Published on: June 1, 2024

ಅಗ್ನಿ ಬಾಣ ಸಾರ್ಟೆಡ್ 01 ರಾಕೆಟ್

ಅಗ್ನಿ ಬಾಣ ಸಾರ್ಟೆಡ್ 01 ರಾಕೆಟ್

ಸುದ್ದಿಯಲ್ಲಿ ಏಕಿದೆ? ಚೆನ್ನೈ ಮೂಲದ ಅಗ್ನಿಕುಲ ಕಾಸ್ಮಾಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಶೋಧನಾ ನವೋದ್ಯಮ ಕಂಪನಿಯು ಮೂರು ಆಯಾಮಗಳ (3D) ಮುದ್ರಣಾ ತಂತ್ರಜ್ಞಾನ ಬಳಸಿ ತಯಾರಿಸಿದ ಸಿಂಗಲ್ ಪೀಸ್ ರಾಕೆಟ್ ಎಂಜಿನ್ ಹೊಂದಿರುವ ಸಬ್ ಆರ್ಬಿಟಲ್ ಟೆಸ್ಟ್ ರಾಕೇಟ್ ‘ಅಗ್ನಿಬಾಣ ಸಾರ್ಟೆಡ್(SOrTeD) 01’ದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಮುಖ್ಯಾಂಶಗಳು

  • ದೇಶದಲ್ಲಿ ಈ ಸಾಹಸ ಮಾಡಿದ ಎರಡನೇ ಖಾಸಗಿ ಸಂಸ್ಥೆ ಆಗಿದೆ.
  • ‘ಅಗ್ನಿಬಾಣ’ ಸಬ್ ಆರ್ಬಿಟಲ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್(ಎಸ್‌ಒಆರ್‌ಟಿಇಡಿ) ಪರೀಕ್ಷಾ ನೌಕೆಯು ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಆವರಣದಲ್ಲಿರುವ ತನ್ನದೇ ಉಡ್ಡಯನ ಕೇಂದ್ರ ಮತ್ತು ಭಾರತದ ಮೊದಲ ಮತ್ತು ಏಕೈಕ ಖಾಸಗಿ ಉಡಾವಣಾ ಕೇಂದ್ರದಿಂದ (ಶ್ರೀಹರಿಕೋಟಾದ ಧನುಶ್ ಹೆಸರಿನ ಅಗ್ನಿಕುಲ್ ಉಡಾವಣಾ ಘಟಕ)  ಈ ಉಡ್ಡಯನ ನಡೆದಿದೆ’.
  • 2025ರ ಹಣಕಾಸು ವರ್ಷದ ಅಂತ್ಯಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳಲು ಅಗ್ನಿಕುಲ್ ಸಂಸ್ಥೆ ಯೋಜಿಸಿದೆ.

ರಾಕೇಟ್ ನ ವಿಶೇಷತೆ

  • ಅಗ್ನಿಬಾ ಕಸ್ಟಮೈಸ್ ಮಾಡಬಹುದಾದ, ಎರಡು-ಹಂತದ ಉಡಾವಣಾ ವಾಹನವಾಗಿದೆ.
  • ಇದು 300 ಕೆಜಿಯವರೆಗಿನ ಪೇಲೋಡ್ ಅನ್ನು ಸುಮಾರು 700 ಕಿಮೀ ಕಕ್ಷೆಗೆ ಸಾಗಿಸಬಲ್ಲದು.
  • ರಾಕೆಟ್ ದ್ರವ ಮತ್ತು ಅನಿಲ ಪ್ರೊಪೆಲ್ಲಂಟ್‌ಗಳ ಮಿಶ್ರಣದೊಂದಿಗೆ ಅರೆ-ಕ್ರಯೋಜೆನಿಕ್ ಎಂಜಿನ್ ಅನ್ನು ಬಳಸುತ್ತದೆ.
  • ಇದು ವಿಶ್ವದ ಮೊದಲ ಸಿಂಗಲ್ ಪೀಸ್ ತ್ರೀಡಿ ಪ್ರಿಂಟೇಡ್ ಸೆಮಿ ಕ್ರಯೋಜನಿಕ್ ಎಂಜಿನ್ ಬಲ ಹೊಂದಿರುವ ರಾಕೆಟ್ ಆಗಿದೆ.

ಅಗ್ನಿಕುಲ್ ಕಾಸ್ಮೋಸ್

  • ಚೆನ್ನೈ ಮೂಲದ ಐಐಟಿ ಮದ್ರಾಸ್ ನಲ್ಲಿರುವ ಸ್ಪೇಸ್ ಸ್ಟಾರ್ಟ್ ಅಪ್ ಆಗಿದೆ.
  • ಇದನ್ನು 2017 ರಲ್ಲಿ ಸ್ಥಾಪಿಸಲಾಯಿತು.
  • ಡಿಸೆಂಬರ್ 2020 ರಲ್ಲಿ ಅಗ್ನಿಬಾಣ ನಿರ್ಮಿಸಲು ಬಾಹ್ಯಾಕಾಶ ಸಂಸ್ಥೆಯ ಪರಿಣತಿ ಮತ್ತು ಅದರ ಸೌಲಭ್ಯಗಳಿಗೆ ಪ್ರವೇಶವನ್ನು ಹೊಂದಲು IN-SPAce ಉಪಕ್ರಮದ ಅಡಿಯಲ್ಲಿ ISRO ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ದೇಶದ ಮೊದಲ ಕಂಪನಿಯಾಗಿದೆ.
  • 2022 ರಲ್ಲಿ, ಅಗ್ನಿಕುಲ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಮೊದಲ ಖಾಸಗಿ ಲಾಂಚ್‌ಪ್ಯಾಡ್ ಮತ್ತು ಮಿಷನ್ ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿದರು.

ಸ್ಕೈ ರೂಟ್ ಏರೋ ಸ್ಪೇಸ್

2022ರ ನವೆಂಬರ್ನಲ್ಲಿ ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸಂಸ್ಥೆ ಹೈದರಾಬಾದ್ ಮೂಲದ ಸ್ಕೈ ರೂಟ್ ಏರೋ ಸ್ಪೇಸ್, ಭಾರತದ ಮೊದಲ ಸಬ್ ಆರ್ಬಿಟಲ್ ರಾಕೆಟ್ ವಿಕ್ರಮ್–5 ಅನ್ನು ಉಡ್ಡಯನ ಮಾಡಿತ್ತು. ಸ್ಕೈರೂಟ್ ಏರೋಸ್ಪೇಸ್ ತನ್ನ ವಿಕ್ರಮ್-1 ಬಾಹ್ಯಾಕಾಶ ಉಡಾವಣಾ ವಾಹನದ ಎರಡನೇ ಹಂತದ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ, ಇದನ್ನು ಕಲಾಂ-250 ಎಂದು ಹೆಸರಿಸಲಾಗಿದೆ. ಮಾರ್ಚ್ 2024 ರಲ್ಲಿ  ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) ದಲ್ಲಿ  ಪರೀಕ್ಷೆಯನ್ನು ನಡೆಸಲಾಯಿತು.