ಅವಧಿ ವಿಮಾ ಸೌಲಭ್ಯ
ಅವಧಿ ವಿಮಾ ಸೌಲಭ್ಯ
ಸುದ್ದಿಯಲ್ಲಿ ಏಕಿದೆ? ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ಅವಧಿ ವಿಮಾ ಸೌಲಭ್ಯ ಜಾರಿಗೊಳಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವರು ಅನುಮೋದನೆ ನೀಡಿದ್ದಾರೆ.
ಮುಖ್ಯಾಂಶಗಳು
- ಸಾಂದರ್ಭಿಕ ವೇತನ ಪಡೆಯುವ ಕಾರ್ಮಿಕರ ಮೃತದೇಹವನ್ನು ಅವರ ಊರುಗಳಿಗೆ ಸಾಗಿಸುವ ನೀತಿಯನ್ನು ಅನುಮೋದಿಸಲಾಯಿತು ಮತ್ತು ಕೆಲಸದ ಸ್ಥಳದಲ್ಲಿ ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸುವವರಿಗೆ ಅಂತ್ಯಕ್ರಿಯೆಯ ವೆಚ್ಚವನ್ನು ₹ 1,000 ರಿಂದ ₹ 10,000 ಕ್ಕೆ ಹೆಚ್ಚಿಸಿದರು.
- ಲಡಾಖ್, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಿಂದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದವರೆಗೆ ವಿಸ್ತರಿಸಿರುವ ಪ್ರದೇಶಗಳಲ್ಲಿ ಗಡಿ ಮೂಲಸೌಕರ್ಯಗಳನ್ನು ನಿರ್ಮಿಸಲು BRO ಒಂದು ಲಕ್ಷದವರೆಗೆ ಸಾಂದರ್ಭಿಕ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಈ ಯೋಜನೆಗಳಲ್ಲಿ ರಸ್ತೆಗಳು, ಸೇತುವೆಗಳು, ಸುರಂಗಗಳು, ಏರ್‌ಫೀಲ್ಡ್‌ಗಳು ಮತ್ತು ಹೆಲಿಪ್ಯಾಡ್‌ಗಳು ಸೇರಿವೆ.
ವಿಮಾ ಯೋಜನೆ
ಕಾಮಗಾರಿಯ ಸಮಯದಲ್ಲಿ ಕಾರ್ಮಿಕರು ಸಾವನ್ನಪ್ಪಿದರೆ ಈ ವಿಮಾ ಯೋಜನೆಯಡಿ ಅವರ ಅವಲಂಬಿತರಿಗೆ ₹10 ಲಕ್ಷ ಪರಿಹಾರ ಸಿಗಲಿದೆ. ‘ಈ ಯೋಜನೆಯು, ಅಪಾಯಕಾರಿ ತಾಣಗಳು, ದುರ್ಗಮ ಪ್ರದೇಶ, ಪ್ರತಿಕೂಲ ವಾತಾವರಣದಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದರೆ ಅಥವಾ ಅನಾರೋಗ್ಯ ಪರಿಸ್ಥಿತಿಯಲ್ಲಿ ಸಾವು–ನೋವು ಸಂಭವಿಸಿದರೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ವಿಮಾರಕ್ಷಣೆ ಒದಗಿಸಲಿದೆ.
ಉದ್ದೇಶ
ವಿಮಾ ಯೋಜನೆಯು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರ ಕುಟುಂಬಗಳ ಜೀವನೋಪಾಯವನ್ನು ಭದ್ರಪಡಿಸುವಲ್ಲಿ ಸಹಾಯಕವಾಗಲಿದೆ.
ಗಡಿ ರಸ್ತೆಗಳ ಸಂಸ್ಥೆ (ಬಿಆರ್ ಒ)
ಸ್ಥಾಪನೆ: 7 ಮೇ 1960
ಉದ್ದೇಶ ಭಾರತ ಮತ್ತು ಸ್ನೇಹಿತ ರಾಷ್ಟ್ರಗಳ ಸಶಸ್ತ್ರ ಪಡೆಗಳಿಗೆ ಮೂಲಸೌಕರ್ಯ ಒದಗಿಸುವುದು
ಪ್ರಧಾನ ಕಛೇರಿ: ನವದೆಹಲಿ
ಪೋಷಕ ಸಂಸ್ಥೆ: ರಕ್ಷಣಾ ಸಚಿವಾಲಯ
ಇದು 19 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ) ಮತ್ತು ಅಫ್ಘಾನಿಸ್ತಾನ್, ಭೂತಾನ್, ಮ್ಯಾನ್ಮಾರ್, ತಜಿಕಿಸ್ತಾನ್ ಮತ್ತು ಶ್ರೀಲಂಕಾದಂತಹ ನೆರೆಯ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಕಾರ್ಯಾಚರಣೆಗಳನ್ನು ಒಳಗೊಂಡಿದೆ.