Published on: December 5, 2022

ಆನ್’ಲೈನಲ್ಲಿಯೇ ಬೆಳೆಗಳ ಖರೀದಿ

ಆನ್’ಲೈನಲ್ಲಿಯೇ ಬೆಳೆಗಳ ಖರೀದಿ

ಸುದ್ದಿಯಲ್ಲಿ ಏಕಿದೆ?

ಕರ್ನಾಟಕ ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್’ಲೈನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು ದೇಶದಲ್ಲಿಯೇ ಮೊದಲಾಗಿದೆ.

ಮುಖ್ಯಾಂಶಗಳು

 • ರಾಜ್ಯದ ಕೃಷಿ ಇಲಾಖೆ ರೈತರನ್ನು ಡಿಜಿಟಲೀಕರಣಗೊಳಿಸುತ್ತಿದ್ದು, 2023ರ ಏಪ್ರಿಲ್ 1 ರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತಾರಣಾ ಪ್ರಕ್ರಿಯೆ ಮಾಡುವುದು ಕಡ್ಡಾಯ ಮಾಡಿದೆ.
 • ನವೆಂಬರ್ 2022 ರಂದು ಸರ್ಕಾರ ಆದೇಶದ ಹೊಡಿಸಿತ್ತು. ಡಿಸೆಂಬರ್ 2022 ರ ಆರಂಭದಲ್ಲಿ, ಶಿವಮೊಗ್ಗ, ವಿಜಯಪುರ, ಚಿತ್ರದುರ್ಗ ಮತ್ತು ಮೈಸೂರು ನಾಲ್ಕು ಜಿಲ್ಲೆಗಳು ಆನ್’ಲೈನ್ ವಿತರಣೆ ಹಾಗೂ ಖರೀದಿ ಮಾಡುವ ಸೌಲಭ್ಯ ನೀಡಿತ್ತು, ಇದೀಗ ಜನವರಿ 1 ರಿಂದ ಪ್ರಾಯೋಗಿಕವಾಗಿ ಎಲ್ಲಾ 31 ಜಿಲ್ಲೆಗಳಲ್ಲಿ ಇದನ್ನು ಪ್ರಾರಂಭಿಸಲಾಗುತ್ತಿದ್ದು, ಏಪ್ರಿಲ್ 1, 2023 ರಿಂದ ಕಡ್ಡಾಯ ಮಾಡಲು ಮುಂದಾಗಿದೆ.
 • ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಸೇರಿದಂತೆ ಕೃಷಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಕಚೇರಿಗಳು – ಜಿಲ್ಲಾ ತರಬೇತಿ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು.
 • ಸಹಯೋಗ: ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಸಹಯೋಗದಲ್ಲಿ ಮಾಡಲಾಗುತ್ತಿದೆ. ಈ ಡಿಜಿಟಲೀಕರಣದೊಂದಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ 30 ಕ್ಕೂ ಹೆಚ್ಚು ಯೋಜನೆಗಳಿಂದ ಪ್ರಯೋಜನಗಳನ್ನು ರೈತರು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಉದ್ದೇಶ

 • ಇದು ಕೃಷಿ ಇಲಾಖೆಯಲ್ಲಿ ದಕ್ಷತೆಯನ್ನು ಸುಧಾರಿಸುವುದರ ಜೊತೆಗೆ ರೈತರಿಗೆ ಮತ್ತು ಮಾರಾಟಗಾರರಿಗೆ ಮಾಹಿತಿಗಳ ನಿರ್ವಹಿಸಲು ಸುಲಭ ಮತ್ತು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ.

ಅನುಕೂಲಗಳು

 • ಇ-ಫೈಲ್‌ಗಳನ್ನು ಅಳವಡಿಸಿಕೊಳ್ಳುವುದರಿಂದ ಅಧಿಕಾರಿಗಳ ದಕ್ಷತೆ ಸುಧಾರಿಸುತ್ತದೆ.
 • ಲೈವ್ ಡೇಟಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
 • ಇದು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಡಿಜಿಟಲ್ ವ್ಯವಸ್ಥೆ

 • “ರೈತರು ನಿರ್ದಿಷ್ಟ ರೈತ ಸಂಪರ್ಕ ಕೇಂದ್ರದಿಂದ ಬೀಜಗಳು ಅಥವಾ ರಸಗೊಬ್ಬರಗಳನ್ನು ಖರೀದಿಸಿದರೆ, ಈ ಉತ್ಪನ್ನಗಳಿಗೆ ಕ್ಯೂಆರ್ ಕೋಡ್ ಇರುತ್ತದೆ. ಸ್ಕ್ಯಾನಿಂಗ್ ಮೂಲಕ, ಯಾವ ರೈತರು ಯಾವ ಮಾರಾಟಗಾರರಿಂದ ಖರೀದಿಸಿದ್ದಾರೆ ಮತ್ತು ಖರೀದಿದಾರರ ವಿವರಗಳನ್ನು ಇದು ಸ್ಪಷ್ಟಪಡಿಸುತ್ತದೆ.
 • ಬೀಜಗಳು ಕಡಿಮೆ ಗುಣಮಟ್ಟದ್ದಾಗಿದ್ದರೆ ಇದು ಮೂಲತಃ ಮಾರಾಟಗಾರರನ್ನು ಜವಾಬ್ದಾರರನ್ನಾಗಿ ಮಾಡುತ್ತದೆ.

ಕಾರ್ಯನಿರ್ವಹಣೆ ಹೇಗೆ?  

 • ಪ್ರಸ್ತುತ, ಒಬ್ಬ ರೈತ ಬೀಜಗಳನ್ನು ಖರೀದಿಸಿದರೆ, ಆತ ಅದನ್ನು ರಿಜಿಸ್ಟರ್‌ನಲ್ಲಿ ನಮೂದಿಸಿ, ಸಹಿ ಮಾಡಬೇಕು. ಅಧಿಕಾರಿಗಳು ದತ್ತಾಂಶ ನಿರ್ವಹಣೆ ಮಾಡುವುದು ಬೇಸರದ ವಿಚಾರ. ಬಾರ್‌ಕೋಡ್ ವ್ಯವಸ್ಥೆಯೊಂದಿಗೆ ಇದು ಕಾಗದರಹಿತವಾಗಲಿದೆ. ರೈತರು ಅದನ್ನು ದೂರದಿಂದಲೇ ಮಾಡಬಹುದು.
 • ಬೆಳೆಗಳ ಸ್ಟಾಕ್ ದಾಖಲೆಗಳು, ಕಚೇರಿ ಸಭೆಗಳು, ಮಾಪನ ದಾಖಲೆಗಳು ಮತ್ತು ಇತರ ಎಲ್ಲಾ ಪ್ರಕ್ರಿಯೆಗಳ ನಡುವೆ ಫಲಾನುಭವಿಗಳಿಗೆ ವಿತರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು.
 • ರಾಜ್ಯದ ಕೃಷಿ ಇಲಾಖೆಯು 53 ಲಕ್ಷಕ್ಕೂ ಹೆಚ್ಚು ರೈತರ ಗುರುತಿನ ಚೀಟಿ (ಎಫ್‌ಐಡಿ)ಗಳನ್ನು ಹೊಂದಿದ್ದು, ಇವುಗಳನ್ನು ಆಧಾರ್ ಮತ್ತು ಭೂ ದಾಖಲೆಗಳಿಗೆ (ಪಹಣಿ) ಲಿಂಕ್ ಮಾಡಲಾಗಿದೆ.