Published on: January 6, 2023

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಸುದ್ದಿಯಲ್ಲಿ ಏಕಿದೆ? ಏಲಕ್ಕಿ ನಗರವೆಂದೆ ಪ್ರಸಿದ್ಧಿಯಾಗಿರುವ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 2023 ಜನೇವರಿ 6,7 ಮತ್ತು 8 ರಂದು ನಡೆಯಲಿದೆ.

ಮುಖ್ಯಾಂಶಗಳು

 • ಇದನ್ನು ಕನ್ನಡ ಅಕ್ಷರ ಜಾತ್ರೆ ಆರಂಭವಾಗಿದೆ ಅಥವಾ ನುಡಿ ಜಾತ್ರೆ ಎಂದೆ ಕರೆಯಲಾಗುತ್ತದೆ.
 • ಹಾವೇರಿಯಲ್ಲಿ ಅಂಗವಾಗಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ.
 • ನಿಗದಿತ ಕನ್ನಡಿಗರನ್ನು ಒಂದುಗೂಡಿಸುವ, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ನೀಡುವ ಈ ಹಬ್ಬವಾಗಿದೆ.
 • ಸಮ್ಮೇಳನಾಧ್ಯಕ್ಷರು : ಡಾ ದೊಡ್ಡರಂಗೇಗೌಡ
 • ಮೈಸೂರು ದಸರಾ ಮಾದರಿ ದೀಪಾಲಂಕಾರ – ಸಮ್ಮೇಳನ ನಡೆಯುವ ದಿನಗಳಂದು ದಸರಾ ವೇಳೆ ಮೈಸೂರು ದೀಪಾಲಂಕಾರ ಮಾಡಿದಂತೆ ಹಾವೇರಿ ನಗರಕ್ಕೆ ದೀಪಾಲಂಕಾರ ಮಾಡಲಾಗಿದೆ.
 • ಏನೇನಿರಲಿದೆ?
  • ಮೂರು ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಈ ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
  • ಪುಸ್ತಕ ಮತ್ತು ವಾಣಿಜ್ಯ ಬಳಕೆಗೆ ಸುಮಾರು 600 ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ
  • ಪ್ರಮುಖವಾಗಿ ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪಪ್ರದರ್ಶನ, ಎರಡನೇಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೇಯ ಪ್ರದರ್ಶನವನ್ನು ಕಸಾಪ ಏರ್ಪಡಿಲಾಗಿದೆ
 • ವಿಶೇಷತೆ: ಕಸಾಪ ಪ್ರದರ್ಶನದಲ್ಲಿ ವಿಶೇಷವಾಗಿ ಕನ್ನಡದ ಪ್ರಥಮಗಳ ಪುಸ್ತಕಗಳ ಪ್ರದರ್ಶನ ಮಾಡಲಾಗಿದೆ.

86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಂಗವಾಗಿ 86 ಸಾಧಕರಿಗೆ ಸನ್ಮಾನ ಮತ್ತು 86 ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ಸಾಹಿತ್ಯ ಸಮ್ಮೇಳನದ ವಿಶೇಷವಾಗಿದೆ.

ಹಾವೇರಿ ಜಿಲ್ಲೆ

 • ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ. ಜಿಲ್ಲೆಯನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲೆಂದೇ ಕರೆಯಲಾಗುತ್ತದೆ.
 • ಜಿಲ್ಲೆಯು ಮೊದಲು ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ನಂತರ ಧಾರವಾಡ ಜಿಲ್ಲೆಯಿಂದ ವಿಭಜಿಸಲ್ಪಟ್ಟ ಹಾವೇರಿ ಜಿಲ್ಲೆ ದಿನಾಂಕ: 24.08.1997 ರಂದು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು
 • ಜಿಲ್ಲೆ ವೈಶಿಷ್ಟ್ಯಗಳು : ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪುರ ನವಿಲು ಧಾಮಕ್ಕೆ , ರಾಣೆಬೆನ್ನೂರ ತಾಲೂಕು ಕಷ್ಣಮಗಗಳ ಅಭಿಯಾರಣ್ಯಕ್ಕೆ ಪ್ರಸಿದ್ಧಿ ಗಳಿಸಿವೆ. ಯಾಲಕ್ಕಿ ಮಾಲೆ ಹಾಗೂ ಪುರಾತನ ಮಠಗಳಿಗೆ ಹಾವೇರಿ ಪ್ರಸಿದ್ಧಿಯನ್ನು ಗಳಿಸಿದೆ.
 • ಜಿಲ್ಲೆಯ ಹೆಗ್ಗಳಿಕೆಗಳು : ದಾಸ ಶ್ರೇಷ್ಠ ಕನಕದಾಸರ ಜನ್ಮ ಭೂಮಿ ಬಾಡ ಹಾಗೂ ಅವರ ಕರ್ಮ ಭೂಮಿ ಕಾಗಿನೆಲೆಯನ್ನು ಸರಕಾರ ಕಾಗಿನೆಲೆ ಅಭಿವದ್ಧಿ ಪ್ರಾಧಿಕಾರವನ್ನು ರಚಿಸುವ ಮೂಲಕ ಅಭಿವದ್ಧಿ ಪಡಿಸಿದೆ. ತ್ರಿಕಾಲಜ್ಞಾನಿ ಸರ್ವಜ್ಞ ಜನಿಸಿದ ಅಬಲೂರು, ಸಂತ ಶಿಶುವಿನಹಾಳದ ಶರೀಫರು, ಹಾಗೂ ಜನಪದ ಸಂಸ್ಕೃತಿಯಲ್ಲಿ ಪ್ರಸಿದ್ದಿಯನ್ನು ಗಳಿಸಿದ ಮದಗದ ಕೆರೆ, ಅಲ್ಲದೇ ಕರ್ನಾಟಕದ ಕಾಶಿಯೆಂದೆ ಕರೆಯುವ ಕದರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನವು ರಾಜ್ಯದಾದ್ಯಂತ ಪ್ರಸಿದ್ಧಿಯನ್ನು ಗಳಿಸಿವೆ.
 • ಇತಿಹಾಸಕ್ಕೆ ಸಾಕ್ಷಿ : ಹಾವೇರಿ ನಗರದಲ್ಲಿರುವ ಪುರಸಿದ್ದೇಶ್ವರ, ಹಾನಗಲ್ಲಿನ ತಾರಕೇಶ್ವರ, ಬಂಕಾಪುರದ 64 ಕಂಬಗಳ ಪ್ರಾಚೀನ ದೇವಾಲಯ ನಗರೇಶ್ವರ, ಕಲಕೇರಿಯ ಸೂರ್ಯನಾರಾಯಣ, ಸ್ವಯಂಭು ಸೋಮೇಶ್ವರ, ಸಾತೇನಹಳ್ಳಿಯ ಹರಿಹರೇಶ್ವರ, ಬಾಳಂಬೀಡದ ಬೋಳೇಶ್ವರ, ಅಬಲೂರಿನ ಸೋಮೇಶ್ವರ, ಸೂರ್ಯನಾರಾಯಣ, ತಿಳವಳ್ಳಿಯ ಶಾಂತೇಶ್ವರ, ಹಿರೇಹಳ್ಳಿಯ ಗಜೇಶ್ವರ ಮುಂತಾದ ಪ್ರಾಚೀನ ದೇವಾಲಗಳು ಶಿಲ್ಪ ಕಲೆಯಿಂದ ಕೂಡಿವೆ
 • ಹಾವೇರಿ ಬ್ಯಾಡಗಿ ಕೆಂಪು ಮೆಣಸಿನಕಾಯಿಗಳನ್ನು ಮಾರಾಟ ಮಾಡಲು ಸಹ ಪ್ರಸಿದ್ಧವಾಗಿದೆ,

ಡಾ ದೊಡ್ಡರಂಗೇಗೌಡ 

 • ಜನನ :7 ಫೆಬ್ರವರಿ 1946
 • ಸ್ಥಳ :ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿ
 • ಕಾವ್ಯನಾಮ : ಮನುಜ
 • ಮೊದಲ ಕವನ ಸಂಕಲನ: ಜಗಲಿ ಹತ್ತಿ ಇಳಿದು
 • ಅವರು ಕನ್ನಡದ ಕವಿ ಮತ್ತು ಗೀತರಚನೆಕಾರರು ಕನ್ನಡ ಚಿತ್ರರಂಗಕ್ಕೆ ಅನೇಕ ಗೀತೆಗಳು ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ಅದರಲ್ಲಿ ಪರಸಂಗದ ಗೆಂಡೆತಿಮ್ಮ ತೇರಾನೇರಿ ಅಂಬರದಾಗೆ ನೇಸರ ನಗುತಾನೆ ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೆ ಇವರಿಗೆ ಹೆಸರು ತಂದುಕೊಟ್ಟ ಗೀತೆಯಾಗಿದೆ. ಈ ಚಿತ್ರಗೀತೆ ಮಹಾರಾಷ್ಟ್ರದಲ್ಲಿ ಏಳನೇ ತರಗತಿಯ ಕನ್ನಡ ಭಾಷೆಗೆ ಪಠ್ಯವಾದದ್ದೂ ಒಂದು ಇತಹಾಸವೇ.
 • ಸುಮಾರು 80 ಕೃತಿಗಳನ್ನು ಬರೆದಿದ್ದಾರೆ.
 • ಪ್ರಶಸ್ತಿಗಳು
  • 1972: ಕವನಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಕಣ್ಣು ನಾಲಗೆ ಕಡಲು
  • 1991: ಅತ್ಯುತ್ತಮ ಗೀತರಚನೆಕಾರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಗಣೇಶನ ಮದುವೆ
  • 1996: ಅತ್ಯುತ್ತಮ ಗೀತರಚನೆಕಾರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಕಾವ್ಯ
  • 1997: ಅತ್ಯುತ್ತಮ ಗೀತರಚನೆಕಾರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ – ಜನುಮದ ಜೋಡಿ
  • 2003: ಅತ್ತಿಮಬ್ಬೆ ಪ್ರಶಸ್ತಿ
  • 2018: ಪದ್ಮಶ್ರೀ ಪ್ರಶಸ್ತಿ
 • ಈ ಸಾಹಿತ್ಯ ಸಮ್ಮೇಳನಕ್ಕೆ ಇವರು ಕನ್ನಡ ನಾಡು, ನುಡಿ, ಜಲ, ಗಡಿ ವಿವಾದ ಸೇರಿದಂತೆ ಕನ್ನಡದ ಬೇರೆ ಬೇರೆ ಇಲಾಖೆಗಳ ಹಲವು ಸಂಗತಿಗಳನ್ನು ಅಂಕಿ-ಅಂಶಗಳನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಿ, ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ 64 ಪುಟಗಳ ಪುಸ್ತಕವನ್ನು ಸಿದ್ಧ ಪಡಿಸಿದ್ದಾರೆ.

85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

 • ನಡೆದ ಸ್ಥಳ :ಕಲಬುರಗಿ
 • ಫೆಬ್ರವರಿ 2020
 • ಸಮ್ಮೇಳನದ ಅಧ್ಯಕ್ಷತೆ : ಎಚ್ ಎಸ್ ವೆಂಕಟೇಶಮೂರ್ತಿ

ಕನ್ನಡ ಸಾಹಿತ್ಯ ಪರಿಷತ್ತು

 • ಕನ್ನಡ ಭಾಷೆ ಮತ್ತು ಅದರ ಸಾಹಿತ್ಯವನ್ನು ಉತ್ತೇಜಿಸುವ ಭಾರತೀಯ ಸಂಸ್ಥೆಯಾಗಿದೆ.
 • ಪುಸ್ತಕಗಳನ್ನು ಪ್ರಕಟಿಸುವುದು, ಸಾಹಿತ್ಯ ವಿಚಾರ ಸಂಕಿರಣಗಳನ್ನು ಆಯೋಜಿಸುವುದು ಮತ್ತು ಸಂಶೋಧನಾ ಯೋಜನೆಗಳ ಮೂಲಕ ಕನ್ನಡ ಭಾಷೆಯನ್ನು ಉತ್ತೇಜಿಸಲು ಇದು ಶ್ರಮಿಸುತ್ತದೆ.
 • ಇದು ಕನ್ನಡ ಸಾಹಿತ್ಯ ಸಮ್ಮೇಳನ (ಕನ್ನಡ ಸಾಹಿತ್ಯ ಕೂಟ) ಎಂಬ ವಾರ್ಷಿಕ ಸಮ್ಮೇಳನವನ್ನು ಸಹ ಆಯೋಜಿಸುತ್ತದೆ.
 • ಸ್ಥಾಪನೆ :1915, ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1935ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.
 • ಅಧ್ಯಕ್ಷರು:ಡಾ.ಮಹೇಶ್ ಜೋಶಿ ಇವರು 26ನೇ ಅಧ್ಯಕ್ಷ ರಾಗಿದ್ದಾರೆ.