲೆಸೆಯುವ ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರತಾದ ಗ್ರಹ)ವೊಂದು ಪತ್ತೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಈ ಗ್ರಹಕ್ಕೆ ಬಿ ಸೆನ್(ಎಬಿ) ಎಂದು ನಾಮಕರಣ ಮಾಡಲಾಗಿದೆ.