Published on: December 16, 2022
ಅಗ್ನಿ-5 ಕ್ಷಿಪಣಿ
ಅಗ್ನಿ-5 ಕ್ಷಿಪಣಿ
ಸುದ್ದಿಯಲ್ಲಿ ಏಕಿದೆ? ಅಗ್ನಿ-5 ಕ್ಷಿಪಣಿ ಪರೀಕ್ಷೆ ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ಅಗ್ನಿ-5 ಪ್ರಯೋಗ ಯಶಸ್ವಿಯಾಗಿದೆ.
ಮುಖ್ಯಾಂಶಗಳು
- ಅಭಿವೃದ್ಧಿ: DRDO ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
- ಈ ಕ್ಷಿಪಣಿಯಲ್ಲಿ ಮೂರು ಹಂತದ ಘನ ಇಂಧನ ಎಂಜಿನ್ ಅಳವಡಿಸಲಾಗಿದ್ದು, ಅಗ್ನಿ-5 ಐದು ಸಾವಿರ ಕಿಲೋಮೀಟರ್ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಉಪಕರಣಗಳು ಮತ್ತು ತಂತ್ರಜ್ಞಾನ
- ಅಗ್ನಿ-5 ಕ್ಷಿಪಣಿ ಹೊಸ ಉಪಕರಣಗಳು ಮತ್ತು ತಂತ್ರಜ್ಞಾನ ಸುಸಜ್ಜಿತವಾಗಿದೆ, ಕ್ಷಿಪಣಿಯಲ್ಲಿ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಪರೀಕ್ಷಿಸಲು ಇದನ್ನು ಉಡಾವಣೆ ಮಾಡಲಾಗಿದೆ.
- ಈ ಕ್ಷಿಪಣಿ ಈಗ ಮೊದಲಿಗಿಂತ ಹಗುರವಾಗಿದ್ದು, ಅಷ್ಟೇ ಅಲ್ಲ, ಅಗ್ನಿ-5 ಕ್ಷಿಪಣಿಯ ವ್ಯಾಪ್ತಿಯನ್ನು ಬೇಕಾದರೆ ಹೆಚ್ಚಿಸುವ ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸಲಾಗಿದೆ.
ಅಗ್ನಿ-5 ಕ್ಷಿಪಣಿಯ ಹೊಸ ವೈಶಿಷ್ಟ್ಯಗಳು.
- ಪರಮಾಣು ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈ ಸಾಮರ್ಥ್ಯದ ಖಂಡಾತಂರ ಕ್ಷಿಪಣಿ ಯಾಗಿದೆ
- ಹೊಸ ಅಗ್ನಿ ಕ್ಷಿಪಣಿಯ ಫೈರ್‌ಪವರ್ (ದೂರದ ಸಾಮರ್ಥ್ಯ) 5,000 ರಿಂದ 8,000 ಕಿಮೀ ಎಂದು ಹೇಳಲಾಗಿದೆ.
- ಅಗ್ನಿ-5 17 ಮೀಟರ್ ಎತ್ತರ ಮತ್ತು 2 ಮೀಟರ್ ಅಗಲವನ್ನು ಹೊಂದಿದೆ.
- ತೂಕ: ಈ ಕ್ಷಿಪಣಿಯು 50 ಟನ್
- ಸಾಮರ್ಥ್ಯ: 5 ಟನ್ ವರೆಗಿನ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
- ವೇಗ: ಅಗ್ನಿ-5 ಶಬ್ದದ 24 ಪಟ್ಟು ವೇಗದೊಂದಿಗೆ ಚಲಿಸಬಲ್ಲದು.
- ‘ಅಗ್ನಿ-5’ ಅದರ ಸರಣಿಯಲ್ಲಿ ಅತ್ಯಾಧುನಿಕ ಅಸ್ತ್ರವಾಗಿದೆ.
- ಇದು ನ್ಯಾವಿಗೇಷನ್‌ಗಾಗಿ ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಿದೆ.
- ಪರಮಾಣು ವಸ್ತುಗಳನ್ನು ಸಾಗಿಸುವ ಅದರ ಸಾಮರ್ಥ್ಯವು ಇತರ ಕ್ಷಿಪಣಿ ವ್ಯವಸ್ಥೆಗಳಿಗಿಂತ ಹೆಚ್ಚು ಎನ್ನಲಾಗಿದೆ.
ಕ್ಷಿಪಣಿ ವ್ಯಾಪ್ತಿಯಲ್ಲಿ ಚೀನಾದ ಈ ನಗರಗಳು
- ಇನ್ನು ರಕ್ಷಣಾ ತಜ್ಞರ ಪ್ರಕಾರ, ಈ ಕ್ಷಿಪಣಿ ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಮತ್ತು ಹಾಂಗ್ ಕಾಂಗ್ ಸೇರಿದಂತೆ ಇಡೀ ಚೀನಾವನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ನಿಮಗಿದು ತಿಳಿದಿರಲಿ
- ಕೆಲವೇ ಕೆಲವು ದೇಶಗಳು ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಸಿಸ್ಟಮ್ ಅನ್ನು ಹೊಂದಿವೆ. ಅಮೆರಿಕಾದಲ್ಲಿ, ಚೀನಾ. ರಷ್ಯಾ, ಫ್ರಾನ್ಸ್ ಮತ್ತು ಉತ್ತರ ಕೊರಿಯಾದೊಂದಿಗೆ ಇದೀಗ ಈ ಪಟ್ಟಿಯಲ್ಲಿ ಭಾರತ ಕೂಡ ಇದೆ. ಭಾರತ ಈಗಾಗಲೇ 700 ಕಿ.ಮೀ ವ್ಯಾಪ್ತಿಯ ಅಗ್ನಿ-1, 2000 ಕಿ.ಮೀ ವ್ಯಾಪ್ತಿಯ ಅಗ್ನಿ-2, 2,500 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯ ಅಗ್ನಿ-3 ಕ್ಷಿಪಣಿಗಳನ್ನು ಹೊಂದಿದೆ.