ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ
ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ
ಸುದ್ದಿಯಲ್ಲಿ ಏಕಿದೆ? ಇತ್ತೀಚಿಗೆ ನಡೆದ ಭಾರತ ಮತ್ತು ಭೂತಾನ್ ನಡುವೆ ದ್ವಿಪಕ್ಷೀಯ ಸಭೆಯಲ್ಲಿ ಭೂತಾನ್ ದೇಶವು ಭಾರತ ಪ್ರಾರಂಭಿಸಿದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟವನ್ನು ಸೇರಿದೆ.
ಮುಖ್ಯಾಂಶಗಳು
ಈ ಸಭೆಯಲ್ಲಿ ಹವಾಮಾನ ಬದಲಾವಣೆ, ವಾಯು ಗುಣಮಟ್ಟ, ಅರಣ್ಯ, ವನ್ಯಜೀವಿ ನಿರ್ವಹಣೆ ಮತ್ತು ಪರಿಸರ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಎರಡೂ ದೇಶಗಳು ಒಪ್ಪಿಕೊಂಡವು
ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟದ ಬಗ್ಗೆ
ಪ್ರಾರಂಭ: 9ನೇ ಏಪ್ರಿಲ್ 2023 ಪ್ರಾಜೆಕ್ಟ್ ಟೈಗರ್ ನ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಘೋಷಿಸಲಾಯಿತು
2023-24 ರಿಂದ 2027-28 ರವರೆಗಿನ ಐದು ವರ್ಷಗಳ ಅವಧಿಗೆ 150 ಕೋಟಿ ರೂ.ಗಳ ಒಂದು-ಬಾರಿ ಹಣಕಾಸಿನ ಬೆಂಬಲವನ್ನು ನೀಡಲು ಭಾರತ ಬದ್ಧವಾಗಿದೆ
ಪ್ರಧಾನ ಕಛೇರಿ: ಭಾರತ
ಉದ್ದೇಶ: ಈ ಜಾಗತಿಕ ಒಕ್ಕೂಟವು ವಿಶ್ವದ ಏಳು ಪ್ರಮುಖ ಬಿಗ್ ಕ್ಯಾಟ್ ಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.ಅವುಗಳೆಂದರೆ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾ.
ಸದಸ್ಯತ್ವ: 96 ದೇಶಗಳಿಗೆ ಮುಕ್ತವಾಗಿರುತ್ತದೆ. ಈ ದೇಶಗಳು ಈ ಬಿಗ್ ಕ್ಯಾಟ್ ಗಳ ನೈಸರ್ಗಿಕ ಆವಾಸಸ್ಥಾನವನ್ನು ಹೊಂದಿರುವ ದೇಶಗಳಾಗಿವೆ.
ಈ ಮೈತ್ರಿಯು ಇತರ ದೇಶಗಳು, ಸಂರಕ್ಷಣಾ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆಗಳು, ವ್ಯವಹಾರಗಳು ಮತ್ತು ದೊಡ್ಡ ಬಿಗ್ ಕ್ಯಾಟ್ ಗಳನ್ನು ಬೆಂಬಲಿಸಲು ಆಸಕ್ತಿ ಹೊಂದಿರುವ ಕಾರ್ಪೊರೇಟ್‌ಗಳಿಗೆ ಮುಕ್ತವಾಗಿದೆ.
7 ಬಿಗ್ ಕ್ಯಾಟ್ ಗಳಲ್ಲಿ, ಭಾರತವು 5 ಕ್ಕೆ ನೆಲೆಯಾಗಿದೆ: ಹುಲಿ, ಸಿಂಹ, ಚಿರತೆ, ಹಿಮ ಚಿರತೆ ಮತ್ತು ಚೀತಾ