Published on: December 3, 2022
ಅಂಡಮಾನ್‌ನ ದ್ವೀಪಗಳಿಗೆ ವೀರ ಯೋಧರ ಹೆಸರು
ಅಂಡಮಾನ್‌ನ ದ್ವೀಪಗಳಿಗೆ ವೀರ ಯೋಧರ ಹೆಸರು
ಸುದ್ದಿಯಲ್ಲಿ ಏಕಿದೆ?
ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನವಸತಿ ಇಲ್ಲದ 21 ದ್ವೀಪಗಳಿಗೆದೇಶದ ಅತ್ಯುತ್ತಮ ಸೇನಾ ಪ್ರಶಸ್ತಿಯಾದ ಪರಂವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಸೈನಿಕರ ಹೆಸರನ್ನು ಕೇಂದ್ರ ಸರ್ಕಾರ ಹೆಸರಿಸಿದೆ.
ಮುಖ್ಯಾಂಶಗಳು
- ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿ 16 ದ್ವೀಪಗಳು ಹಾಗೂ ದಕ್ಷಿಣ ಅಂಡಮಾನ್‌ನಲ್ಲಿ 5 ದ್ವೀಪ ಸೇರಿ ಒಟ್ಟು 21 ದ್ವೀಪಗಳಿಗೆ ನಾಮಕರಣ ಮಾಡಲಾಗಿದೆ.
- ಐಎನ್‌ಎಎನ್308’ ಸಂಖ್ಯೆಯ ಜನವಸತಿಯಿಲ್ಲದ ದ್ವೀಪವನ್ನು ‘ಕರಮ್ ಸಿಂಗ್ ದ್ವೀಪ’ಎಂದು ಹೆಸರಿಸಲಾಗಿದೆ.
- ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿರುವ ‘ಐಎನ್‌ಎಎನ್370’ ಸಂಖ್ಯೆಯ ಮೊದಲ ಜನವಸತಿಯಿಲ್ಲದ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಇಡಲಾಯಿತು. ಈಗ ಇದನ್ನು ‘ಸೋಮನಾಥ್ ದ್ವೀಪ’ ಎಂದು ಕರೆಯಲಾಗುವುದು.
ಉದ್ದೇಶ :ವೀರ ಸೈನಿಕರಿಗೆ ಗೌರವ ಸಲ್ಲಿಸಲು ಕೇಂದ್ರ ತೆಗೆದುಕೊಂಡ ನಿರ್ಧಾರ ಸಂತಸ ತಂದಿದೆ.
ಮೇಜರ್ ಸೋಮನಾಥ್ ಶರ್ಮಾ :
- ಅವರು ಪರಮವೀರ ಚಕ್ರದ ಮೊದಲ ಪುರಸ್ಕೃತರು.
- 1947ರ ನವೆಂಬರ್ 3 ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ತಡೆಯುವ ಕಾರ್ಯಾಚರಣೆಯಲ್ಲಿ ಶರ್ಮಾ ಅವರು ಪ್ರಾಣ ಕಳೆದುಕೊಂಡರು. ಬದ್ಗಾಮ್ ಕದನದ ಸಮಯದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯನ್ನು ನೀಡಲಾಗಿತ್ತು.
- ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಿಸುವಲ್ಲಿ 1947 ರ ನವೆಂಬರ್ 3 ರಂದು ಅವರು ಪ್ರದರ್ಶಿಸಿದ ಅಪ್ರತಿಮ ಸಾಹಸವನ್ನು ಗುರುತಿಸಿ ಸೋಮನಾಥ ಶರ್ಮಾ ಅವರಿಗೆ ಮರಣೋತ್ತರವಾಗಿ 21 ಜೂನ್ 1950 ರಂದು ಪರಮ ವೀರ ಚಕ್ರ ಪದಕವನ್ನು ನೀಡಿ ಗೌರವಿಸಲಾಯಿತು.
ಪರಮವೀರ ಚಕ್ರ:
- ಜನವರಿ 26, 1950 (ಗಣರಾಜ್ಯೋತ್ಸವ)ದಂದು ಆಗಸ್ಟ್ 15, 1947 (ಭಾರತದ ಸ್ವಾತಂತ್ರ್ಯ ದಿನಾಚರಣೆ)ದಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುವ ಈ ಪುರಸ್ಕಾರವು ಭಾರತ ರತ್ನದ ನಂತರ ದೇಶದ ಎರಡನೇ ಅತಿ ದೊಡ್ಡ ಪುರಸ್ಕಾರ. ಈ ಪುರಸ್ಕಾರವನ್ನು ಹೊಂದಿದವರು ತಮ್ಮ ಹೆಸರಿನ ಜೊತೆಗೆ ಇದರ ಹೆಸರನ್ನು ಉಪಯೊಗಿಸುವ ಅಧಿಕಾರ ಪಡೆದಿರುತ್ತಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಒಂದು ಕೇಂದ್ರಾಡಳಿತ ಪ್ರದೇಶವಾಗಿದೆ. ಇದು ಬಂಗಾಳ ಕೊಲ್ಲಿಯ ದಕ್ಷಿಣಕ್ಕೆ ಹಿಂದೂ ಮಹಾಸಾಗರದಲ್ಲಿದೆ. ಮತ್ತು ಭೌಗೋಳಿಕವಾಗಿ ಆಗ್ನೇಯ ಏಷ್ಯಾದ ಭಾಗವಾಗಿದೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸುಮಾರು 572 ಸಣ್ಣ ಮತ್ತು ದೊಡ್ಡ ದ್ವೀಪಗಳಿಂದ ಕೂಡಿದ್ದು, ಅವುಗಳಲ್ಲಿ ಕೆಲವು ದ್ವೀಪಗಳು ಮಾತ್ರ ಜನವಸತಿ ಹೊಂದಿವೆ.
- ರಾಜಧಾನಿ :ಪೋರ್ಟ್ ಬ್ಲೇರ್.
- ಅಂಡಮಾನ್ ಸಮುದ್ರವು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ನಿಂದ ಪ್ರತ್ಯೇಕಿಸುತ್ತದೆ.
- ಎರಡು ಪ್ರಮುಖ ದ್ವೀಪಸಮೂಹಗಳನ್ನು ಒಳಗೊಂಡಿರುವ ಈ ದ್ವೀಪಸಮೂಹವನ್ನು 10°N ಅಕ್ಷಾಂಶದಿಂದ ಬೇರ್ಪಡಿಸಲಾಗಿದೆ, ಉತ್ತರದಲ್ಲಿ ಅಂಡಮಾನ್ ದ್ವೀಪಗಳು ಮತ್ತು ದಕ್ಷಿಣದಲ್ಲಿ ನಿಕೋಬಾರ್ ದ್ವೀಪಗಳು.
- ಈ ದ್ವೀಪಸಮೂಹದ ಪೂರ್ವದಲ್ಲಿ ಅಂಡಮಾನ್ ಸಮುದ್ರ ಮತ್ತು ಪಶ್ಚಿಮದಲ್ಲಿ ಬಂಗಾಳ ಕೊಲ್ಲಿ ಇದೆ.
-
ದೇಶದಲ್ಲಿ ಮೊದಲ ಬಾರಿಗೆ ಪೋರ್ಟ್ ಬ್ಲೇರ್‌ನಲ್ಲಿಯೇ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ