Published on: December 27, 2021

ಬಲಶಾಲಿ ಟೆಲಿಸ್ಕೋಪ್ ‘ಜೇಮ್ಸ್ ವೆಬ್’

ಬಲಶಾಲಿ ಟೆಲಿಸ್ಕೋಪ್ ‘ಜೇಮ್ಸ್ ವೆಬ್’

ಸುದ್ಧಿಯಲ್ಲಿ ಏಕಿದೆ ? ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ವಿಶ್ವದ ಬೃಹತ್‌ ಹಾಗೂ ಬಲಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್‌ ‘ಜೇಮ್ಸ್‌ ವೆಬ್‌’ ಅನ್ನು ಉಡಾವಣೆ ಮಾಡಲಾಗಿದೆ.

ಮುಖ್ಯಾಂಶಗಳು

  • ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಅಂದರೆ, 16 ಲಕ್ಷ ಕಿಲೋ ಮೀಟರ್‌ ಸಂಚರಿಸಲಿರುವ ಟೆಲಿಸ್ಕೋಪ್‌, ಬ್ರಹ್ಮಾಂಡ ಸೃಷ್ಟಿಯ ಆರಂಭದಲ್ಲಿ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳ ಉದಯ ಸೇರಿ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸುತ್ತದೆ. ಇದು 10 ವರ್ಷ ಕಾರ್ಯಾವಧಿ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸುಮಾರು 1,350 ವರ್ಷಗಳ ಹಿಂದಕ್ಕೆ ನಡೆದ ವಿಷಯಗಳ ಕುರಿತು ಸಹ ಅಧ್ಯಯನ ನಡೆಸಲಿರುವುದರಿಂದ ಜಗತ್ತಿನ ಕಣ್ಣುಗಳು ಜೇಮ್ಸ್‌ ವೆಬ್‌ನತ್ತ ನೆಟ್ಟಿವೆ.
  • ವಿಶ್ವದ ಉಗಮ, ಭೂಮಿಯ ಹುಟ್ಟು, ನಾವು ಯಾರು, ಎಲ್ಲಿಂದ ಬಂದೆವು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾಡಲಿದೆ
  • ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ.
  • ಈ ಜೇಮ್ಸ್ ವೆಬ್​ ಬಾಹ್ಯಾಕಾಶ ಟೆಲಿಸ್ಕೋಪ್​ ಒಟ್ಟು ನಾಲ್ಕು ಪ್ರಮುಖ ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ದಿದೆ. ನಿಯರ್​ ಇನ್​ಫ್ರಾರೆಡ್​ ಕ್ಯಾಮರಾ (ಸಮೀಪ-ಅತಿಗೆಂಪು ಕ್ಯಾಮರಾ), ನಿಯರ್​ ಇನ್​ಫ್ರಾರೆಡ್​ ಸ್ಪೆಕ್ಟೋಗ್ರಾಫ್​, ಮಿಡ್​ ಇನ್​ಫ್ರಾರೆಡ್​ ಉಪಕರಣ ಮತ್ತು ನಿಯರ್ ಇನ್​ಫ್ರಾರೆಡ್​ ಇಮೇಜರ್ ಮತ್ತು ಸ್ಲಿಟ್‌ಲೆಸ್ ಸ್ಪೆಕ್ಟ್ರೋಗ್ರಾಪ್​​ಗಳು ಈ ಉಪಕರಣಗಳಾಗಿವೆ. ಬ್ರಹ್ಮಾಂಡದ ಮೊದಲ ಗೆಲಾಕ್ಸಿಯಲ್ಲಿ ಇದುವರೆಗೂ ಪತ್ತೆಯಾಗದೆ ಉಳಿದ ರಚನೆಗಳನ್ನು ಈ ಉಪಕರಣಗಳ ಸಹಾಯದಿಂದ ಜೇಮ್ಸ್​ ವೆಬ್​ ಟೆಲಿಸ್ಕೋಪ್​ ಪತ್ತೆ ಹಚ್ಚಲಿದೆ. ಅಷ್ಟೇ ಅಲ್ಲ, ನಕ್ಷತ್ರ ಮತ್ತು ಗ್ರಹ ವ್ಯವಸ್ಥೆಗಳು ರೂಪುಗೊಳ್ಳುವ ಧೂಳುಮೋಡದ ಒಳಗೆ ಇದು ಗಮನಹರಿಸಲಿದೆ.
  • ಜೇಮ್ಸ್ ವೆಬ್​​ ಟೆಲಿಸ್ಕೋಪ್​​ನ ದರ್ಪಣದ ವ್ಯಾಸ 6.5 ಮೀಟರ್ ಇದೆ. ವೈಜ್ಞಾನಿಕ ಕಾರಣಕ್ಕಾಗಿ ತೆಳುವಾಗಿ ಚಿನ್ನದ ಲೇಪನ ಮಾಡಲಾಗಿದೆ. ಹಾಗೇ, ಈ ದರ್ಪಣವನ್ನು 18 ಚಿಕ್ಕ ಷಡ್ಭುಜೀಯ ದರ್ಪಣಗಳಿಂದ ತಯಾರಿಸಲಾಗಿದೆ.
  • ಜೇಮ್ಸ್ ವೆಬ್​ ಟೆಲಿಸ್ಕೋಪ್​ ಅತಿಗೆಂಪು ತರಂಗಗಳ ಮೂಲಕ ಅಧ್ಯಯನ ಮಾಡುತ್ತದೆ