Published on: November 10, 2023

ಅಮೃತಧಾರೆ ಎದೆಹಾಲು ಬ್ಯಾಂಕ

ಅಮೃತಧಾರೆ ಎದೆಹಾಲು ಬ್ಯಾಂಕ

ಸುದ್ದಿಯಲ್ಲಿ ಏಕಿದೆ? ವಾಣಿವಿಲಾಸ ಆಸ್ಪತ್ರೆಯ ‘ಅಮೃತಧಾರೆ’ ಎದೆಹಾಲು ಬ್ಯಾಂಕಿಗೆ ತಾಯಂದಿರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬ್ಯಾಂಕಿನ ನೆರವಿನಿಂದ ಎರಡು ಸಾವಿರ ಶಿಶುಗಳಿಗೆ ತಾಯಂದಿರ ಎದೆಹಾಲು ಒದಗಿಸಲಾಗಿದೆ.

ಮುಖ್ಯಾಂಶಗಳು

  • ಈ ಬ್ಯಾಂಕನ್ನು 2022 ರ ಮಾರ್ಚ್ ತಿಂಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಎದೆಹಾಲು ಸಿಗದ ಹಾಗೂ ಎದೆಹಾಲು ವಂಚಿತ ಮಕ್ಕಳಿಗಾಗಿ ನಿರ್ಮಿಸಲಾಗಿದೆ.
  • ಇದು ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ರಾಜ್ಯದ ಪ್ರಥಮ ಎದೆಹಾಲು ಬ್ಯಾಂಕ್ ಎಂಬ ಹಿರಿಮೆಗೆ ಭಾಜನವಾಗಿದೆ.
  • ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಿಗೆ ಅಲ್ಲಿನ ವೈದ್ಯರು ಪರಿಶೀಲಿಸಿ, ಎದೆಹಾಲು ಪೂರೈಕೆಗೆ ಬ್ಯಾಂಕ್ಗೆ ಶಿಫಾರಸು ಸಲ್ಲಿಸುತ್ತಿದ್ದಾರೆ. ನವಜಾತ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಇರುವ ಶಿಶುಗಳಿಗೆ ಪ್ರತಿನಿತ್ಯ ಸರಾಸರಿ ಒಂದೂವರೆ ಲೀಟರ್ ಎದೆಹಾಲು ಒದಗಿಸಲಾಗುತ್ತಿದೆ.
  • ಬ್ಯಾಂಕ್ನಲ್ಲಿ ಸಂಗ್ರಹಿಸಿದ ಹಾಲನ್ನು ಪ್ಯಾಶ್ಚರೀಕರಿಸಿದ ಬಳಿಕ ಪ್ಯಾಕ್ ಮಾಡಿ 120 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂರಕ್ಷಿಸಿ 6 ತಿಂಗಳು ಶೇಖರಣೆ ಕಾಲ ಶೇಖರಿಸಿ ಇಡಬಹುದು

ಉದ್ದೇಶ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ ಆರು ತಿಂಗಳೊಳಗಿನ ಶೇ. 46 ರಷ್ಟು ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯಪಾನವಾಗುತ್ತಿಲ್ಲ. ಎಲ್ಲ ಮಕ್ಕಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಉದ್ದೇಶದಿಂದಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತುಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್ಐ) ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ 1 ಕೋಟಿ ವೆಚ್ಚದಲ್ಲಿತಾಯಂದಿರ ಎದೆಹಾಲಿನ ಬ್ಯಾಂಕ್ ನಿರ್ಮಿಸಲಾಗಿತ್ತು.  ‘ನವಜಾತ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಇರುವ ಎದೆಹಾಲಿನಿಂದ ವಂಚಿತರಾಗಿರುವ ಶಿಶುಗಳಿಗೆ ಈ ಬ್ಯಾಂಕ್ನಿಂದ ಎದೆಹಾಲು ಪೂರೈಸಲಾಗುತ್ತದೆ.

ಯಾರಿಗೆಲ್ಲ ಹಾಲು ಪೂರೈಕೆ? ಅವಧಿ ಪೂರ್ವ ಜನಿಸಿದ ಶಿಶುಗಳು ಅಸ್ವಸ್ಥ ಶಿಶುಗಳು ಅನಾಥ ಶಿಶುಗಳು ಮೃತಪಟ್ಟ ತಾಯಂದಿರ ಶಿಶುಗಳು ರೋಗಗ್ರಸ್ತ ಬಾಣಂತಿಯರ ಶಿಶುಗಳು ಹಾಗೂ ಎದೆಹಾಲು ಉತ್ಪಾದನೆ ಆಗದಿರುವ ತಾಯಂದಿರ ಶಿಶುಗಳಿಗೆ ಈ ಕೇಂದ್ರದಿಂದ ಎದೆಹಾಲನ್ನು ನೀಡಲಾಗುತ್ತದೆ.