Published on: January 6, 2022
ಸೂಪರ್ ಬಗ್ಸ್
ಸೂಪರ್ ಬಗ್ಸ್
ಸುದ್ಧಿಯಲ್ಲಿ ಏಕಿದೆ ? ಹಲವು ವರ್ಷಗಳಿಂದ ಪ್ರಪಂಚವನ್ನು ಆವರಿಸಿರುವ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ಸೂಕ್ಷ್ಮಜೀವಿಗಳು. ಹಿಂದೆಂದೂ ಕೇಳದ ಅರಿಯದ ಈ ಜೀವಿಗಳು ಜನಜೀವನವನ್ನು ಅಸ್ಥಿರಗೊಳಿಸಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಮುಂದುವರಿದಂತೆ ಈ ರೋಗಾಣುಗಳ ವಿರುದ್ಧ ಔಷಧಿಗಳನ್ನು ಆವಿಷ್ಕರಿಸಿ ಅನೇಕ ಜನರ ಪ್ರಾಣವನ್ನು ಉಳಿಸಿವೆ.
ಆ್ಯಂಟಿಬಯಾಟಿಕ್ ಪ್ರತಿರೋಧ ಎಂದರೇನು ?
- ಮನುಷ್ಯನಲ್ಲಿನ ಅನೇಕ ಸೋಂಕುಗಳಿಂದಾಗುವ ಸಾವಿಗೆ ಮುಖ್ಯ ಕಾರಣವೆಂದರೆ ಅದು ಬ್ಯಾಕ್ಟೀರಿಯಗಳಿರಬಹುದು, ವೈರಾಣುಗಳಿರಬಹುದು ಪರಾವಲಂಬಿ ಜೀವಿಗಳಿರಬಹುದು ಅಥವಾ ಶಿಲೀಂಧ್ರಗಳಿರಬಹುದು. ಆದರೆ, ಮನುಷ್ಯನ ಆವಿಷ್ಕಾರಗಳಲ್ಲಿ ಒಂದಾದ ಆ್ಯಂಟಿಬಯಾಟಿಕ್ಗಳು ಈ ಸೂಕ್ಷ್ಮಜೀವಿಗಳ ವಿರುದ್ಧ ಇರುವ ರಾಮಬಾಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸೂಕ್ಷ್ಮಜೀವಿಗಳು ಆ್ಯಂಟಿಬಯಾಟಿಕ್ಗಳ ವಿರುದ್ಧ ಸಮರ ಸಾರಿ ಜಯಗಳಿಸಲಾರಂಭಿಸಿವೆ. ಇದನ್ನು ‘ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್’ ಅಥವಾ ಆ್ಯಂಟಿಬಯಾಟಿಕ್ ಪ್ರತಿರೋಧ ಎನ್ನಬಹುದಾಗಿದೆ.
- ಇದರಿಂದಾಗಿ ಅನೇಕ ಸೋಂಕುಗಳ ಚಿಕಿತ್ಸೆಗಾಗಿ ಬಳಸುತ್ತಿದ್ದ ಆ್ಯಂಟಿಬಯಾಟಿಕ್ ಗಳು ನಿಷ್ಪಯೋಜಕವಾಗುತ್ತಿವೆ.
ಏನಿದು ಸೂಪರ್ ಬಗ್ಸ್ ?
- ಇವುಗಳು ಸೂಕ್ಷ್ಮಜೀವಿಗಳ ತಳಿಗಳಾಗಿದ್ದು ಇವುಗಳ ನಾಶಕ್ಕೆ ಹಿಂದೊಮ್ಮೆ ಬಳಸುತ್ತಿದ್ದ ಆ್ಯಂಟಿಬಯಾಟಿಕ್ಗಳ ವಿರುದ್ಧ ಪ್ರತಿರೋಧವನ್ನು ಬೆಳಸಿಕೊಂಡಿರುವಂತಹದ್ದು.
- ಉದಾಹರಣೆಗೆ ನ್ಯೂಮೋನಿಯಾ ಮುಂತಾದ ಕಾಯಿಲೆಗೆ ಕಾರಣವಾದ ಸ್ಟೆಫೈಲೋಕಾಕಲ್ ಆರಿಯಸ್ ಸೂಕ್ಷ್ಮಜೀವಿಯು ಮೆತಸಿಲಿನ್ ಎಂಬ ಔಷಧಿಗೆ ಅಂದರೆ ಈ ರೋಗವನ್ನು ಗುಣಪಡಿಸಲು ಬಳಸುತ್ತಿದ್ದ ಔಷಧಿಗೆ ಪ್ರತಿರೋಧವನ್ನು ಬೆಳಸಿಕೊಂಡಿರುವುದು ಅಂತೆಯೇ ಟಿ.ಬಿ ಯಂತಹ ಶ್ವಾಸಕೋಶದ ಸಂಬಂಧಿ ಸೋಂಕನ್ನು ನಿವಾರಿಸಲು ದಕ್ಷವಾಗಿ ಬಳಸುತ್ತಿದ್ದ ಕ್ಷಯ ವಿರೋಧಿ ಔಷಧಿಗಳ ವಿರುದ್ಧವು ಪ್ರತಿರೋಧವನ್ನು ಬೆಳಸಿಕೊಂಡಿವೆ.
ಈ ಸೂಕ್ಷ್ಮಜೀವಿಗಳು ಆ್ಯಂಟಿಬಯಾಟಿಕ್ಗಳ ವಿರುದ್ಧ ಪ್ರತಿರೋಧವನ್ನು ಬೆಳಸಿಕೊಳ್ಳಲು ಕಾರಣಗಳೇನು?
- ಆ್ಯಂಟಿಬಯಾಟಿಕ್ಗಳನ್ನು ಸಮಯೋಚಿತವಾಗಿ ಬಳಸದೇ ಇರುವುದು
- ಶುದ್ಧವಾದ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕೊರತೆ
- ಕೈಗಾರಿಕಾ ಹರಿವುಗಳು ಹಾಗೂ ಅದರ ನಿರ್ವಹಣೆಯಲ್ಲಿ ವ್ಯತ್ಯಯ
- ಸೂಕ್ಷ್ಮಜೀವಿಗಳಲ್ಲಾಗುವ ರೂಪಾಂತರ / ಜೆನಿಟಿಕ್ ಮ್ಯುಟೇಷನ್ಗಳು
ಸೂಪರ್ಬಗ್ಗಳು ಹರಡುವುದನ್ನು ತಡೆಯುವ ಬಗೆ
- ಆ್ಯಂಟಿಬಯಾಟಿಕ್ಗಳನ್ನು ಅವಶ್ಯಕತೆಯಿದ್ದಲ್ಲಿ ಹಾಗೂ ಸಮಯೋಚಿತವಾಗಿ ಬಳಸುವುದು
- ಆ್ಯಂಟಿಬಯಾಟಿಕ್ಗಳು ತಪ್ಪು ಬಳಕೆ ಹಾಗೂ ಅತಿಯಾಗಿ ಬಳಸುವುದನ್ನು ತಪ್ಪಿಸುವುದು, ವೈದ್ಯರ ಸಮಾಲೋಚನೆಯೊಂದಿಗೆ ಎಷ್ಟು ಬಾರಿ, ಎಷ್ಟು ಪ್ರಮಾಣ, ಎಷ್ಟು ದಿನ ತೆಗೆದುಕೊಳ್ಳಬೇಕೆಂಬುದನ್ನು ಪಾಲಿಸುವುದು
- ನೈರ್ಮಲ್ಯತೆ ಹಾಗೂ ಶುದ್ಧ ನೀರಿದ ಸರಬರಾಜು
- ವೈಯಕ್ತಿಕ ಸ್ವಚ್ಛತೆ, ಕೈಗಳ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು
- ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದು
- ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು
- ಔಷಧಿಗಳ ಬಳಕೆಯಲ್ಲಿ ಧೃಢವಾದ ನೀತಿಗಳನ್ನು ಸ್ಥಳೀಯ, ರಾಷ್ಟ್ರಮಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸುವುದು.
ಮುಂದೊಂದು ದಿನ ಸೋಂಕಿನ ವಿರುದ್ಧದ ಅತ್ಯಂತ ಪರಿಣಾಮಕಾರಿ ಆ್ಯಂಟಿಬಯಾಟಿಕ್ಗಳ ಬಳಕೆಯನ್ನು ನಿಷ್ಪಯೋಜಕ ಮಾಡುವಂತಹ ಶಕ್ತಿಯುಳ್ಳ ಸೂಪರ್ ಬಗ್ಗಳ ಬಗ್ಗೆ ಎಚ್ಚರವಿರಲಿ.