Published on: October 7, 2023
ಅರಿಶಿನ ಮಂಡಳಿ
ಅರಿಶಿನ ಮಂಡಳಿ
ಸುದ್ದಿಯಲ್ಲಿ ಏಕಿದೆ? ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ.
ಮುಖ್ಯಾಂಶಗಳು
- ದೇಶದಲ್ಲಿ ಗರಿಷ್ಠ ಅರಿಶಿನ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಅರಿಶಿನ ಬೆಳೆಗಾರ ರೈತರ ಹಿತ ಕಾಯುವಂಥ ನಿರ್ಧಾರ ಮಾಡಿದ ಕೇಂದ್ರ ಸರ್ಕಾರ, ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ.
- ಮಸಾಲ ಪದಾರ್ಥಗಳ ಮಂಡಳಿ ಹಾಗೂ ಇತರ ಸರ್ಕಾರಿ ಸಂಸ್ಥೆಗಳ ಜೊತೆ ನ್ಯಾಷನಲ್ ಟರ್ಮರಿಕ್ ಬೋರ್ಡ್ ಸಹಯೋಗದೊಂದಿಗೆ ಕೆಲಸ ಮಾಡಿ ಅರಿಶಿನ ಕ್ಷೇತ್ರಕ್ಕೆ ಪುಷ್ಟಿ ತರುವ ಪ್ರಯತ್ನ ಮಾಡಲಿದೆ.
ರಾಷ್ಟ್ರೀಯ ಅರಿಶಿನ ಮಂಡಳಿಯ ಉದ್ದೇಶಗಳು
- ನಾಯಕತ್ವ ಮತ್ತು ಸಮನ್ವಯವನ್ನು ಒದಗಿಸುವುದು
- ಅರಿವು ಮತ್ತು ಬಳಕೆಯನ್ನು ಹೆಚ್ಚಿಸುವುದು
- ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ಅನ್ವೇಷಿಸುವುದು
- ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು
- ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ
- ಗುಣಮಟ್ಟ ಮತ್ತು ಆಹಾರ ಸುರಕ್ಷತೆ ಗುಣಮಟ್ಟವನ್ನು ಖಾತರಿಪಡಿಸುವುದು
- ಅರಿಶಿನದ ಸಂಭಾವ್ಯತೆಯನ್ನು ರಕ್ಷಿಸುವುದು ಮತ್ತು ಗರಿಷ್ಠಗೊಳಿಸುವುದು
ಪ್ರಯೋಜನ
- ಅರಿಶಿನ ಮಾರುಕಟ್ಟೆ ಬೆಳೆಯಲು ಮತ್ತು ಹೊಸ ಅರಿಶಿನ ಉತ್ಪನ್ನಗಳನ್ನು ತಯಾರಿಸಲು ಮಂಡಳಿ ಸಹಾಯಕ್ಕೆ ಬರುತ್ತದೆ. ಅರಿಶಿನವನ್ನು ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಮಂಡಳಿ ಸಹಾಯವಾಗುತ್ತದೆ. ಇದರಿಂದ ಅರಿಶಿನ ಬೆಳೆಗಾರರಿಗೆ ಹೆಚ್ಚು ಲಾಭ ಆಗಲಿದೆ.
ಅರಿಶಿನದ ವಾಸ್ತವ ಸಂಗತಿಗಳು
- ಭಾರತ ವಿಶ್ವದಲ್ಲೇ ಅತಿ ಹೆಚ್ಚು ಅರಿಶಿನ ಬೆಳೆಯುವ, ರಫ್ತು ಮಾಡುವ ಮತ್ತು ಬಳಸುವ ದೇಶವಾಗಿದೆ. ಭಾರತದಲ್ಲಿ ವರ್ಷಕ್ಕೆ 11 ಲಕ್ಷ ಟನ್ಗೂ ಹೆಚ್ಚು ಅರಿಶಿನ ಉತ್ಪಾದನೆ ಆಗುತ್ತದೆ.
- ವಿಶ್ವದ ಅರಿಶಿನ ಉತ್ಪಾದನೆಯಲ್ಲಿ ಭಾರತದ ಪಾಲು ಶೇ. 75ರಷ್ಟಿದೆ.
- ವಿಶ್ವದ ಅರಿಶಿನ ವ್ಯಾಪಾರದಲ್ಲಿ ಭಾರತದ ಪಾಲು ಬರೋಬ್ಬರಿ ಶೇ. 62ರಷ್ಟಿದೆ.
- ಭಾರತದಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತದೆ.
- ದೇಶದಲ್ಲಿ 30ಕ್ಕೂ ಹೆಚ್ಚು ತಳಿಯ ಅರಿಶಿನ ಇದೆ. ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಅರಿಶಿನ ಬೆಳೆಯುವ ಪ್ರಮುಖ ರಾಜ್ಯಗಳು. ಅದರಲ್ಲೂ ತೆಲಂಗಾಣದಲ್ಲಿ ಅತಿಹೆಚ್ಚು ಅರಿಶಿನ ಬೆಳೆಯಲಾಗುತ್ತದೆ. ಅದರಲ್ಲೂ ನಿಜಾಮಾಬಾದ್, ನಿರ್ಮಲ್ ಮತ್ತು ಜಗತಿಯಾಲ್ ಜಿಲ್ಲೆಗಳಲ್ಲಿ ಅತಿಹೆಚ್ಚು ಅರಿಶಿನ ಬೆಳೆಯಲಾಗುತ್ತದೆ.
- ತಮಿಳುನಾಡಿನ ಈರೋಡ್ ಜಿಲ್ಲೆ ಅರಿಶಿನಕ್ಕೆ ಹೆಸರುವಾಸಿಯಾಗಿದೆ. ಈರೋಡ್ ಅನ್ನು ಅರಿಶಿನದ ನಗರ ಅಥವಾ ಹಳದಿ ನಗರ ಎಂದೂ ಕರೆಯುತ್ತಾರೆ ಏಕೆಂದರೆ ಈರೋಡ್ ಅರಿಶಿನದ ಅತಿದೊಡ್ಡ ಉತ್ಪಾದಕ ನಗರವಾಗಿದೆ
- ರಫ್ತು : ಅರಿಶಿನದ ವಿಶ್ವ ವ್ಯಾಪಾರದಲ್ಲಿ ಭಾರತವು 62% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. 2022-23 ರ ಅವಧಿಯಲ್ಲಿ, 207.45 ಮಿಲಿಯನ್ ಡಾಲರ್ ಮೌಲ್ಯದ 1.534 ಲಕ್ಷ ಟನ್ ಅರಿಶಿನ ಮತ್ತು ಅರಿಶಿನ ಉತ್ಪನ್ನಗಳನ್ನು 380 ಕ್ಕೂ ಹೆಚ್ಚು ರಫ್ತುದಾರರು ರಫ್ತು ಮಾಡಿದ್ದಾರೆ ಭಾರತೀಯ ಅರಿಶಿನದ ಪ್ರಮುಖ ರಫ್ತು ಮಾರುಕಟ್ಟೆಗಳು ಬಾಂಗ್ಲಾದೇಶ, ಯುಎಇ, ಯುಎಸ್ಎ ಮತ್ತು ಮಲೇಷ್ಯಾ. ಮಂಡಳಿಯ ಕೇಂದ್ರೀಕೃತ ಚಟುವಟಿಕೆಗಳೊಂದಿಗೆ, ಅರಿಶಿನ ರಫ್ತು 2030 ರ ವೇಳೆಗೆ USD 1 ಬಿಲಿಯನ್ ತಲುಪುವ ನಿರೀಕ್ಷೆಯಿದೆ.