Published on: December 31, 2021
ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ ? ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.
ಮುಖ್ಯಾಂಶಗಳು
- ಡಿಎಸ್ ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇನ್ನು ಬಸು ಬೇವಿನ ಗಿಡದ ಅವರ ಓಡಿ ಹೋದ ಕೃತಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ತೊಗಲ ಚೀಲದ ಕರ್ಣ ಮಹಾ ಕಾವ್ಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
- ಏಳು ಕವನ ಸಂಕಲನಗಳು, ಎರಡು ಕಾದಂಬರಿಗಳು, ಐದು ಸಣ್ಣ ಕಥೆಗಳು, ಎರಡು ನಾಟಕಗಳು ಮತ್ತು 20 ಭಾರತೀಯ ಭಾಷೆಗಳಲ್ಲಿ ಜೀವನ ಚರಿತ್ರೆ, ಆತ್ಮಚರಿತ್ರೆ, ವಿಮರ್ಶೆ ಮತ್ತು ಮಹಾಕಾವ್ಯ ವಿಭಾಗಗಳಿಂದ ತಲಾ ಒಂದು ಪುಸ್ತಕಕ್ಕೆ ಪ್ರಶಸ್ತಿ ನೀಡಲಾಗುತ್ತದೆ.
- ಗೋಖಲೆ ಅವರ ‘ಥಿಂಗ್ಸ್ ಟು ಲೀವ್ ಬೆಹಿಂಡ್ ‘ ಕಾದಂಬರಿ ಮತ್ತು ಬಸು ಮತ್ತು ಹುಸೇನ್ ಅವರ ಕ್ರಮವಾಗಿ ನಾಟಕ ಮತ್ತು ಕಿರು ಕಥೆಗಳಿಗಾಗಿ ಪ್ರಶಸ್ತಿ ಸಂದಿದೆ.
- ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿಗೆ 1,00,000 ರೂ. ನಗದು ಸನ್ಮಾನ ಒಳಗೊಂಡಿರಲಿದೆ. ಯುವ ಮತ್ತು ಬಾಲ ಪುರಸ್ಕಾರ 50.000 ರೂ ನಗದು ಮತ್ತು ಸನ್ಮಾನ ಒಳಗೊಂಡಿರಲಿದೆ. ಇನ್ನು ಈ ಪ್ರಶಸ್ತಿಯನ್ನು 2022ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು