Published on: January 30, 2023

ಅಮೃತ ಉದ್ಯಾನ

ಅಮೃತ ಉದ್ಯಾನ


ಸುದ್ದಿಯಲ್ಲಿ ಏಕಿದೆ? ರಾಷ್ಟ್ರಪತಿಯವರ ಅಧಿಕೃತ ನಿವಾಸ ರಾಷ್ಟ್ರಪತಿ ಭವನದಲ್ಲಿರುವ ಜನಪ್ರಿಯ ಮೊಘಲ್ ಗಾರ್ಡನ್ ಗೆ ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡಲಾಗಿದೆ.


ಮುಖ್ಯಾಂಶಗಳು

  • “ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾಗಿರುವ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’  ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ‘ಅಮೃತ ಉದ್ಯಾನ’ ಎಂಬ ಹೆಸರನ್ನು ನೀಡಲಾಗಿದೆ”.
  • ಅಮೃತ ಉದ್ಯಾನವು ಇದುವರೆಗೂ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವವಾದ ‘ಉದ್ಯಾನ ಉತ್ಸವ’ ಸಂದರ್ಭದಲ್ಲಿ ಮಾತ್ರವೇ ಸಾರ್ವಜನಿಕರ ಭೇಟಿಗೆ ತೆರೆಯುತ್ತಿತ್ತು. ಆದರೆ ಈಗ ಅದು ಆಗಸ್ಟ್‌ನಿಂದ ಮಾರ್ಚ್‌ವರೆಗೂ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ”.
  • ಈ ಉದ್ಯಾನ15 ಎಕರೆ ವಿಸ್ತಾರವಾಗಿದೆ. ಈ ಉದ್ಯಾನವು ರೋಸ್ ಗಾರ್ಡನ್ ಜೊತೆಗೆ ಬಯೋ ಡೈವರ್ಸಿಟಿ ಪಾರ್ಕ್, ಗಿಡಮೂಲಿಕೆ ಉದ್ಯಾನ, ಬಟರ್‌ಫ್ಲೈ, ಮ್ಯೂಸಿಕಲ್ ಫೌಂಟೇನ್, ಸನ್ಕನ್ ಉದ್ಯಾನ, ಕ್ಯಾಕ್ಟಸ್ ಉದ್ಯಾನ, ನ್ಯೂಟ್ರಿಷನಲ್ ಉದ್ಯಾನ ಮತ್ತು ಬಯೋ ಫ್ಯುಯೆಲ್ ಪಾರ್ಕ್ ಒಳಗೊಂಡಿದೆ.

ಅಮೃತ ಉದ್ಯಾನ (ಮೊಘಲ್ ಗಾರ್ಡನ್)

  • ರಾಷ್ಟ್ರಪತಿ ಭವನದ ಆವರಣದಲ್ಲಿ ಒಟ್ಟು ಮೂರು ಗಾರ್ಡನ್‌ಗಳಿವೆ. ಇವು ಮೊಘಲ್ ಹಾಗೂ ಪರ್ಷಿಯನ್ ಗಾರ್ಡನ್‌ಗಳಿಂದ ಪ್ರಭಾವಿತಗೊಂಡಿವೆ. ಶ್ರೀನಗರದಲ್ಲಿರುವ ಉದ್ಯಾನದಿಂದ ಪ್ರೇರಣೆಗೊಂಡು ನಿರ್ಮಿಸಿರುವ ಒಂದು ಉದ್ಯಾನವನವನ್ನು ಜನರು ಮೊಘಲ್ ಗಾರ್ಡನ್ ಎಂದು ಕರೆಯುತ್ತಿದ್ದಾರೆ. ಆದರೆ ಆ ಉದ್ಯಾನಕ್ಕೆ ಮೊಘಲ್ ಗಾರ್ಡನ್ ಎಂದು ಅಧಿಕೃತವಾಗಿ ನಾಮಕರಣ ಮಾಡಿಲ್ಲ.
  • ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮೊಘಲ್ ಗಾರ್ಡನ್, ತಾಜ್ ಮಹಲ್ ಸುತ್ತಲಿರುವ ಉದ್ಯಾನಗಳು ಮತ್ತು ಭಾರತ ಹಾಗೂ ಪರ್ಷಿಯಾಗಳ ವರ್ಣರಂಜಿತ ಚಿತ್ರಕಲೆಗಳಿಂದ ಪ್ರಭಾವಿತಗೊಂಡು ಅಮೃತ ಉದ್ಯಾನದ ವಿನ್ಯಾಸವನ್ನು ರೂಪಿಸಲಾಗಿದೆ.
  • ನಿರ್ಮಾಣ : ಈ ಉದ್ಯಾನವನ್ನು ಸರ್ ಎಡ್ವರ್ಡ್ ಲುಟ್ಯೆನ್ ನಿರ್ಮಿಸಿದ್ದರು. ಸರ್ ಎಡ್ವಿನ್ ಲುಟ್ಯೆನ್ಸ್ ಅವರು 1917ರಲ್ಲಿಯೇ ಅಮೃತ್ ಉದ್ಯಾನದ ವಿನ್ಯಾಸಗಳನ್ನು ಅಂತಿಮಗೊಳಿಸಿದ್ದರು, ಹಾಗಿದ್ದರೂ, 1928-1929 ರ ಅವಧಿಯಲ್ಲಿ ಮಾತ್ರ ಈ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಗಿತ್ತು. ತೋಟಗಳಿಗೆ ಅವರ ಸಹಯೋಗಿ ತೋಟಗಾರಿಕೆ ನಿರ್ದೇಶಕ ವಿಲಿಯಂ ಮುಸ್ಟೋ ಕೂಡ ಸಹಾಯ ಮಾಡಿದ್ದರು’ ಎಂದು ಬರೆಯಲಾಗಿದೆ. “ರಾಷ್ಟ್ರಪತಿ ಭವನದ ಕಟ್ಟಡವು ಭಾರತೀಯ ಮತ್ತು ಪಾಶ್ಚಿಮಾತ್ಯ ವಾಸ್ತುಶಿಲ್ಪದ ಎರಡು ವಿಭಿನ್ನ ಶೈಲಿಗಳನ್ನು ಹೊಂದಿರುವಂತೆ, ಸರ್ ಲುಟ್ಯೆನ್ಸ್ ಉದ್ಯಾನವನಗಳನ್ನು ಮೊಘಲ್ ಶೈಲಿ ಮತ್ತು ಇಂಗ್ಲಿಷ್ ಫ್ಲವರ್‌ ಗಾರ್ಡನ್‌ಗಾಗಿ ಎರಡು ವಿಭಿನ್ನ ತೋಟಗಾರಿಕೆ ಸಂಪ್ರದಾಯಗಳನ್ನು ಒಟ್ಟಿಗೆ ತಂದರು. ಮೊಘಲ್ ಕಾಲುವೆಗಳು, ತಾರಸಿಗಳು ಮತ್ತು ಹೂಬಿಡುವ ಪೊದೆಗಳು ಯುರೋಪಿಯನ್ ಹೂವಿನ ಹಾಸಿಗೆಗಳು, ಹುಲ್ಲುಹಾಸುಗಳು ಮತ್ತು ಖಾಸಗಿ ಹೆಡ್ಜ್‌ಗಳೊಂದಿಗೆ ಸುಂದರವಾಗಿ ಸಂಯೋಜಿಸಲಾಗಿದೆ’