Published on: January 28, 2023
ಅಪ್ರಕಟಿತ ವೀರಗಲ್ಲು
ಅಪ್ರಕಟಿತ ವೀರಗಲ್ಲು
Castel Maggiore ಸುದ್ದಿಯಲ್ಲಿ ಏಕಿದೆ? ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.
Dārāb ವೀರಗಲ್ಲಿನ ವಿವರ :
- ಹೊಯ್ಸಳರ 2ನೇ ವೀರಬಲ್ಲಾಳನ ಕಾಲದ್ದು ಎನ್ನಲಾದ ಈ ವೀರಗಲ್ಲನ್ನು ಸೋಪುಗಲ್ಲಿನಲ್ಲಿ ಕೆತ್ತಲಾಗಿದೆ. ಮೂರು ಹಂತದಲ್ಲಿ ಶಿಲ್ಪಕಲಾ ಫಲಕಗಳನ್ನು ಹೊಂದಿದೆ ಮತ್ತು ಅವುಗಳ ಮಧ್ಯದಲ್ಲಿ ಅವುಗಳ ಮಧ್ಯದ 2 ಪಟ್ಟಿಕೆಯಲ್ಲಿ ಶಾಸನದ ಪಾಠಗಳನ್ನು ಒಳಗೊಂಡಿದೆ.
- ವೀರಗಲ್ಲಿನ ಅಂಕಿಅಂಶಗಳ ಪ್ರಕಾರ ಮತ್ತು ಅಧ್ಯಯನದ ನಂತರ, ದಾಸರ ಶೆಟ್ಟಿಹಳ್ಳಿ (ಪ್ರಸ್ತುತ ಚಾಕಶೆಟ್ಟಿಹಳ್ಳಿ) ಹೊಯ್ಸಳರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ.
- ವೀರಗಲ್ಲಿನ ಮೇಲಿರುವ ಬರಹ: ಮಸಣಯ್ಯ ಹೊಯ್ಸಳರ ಆಡಳಿತದಲ್ಲಿ ಪ್ರಮುಖ ಸ್ಥಾನಮಾನದ ಸ್ಥಾನಿಕರಾಗಿದ್ದರು. ಅವರು ಯುದ್ಧದಲ್ಲಿ ಹೋರಾಡಿದರು ಮತ್ತು ತೀವ್ರವಾಗಿ ಗಾಯಗೊಂಡರು. ಬಳಿಕ ಗಂಡನ ಮೇಲಿನ ಪ್ರೀತಿಯಿಂದ ಮಸಣಯ್ಯನ ಹೆಂಡತಿಯೂ ಸಾಯಲು ಬಯಸಿದ್ದರು. ಹೀಗಾಗಿ ಮಸಣಯ್ಯ ಮೊದಲಿಗೆ ಆಕೆಗೆ ಚಾಕುವಿನಿಂದ ಇರಿದು, ತಾನೂ ತನ್ನ ಜೀವನವನ್ನು ಕೊನೆಗೊಳಿಸಿಕೊಂಡರು.
- ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟ ಮಾಡಿ ಮಡಿದ ವೀರರ ಸ್ಮರಣಾರ್ಥವಾಗಿ ನಿಲ್ಲಿಸಿದವರಾಗಿರುತ್ತವೆ. ಮಹಾಸತಿ ಕಲ್ಲುಗಳು ಮಡಿದ ಪತಿಯನ್ನು ಅನುಸರಿಸಿದ ಸ್ಮರಣಾರ್ಥ ನಿಲ್ಲಿಸಿದವಾಗಿರುತ್ತವೆ. ಆದರೆ, ಈಗ ಸಿಕ್ಕಿರುವ ವೀರಗಲ್ಲು ತನ್ನ ಪತ್ನಿಯನ್ನು ಕೊಂದು ತಾನೂ ಮಡಿದಿರುವುದರ ಸ್ಮರಣಾರ್ಥವಾಗಿ ಸ್ಥಾಪಿಸಿದ್ದಾಗಿದೆ. ಈ ರೀತಿಯ ಸ್ಮಾರಕ ಶಾಸನಶಿಲ್ಪಗಳು ಹೊಯ್ಸಳರ ಕಾಲದಲ್ಲಿಯೇ ಆಗಲಿ, ಬೇರಾವುದೇ ರಾಜಮನೆತನಗಳ ಕಾಲದಲ್ಲಿ ಈವರೆಗೆ ಕಂಡುಬಂದಿಲ್ಲ’.
- ವಿಶೇಷ :‘ವೀರಗಲ್ಲು ಹಾಗೂ ಮಹಾಸತಿಕಲ್ಲುಗಳು ಸಿಗುವುದು ಸಾಮಾನ್ಯ. ಆದರೆ, ಚುಚ್ಚಿ ಕೊಂದು ಪತಿಯು ಮರಣ ಹೊಂದಿರುವ ಶಾಸನ ಮತ್ತು ಶಿಲ್ಪ ದೊರೆತಿರುವುದು ಇದೇ ಮೊದಲು. ಆದ್ದರಿಂದ ಇದು ಬಹಳ ವಿಶೇಷವಾದುದಾಗಿದೆ.
- ವೀರಗಲ್ಲುಗಳು ಯೋಧನೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸಂಕೇತವಾಗಿ ಸ್ಥಾಪಿಸಲ್ಪಡುತ್ತವೆ.