Published on: September 23, 2021
ಅರ್ಕಾವತಿ ನದಿ ಶುದ್ಧೀಕರಣ
ಅರ್ಕಾವತಿ ನದಿ ಶುದ್ಧೀಕರಣ
ಸುದ್ಧಿಯಲ್ಲಿ ಏಕಿದೆ? ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ನದಿ ಶುದ್ಧೀಕರಣಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 20.50 ಕೋಟಿ ರೂ.ಗಳ ಸಮಗ್ರ ಯೋಜನೆ ಸಿದ್ಧಪಡಿಸಿದೆ.
ಯೋಜನೆ ಮುಖ್ಯ ಉದ್ದೇಶ
- ನಗರದಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರು ಅರ್ಕಾವತಿ ನದಿ ಸೇರದಂತೆ ತಡೆಯುವುದು ಯೋಜನೆ ಮುಖ್ಯ ಉದ್ದೇಶ.
17 ಕಲುಷಿತ ನದಿಗಳಲ್ಲೊಂದು:
- ಒಂದೊಮ್ಮೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜೀವನಾಡಿಯಾಗಿದ್ದ ಅರ್ಕಾವತಿ ಇಂದು ರಾಜ್ಯದ 17 ಕಲುಷಿತ ನದಿಗಳಲ್ಲಿಒಂದು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಅಪಖ್ಯಾತಿಯಿಂದ ನದಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನದಿಗೆ ನಗರ ಪ್ರದೇಶಗಳ ಕಲುಷಿತ ನೀರು ಸೇರದಂತೆ ತಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಟ್ಟುನಿಟ್ಟಿನ ಆದೇಶ ನೀಡಿದೆ.
- ಈ ದಿಸೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಈ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆಯೂ ದೊರೆತಿದೆ.
ಏನಿದು ಯೋಜನೆ?:
- ಈ ಯೋಜನೆಯಲ್ಲಿ ನಗರದಲ್ಲಿನ ನಾಲ್ಕು ವೆಟ್ ವೆಲ್ಗಳು ಮತ್ತು ಎಸ್ಟಿಪಿ (ಸಿವೇಜ್ ಟ್ರೀಟ್ ಮೆಂಟ್ ಪ್ಲಾಂಟ್ )ಗೆ ಹೊಸ ಮೋಟಾರ್ ಪಂಪ್ ಸೆಟ್ ಅಳಧಿವಡಿಕೆ ಹಾಗೂ ಮ್ಯಾನ್ ಹೋಲ್, ಯುಜಿಡಿ ಲೈನ್ ಕಡಿತಗೊಂಡಿದ್ದರೆ ದುರಸ್ಥಿ ಪಡಿಸಿ ನಿರ್ವಹಣೆ ಮಾಡಲಾಗುತ್ತದೆ.
ಅರ್ಕಾವತಿ ನದಿ ಬಗ್ಗೆ
- ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.
- ಜಲಾನಯನ ಪ್ರದೇಶ 4,359 ಚ.ಕಿಮೀ. ನೆಲಮಂಗಲದ ದಕ್ಷಿಣದ ಕಡೆಯಿಂದ ಬರುವ ಕುಮುದ್ವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿಗಳು ಇದರ ಉಪನದಿಗಳು.