Published on: December 21, 2021
ಅಗ್ನಿ-ಪಿ ಖಂಡಾಂತರ ಕ್ಷಿಪಣಿ
ಅಗ್ನಿ-ಪಿ ಖಂಡಾಂತರ ಕ್ಷಿಪಣಿ
ಸುದ್ಧಿಯಲ್ಲಿ ಏಕಿದೆ? ಅಗ್ನಿ ಸರಣಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಒಡಿಶಾದ ಕರಾವಳಿಯಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಕ್ಷಿಪಣಿ ಅಣ್ವಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
- ಅತ್ಯಾಧುನಿಕ ಅಗ್ನಿ ದರ್ಜೆಯ ಕ್ಷಿಪಣಿ ಪ್ರಭೇದದ ಹೊಸ ಪೀಳಿಗೆಯ ಕ್ಷಿಪಣಿಯು 1,000 ದಿಂದ 2,000 ಕಿಮೀ ದೂರದ ವ್ಯಾಪ್ತಿಯವರೆಗೆ ಕ್ರಮಿಸುವ ಸಾಮರ್ಥ್ಯವಿದೆ. ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ ಅದಕ್ಕೆ ಅನೇಕ ಹೊಸ ಫೀಚರ್ಗಳನ್ನು ಅಳವಡಿಸಲಾಗಿದೆ
- ಕ್ಷಿಪಣಿಯ ಚಲನೆಯನ್ನು ಪರಿಶೀಲಿಸಲು ಹಾಗೂ ನಿಗಾ ವಹಿಸಲು ಪೂರ್ವ ಕರಾವಳಿಯ ಉದ್ದಕ್ಕೂ ವಿವಿಧ ದೂರಸ್ಥಮಾಪಕ (Telemetry) ಮತ್ತು ರೇಡಾರ್ ಸ್ಟೇಷನ್ಗಳನ್ನು ಅಳವಡಿಸಲಾಗಿದೆ. ಅತ್ಯಧಿಕ ಮಟ್ಟದ ನಿಖರತೆಯೊಂದಿಗೆ ಕ್ಷಿಪಣಿ ಪರೀಕ್ಷೆಯು ತನ್ನ ಎಲ್ಲಾ ಯೋಜನಾ ಧ್ಯೇಯೋದ್ದೇಶಗಳನ್ನು ಈಡೇರಿಸಿದೆ
ಏನಿದು ಅಗ್ನಿ-ಪಿ ಕ್ಷಿಪಣಿ?
- Agni-P, ಇದು ಅಗ್ನಿ ದರ್ಜೆಯ ಕ್ಷಿಪಣಿಗಳಲ್ಲಿನ ಹೊಸ ಪೀಳಿಗೆಯ ಆಧುನಿಕ ಪ್ರಭೇದವಾಗಿದೆ. ಇದು ಎರಡು ಹಂತಗಳ ಸಣ್ಣ ಕಂಟೇನರ್ಗಳ ಘನವಾದ ನೋದಕ ಖಂಡಾಂತರ ಕ್ಷಿಪಣಿಯಾಗಿದ್ದು, ಡ್ಯುವಲ್ ರೆಡುಂಡಂಟ್ ನೇವಿಗೇಷನ್ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ರೈಲು ಮತ್ತು ರಸ್ತೆಯಿಂದಲೂ ಉಡಾವಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಸುದೀರ್ಘ ಅವಧಿಯವರೆಗೆ ಸಂಗ್ರಹಿಸಿ ಇರಿಸಬಹುದಾಗಿದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ದೇಶದ ಉದ್ದಗಲಕ್ಕೂ ಸಾಗಿಸಬಹುದಾಗಿದೆ. ಕ್ಷಿಪಣಿಯ ಉಡಾವಣೆ ವೇಳೆ ಬೇಕಾಗುವ ಸಮಯವನ್ನು ತಗ್ಗಿಸಲು, ಅದರ ಸಂಗ್ರಹಣೆ ಹಾಗೂ ಚಲನೆಶೀಲತೆಗಳನ್ನು ಸುಧಾರಿಸುವಂತೆ ಇದನ್ನು ರೂಪಿಸಲಾಗಿದೆ.
- 1 ರಿಂದ 2 ಸಾವಿರ ಕಿಮೀ ಕ್ರಮಿಸಬಲ್ಲ ಸಾಮರ್ಥ್ಯದ ಈ ಹೊಸ ಖಂಡಾಂತರ ಕ್ಷಿಪಣಿ, ಅಗ್ನಿ 3ರ ಅರ್ಧದಷ್ಟು ತೂಕ ಹೊಂದಿದೆ. ಹೊಸ ಬಗೆಯ ಪ್ರೊಪುಲ್ಷನ್ ಮತ್ತು ಹೊಸ ಮಾರ್ಗದರ್ಶನಗಳನ್ನು ಒಳಗೊಂಡಿದೆ. 4 ಸಾವಿರ ಕಿಮೀ ಸಾಮರ್ಥ್ಯದ ಅಗ್ನಿ-4 ಮತ್ತು 5 ಸಾವಿರ ಕಿಮೀ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿಗಳಲ್ಲಿ ಇರುವ ತಂತ್ರಜ್ಞಾನಗಳು ಇದರಲ್ಲಿವೆ. ಇಂಡೋ-ಪೆಸಿಫಿಕ್ನಲ್ಲಿ ಶತ್ರುಗಳ ಯುದ್ಧನೌಕೆಗಳನ್ನು ಗುರಿಯಾಗಿಸಲು ಅಗ್ನಿ ಪಿ ಕ್ಷಿಪಣಿಯನ್ನು ಬಳಸಬಹುದಾಗಿದೆ