ಆಕಾಶ್ ಎನ್ ಜಿ ಕ್ಷಿಪಣಿ
ಆಕಾಶ್ ಎನ್ ಜಿ ಕ್ಷಿಪಣಿ
ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾದ ಕರಾವಳಿಯ ಚಂಡೀಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ITR) ನಿಂದ ಹೊಸ ತಲೆಮಾರಿನ ಆಕಾಶ ಕ್ಷಿಪಣಿ ಎನ್ ಜಿಯ ಯಶಸ್ವಿ ಹಾರಾಟ ಪರೀಕ್ಷೆಯನ್ನು ನಡೆಸಿತು.
ಮುಖ್ಯಾಂಶಗಳು
• ಕಡಿಮೆ ಎತ್ತರದಲ್ಲಿ ಅತಿ ವೇಗದ ಮಾನವರಹಿತ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಗಿದೆ.
• ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ.
• ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ, ಲಾಂಚರ್, ಮಲ್ಟಿ-ಫಂಕ್ಷನ್ ರಾಡಾರ್ ಹಾಗೂ ಕಮಾಂಡ್, ಕಂಟ್ರೋಲ್, ಕಮ್ಯುನಿಕೇಷನ್ ಸಿಸ್ಟಂ ಸೇರಿದಂತೆ ಸಮಗ್ರ ವೆಪನ್ ಸಿಸ್ಟಂ ಅನ್ನು ಹೊಂದಿದೆ.
ಕ್ಷಿಪಣಿಯ ವಿವರ
• ಭೂ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಯಾಗಿದೆ.
• ಸುಮಾರು 60 ಕಿ.ಮೀ ದೂರದ ಗುರಿಗಳನ್ನು ಹೊಡೆಯಬಲ್ಲದು
• ಮ್ಯಾಕ್ 2.5 ರ ವೇಗದಲ್ಲಿ ಹಾರಬಲ್ಲದು.
• ಅಭಿವೃದ್ಧಿಪಡಿಸಿದವರು: ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್.