Published on: September 15, 2023

ಅಮೆಜಾನ್ ನ ಕಾರ್ಯಾಚರಣೆ ಜಾಲ

ಅಮೆಜಾನ್ ನ ಕಾರ್ಯಾಚರಣೆ ಜಾಲ

ಸುದ್ದಿಯಲ್ಲಿ   ಏಕಿದೆ? ಉದ್ಯೋಗಾಸಕ್ತ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಅಮೆಜಾನ್ ಇಂಡಿಯಾವು ಕರ್ನಾಟಕ ಸರ್ಕಾರ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಹರಿಯಾಣ ರಾಜ್ಯ ಸರ್ಕಾರಗಳೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

  • ಅಮೆಜಾನ್ ಇಂಡಿಯಾದ ಆಪರೇಷನ್ಸ್ ಜಾಲದಾದ್ಯಂತ ಐದು ರಾಜ್ಯಗಳಲ್ಲಿ ಶ್ರವಣ ಸಮಸ್ಯೆಯುಳ್ಳ ಸಾವಿರಾರು ದಿವ್ಯಾಂಗ ಅಭ್ಯರ್ಥಿಗಳಿಗೆ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಪೂರೈಸಲಿದೆ.

 ಉದ್ದೇಶ

  • ರಾಜ್ಯ ಸರ್ಕಾರಗಳು ಮತ್ತು ಅಮೆಜಾನ್ ಇಂಡಿಯಾ ನಡುವಿನ ಒಪ್ಪಂದವು ದಿವ್ಯಾಂಗರಿಗೆ ಉದ್ಯೋಗ ಮತ್ತು ಕೌಶಲ್ಯದ ಅವಕಾಶಗಳಿಗೆ ಆದ್ಯತೆ ನೀಡುತ್ತದೆ ಮತ್ತು ಮುಖ್ಯವಾಹಿನಿ ಉದ್ಯೋಗಗಳಲ್ಲಿ ದಿವ್ಯಾಂಗರು ಪಾಲ್ಗೊಳ್ಳಲು ನೆರವಾಗುತ್ತದೆ. ಇದು ಅವಕಾಶ ವಂಚಿತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪೂರಕವಾಗಿದೆ.

ಅಮೆಜಾನ್ ನ ಕಾರ್ಯಾಚರಣೆ ಜಾಲ ಎಂದರೆ 

  • ಫುಲ್ ಫಿಲ್ ಮೆಂಟ್ ಸೆಂಟರ್ಗಳು, ಸಾರ್ಟೇಷನ್ ಕೇಂದ್ರಗಳು ಮತ್ತು ಡೆಲಿವರಿ ಸ್ಟೇಷನ್ ಗಳಲ್ಲಿ ಸ್ಟೋವಿಂಗ್, ಪಿಕಿಂಗ್, ಪ್ಯಾಕಿಂಗ್ ಮತ್ತು ಸಾರ್ಟಿಂಗ್ ಮತ್ತಿತರೆ ಉದ್ಯೋಗಗಳನ್ನು ನೀಡಲಾಗುತ್ತದೆ.